ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಟ್ಟಡ. 
ಶಿವಮೊಗ್ಗ

ಸೇವಾನೂನ್ಯತೆ ಎಸಗಿದ ಕಂಪನಿಗೆ ದಂಡ ವಿಧಿಸಿದ ಆಯೋಗ | Consumer Court

ಪ್ರಮುಖ ಮುಖ್ಯಾಂಶಗಳು

  • ಆನ್‌ಲೈನ್‌ನಲ್ಲಿ ಸ್ಟೆತೋಸ್ಕೋಪ್ ಖರೀದಿಸಿದ್ದ ವೈದ್ಯೆ
  • 45 ದಿನದಲ್ಲಿ ಹಣ ಹಿಂದಿರುಗಿಸುವಂತೆ ಆದೇಶ
  • ಕಳಪೆ ಎಂಬ ಕಾರಣಕ್ಕೆ ಹಿಂದಿರುಗಿಸಿದ್ದ ಕಾರುಣ್ಯಾ
ಶಿವಮೊಗ್ಗ: ಗುಣಮಟ್ಟ ಸರಿ ಇಲ್ಲದ ಲಿಟ್‌ಮ್ಯಾನ್ ಸ್ಟೆತೋಸ್ಕೋಪ್(Littmann stethoscope) ನೀಡಿ ಸೇವಾನೂನ್ಯತೆ ಎಸಗಿದ ಖಾಸಗಿ ಆನ್‌ಲೈನ್(Online) ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದ್ದು, ವೈದ್ಯೆಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ.
ಶಿವಮೊಗ್ಗ ತಾಲೂಕಿನ ಗಾಜನೂರಿನ ಡಾ. ಜೆ.ಜೆ.ಕಾರುಣ್ಯಾ 2023ರ ನವೆಂಬರ್‌ನಲ್ಲಿ 10,024 ರೂ. ಪಾವತಿಸಿ ಆನ್‌ಲೈನ್ ಮೂಲಕ ಸ್ಟೆತೋಸ್ಕೋಪ್ ಖರೀದಿ(Purchase) ಮಾಡಿದ್ದರು. ಆದರೆ ಗುಣಮಟ್ಟ ಸರಿ ಇಲ್ಲದ ಕಾರಣ ವಾಪಾಸ್ ಮಾಡಿದ್ದರು. ಆದರೆ ಹಣ ವಾಪಸ್ ನೀಡಿರಲಿಲ್ಲ. ಈ ಬಗ್ಗೆ ಕಾರುಣ್ಯ ಅವರು ಸಲ್ಲಿಸಿದ ದೂರು ದಾಖಲಿಸಿಕೊಂಡ ಆಯೋಗ ಪ್ರಮಾಣಪತ್ರ ಮತ್ತು ದಾಖಲಾತಿ ಪರಿಶೀಲಿಸಿ ಸೇವಾನ್ಯೂನ್ಯತೆ(Inferiority) ಆಗಿದೆ ಎಂದು ತೀರ್ಮಾನಿಸಿ ದೂರನ್ನು ಭಾಗಶಃ ಪುರಸ್ಕರಿಸಿತ್ತು.
10,024 ರೂ.ಗೆ ವಾರ್ಷಿಕ ಶೇ. 9ರ ಬಡ್ಡಿ ಸೇರಿಸಿ 2025ರ ಏಪ್ರಿಲ್ನಿಂದ ಅನ್ವಯವಾಗುವಂತೆ ಆದೇಶವಾದ 45 ದಿನದೊಳಗೆ ದೂರುದಾರರಿಗೆ ಪಾವತಿಸಬೇಕು. ತಪ್ಪಿದ್ದಲ್ಲಿ ವಾರ್ಷಿಕ ಶೇ. 12ರ ಬಡ್ಡಿಯನ್ನು ಸೇರಿಸಿ ಪೂರ್ಣ ಹಣ ಪಾವತಿಸುವವರೆಗೆ ನೀಡುವಂತೆ ಹಾಗೂ ದೂರಿನ ಖರ್ಚು ವೆಚ್ಚಕ್ಕಾಗಿ 15 ಸಾವಿರ ರೂ. ಪರಿಹಾರವನ್ನು ಆದೇಶವಾದ 45 ದಿನದೊಳಗೆ ದೂರುದಾರರಿಗೆ ಪಾವತಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯ(Consumer dispute)ಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠ ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾರ್(Assistant Registrar) ಎಂ.ಟಿ.ಗಂಗಾಧರ ನಾಯ್ಕ ತಿಳಿಸಿದ್ದಾರೆ.