ಬಳ್ಳಿಗಾವಿ ಸಿಂದಗಿ ಶ್ರೀ ಶಾಂತವೀರೇಶ್ವರ ಆಶ್ರಮದಲ್ಲಿ ಲಿಂ. ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಪುಣ್ಯಸ್ಮರಣೋತ್ಸವದ ಕರಪತ್ರವನ್ನು ವಾಗೀಶಯ್ಯ ಶಾಸ್ತ್ರಿ ಹಿರೇಮಠ ಬಿಡುಗಡೆ ಮಾಡಿದರು. ಹರೀಶ್ ಶಾಸ್ತ್ರಿ, ಸರೋಜಮ್ಮ ತೋಟಪ್ಪಯ್ಯ ಇತರರಿದ್ದರು.
ಶಿರಾಳಕೊಪ್ಪ: ಸಮೀಪದ ಬಳ್ಳಿಗಾವಿ ಗ್ರಾಮದ ಸಿಂದಗಿ ಶ್ರೀ ಶಾಂತವೀರೇಶ್ವರ ಆಶ್ರಮದಲ್ಲಿ ಲಿಂ. ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಪುಣ್ಯ ಸ್ಮರಣೋತ್ಸವ ೆ.19ರಿಂದ 23ರವರೆಗೆ ಜರುಗಲಿದೆ ಎಂದು ಆಶ್ರಮದ ಸಂಸ್ಥಾಪಕ ಶ್ರೀ ವಾಗೀಶಯ್ಯ ಶಾಸ್ತ್ರಿ ಹಿರೇಮಠ ತಿಳಿಸಿದರು.
ಆಶ್ರಮದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಪುಣ್ಯಸ್ಮರಣೋತ್ಸವ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಶಿರಾಳಕೊಪ್ಪ ವಿರಕ್ತಮಠದ ಶ್ರೀ ವೀರಬಸವ ದೇವರು ಅವರಿಂದ ‘ಮಹಾತ್ಮರ ಜೀವನ ದರ್ಶನ’ ವಿಶೇಷ ಪ್ರವಚನ ನಡೆಯಲಿದೆ. ಖ್ಯಾತ ಕಲಾವಿದ ಮೆಹಬೂಬ್ ಸಾಬ್ ಹರ್ಲಾಪುರ ಹಾಗೂ ಉಡುಪಿಯ ಆರಾಧ್ಯ ರಾವ್ ತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಪ್ರತಿದಿನ ಶ್ರೀ ಸಿಂದಗಿ ಗುರುಗಳ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನೆರವೇರಲಿದೆ. ಸಾಮೂಹಿಕ ಸರಪತ್ರಯ ಮಂತ್ರಜಪ, ಸರ್ಪದೋಷ ನಿವಾರಣಾ ಪೂಜೆ, ಆಶ್ಲೇಷ ಬಲಿ, ನಾಗಮೂಲ ಮಂತ್ರ ಹೋಮ ಸೇರಿ ವಿವಿಧ ಪೂಜಾ ವಿಧಿಗಳು ನೆರವೇರಲಿವೆ. ಡಾ. ಬಿ.ಎಂ.ರಘುವೀರ್ ನೇತೃತ್ವದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಭಕ್ತರಿಗೆ ಪ್ರತಿದಿನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹರೀಶ್ ಶಾಸ್ತ್ರಿ, ಸರೋಜಮ್ಮ ತೋಟಪ್ಪಯ್ಯ ಹಿರೇಮಠ, ಚಂದ್ರಯ್ಯ ಶಾಸ್ತ್ರಿ, ಶಿವು ಶಾಸ್ತ್ರಿ, ಮಠದ ವಟುಗಳು ಸುದ್ದಿಗೋಷ್ಠಿಯಲ್ಲಿದ್ದರು.