ಯಡೇಹಳ್ಳಿಯಲ್ಲಿ ಅರಣ್ಯ ಜಾಗ ಒತ್ತುವರಿಯನ್ನು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ತೆರವುಗೊಳಿಸಿದರು.
ಆನಂದಪುರ: ಸಮೀಪದ ಯಡೇಹಳ್ಳಿಯಲ್ಲಿ ಶುಕ್ರವಾರ ಅರಣ್ಯ ಇಲಾಖೆ ಜಾಗ ಒತ್ತುವರಿಯನ್ನು ಅಧಿಕಾರಿಗಳು, ಸಿಬ್ಬಂದಿ ತೆರವುಗೊಳಿಸಿದ್ದಾರೆ.
ಸರ್ವೇ ನಂ.117ರಲ್ಲಿ ಯಡೇಹಳ್ಳಿ ಗ್ರಾಮದ ನಿವಾಸಿ ಕುಂಟೇಗೌಡ ಎಂಬುವರು ಸೋಲಾರ್ ಬೇಲಿ ನಿರ್ಮಿಸಿ, ಬಾಳೆ ಸಸಿ ನೆಟ್ಟು ಒತ್ತುವರಿ ಮಾಡಲು ಪ್ರಯತ್ನಿಸಿದ್ದರು. ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ತೆರವುಗೊಳಿಸಿ ಬೇಲಿ ಮತ್ತು ಬಾಳೆ ಸಸಿ ಕಿತ್ತು ಹಾಕಿದ್ದಾರೆ. ಚೋರಡಿ ವಲಯ ಅರಣ್ಯಾಧಿಕಾರಿ ಗೀತಾ ಅವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಚೇತನ್, ಗೌತಮಪುರ ಶಾಖೆಯ ಚಂದ್ರಶೇಖರ್, ಫಾರೆಸ್ಟರ್‌ಗಳಾದ ಪ್ರದೀಶ್, ವಿನಯ್, ಸೈಯದ್, ಸಿಬ್ಬಂದಿ ಸತ್ಯನಾರಾಯಣ, ಭೋಜಪ್ಪ, ಪ್ರವೀಣ, ಸತೀಶ್ ಕಾರ್ಯಾಚರಣೆಯಲ್ಲಿದ್ದರು.