crime 
ಶಿವಮೊಗ್ಗ

ಎರಡು ಗುಂಪುಗಳ ನಡುವೆ ಗಲಾಟೆ

ಟಿ.ಎಚ್.ಸಂತೋಷ್ ಕುಮಾರ್
ಭದ್ರಾವತಿ: ಜನ್ನಾಪುರದ ಮಲ್ಲೆಶ್ವರ ಸಮುದಾಯ ಭವನದಲ್ಲಿ ಭಾನುವಾರ ರಾತ್ರಿ ಸಂಗೀತ ಕಾರ್ಯಕ್ರಮ ನಡೆಯುವ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ನ್ಯೂಟೌನ್​ ಪೊಲೀಸ್​ ಠಾಣೆಯಲ್ಲಿ ದೂರು&ಪ್ರತಿದೂರು ದಾಖಲಾಗಿವೆ.
ಸ್ನೇಹಜೀವಿ ಬಳಗದ ಪೊಲೀಸ್​ ಉಮೇಶ್​, ಅಣ್ಣನ ಮಗ ಸುಹಾಸ್​ ಗೌಡ, ಮತ್ತೊಂದು ಬಣದ ಕಾಂಗ್ರೆಸ್​ ಕಾರ್ಯಕರ್ತರಾದ ದರ್ಶನ್​, ಪರಮೇಶ್​ ಗಾಯಗೊಂಡಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ಯಕ್ರಮದ ವೇದಿಕೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯ ಬಿ.ಎಸ್​.ಗಣೇಶ್​ ಹಾಗೂ ಕುಟುಂಬದವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಭೋಜನ ವ್ಯವಸ್ಥೆ ಒದಗಿಸಿದ್ದ ಪೊಲೀಸ್​ ಉಮೇಶ ಅವರನ್ನು ವೇದಿಕೆಗೆ ಬರುವಂತೆ ಹಾಗೂ ಸನ್ಮಾನ ಸ್ವೀಕರಿಸುವಂತೆ ಕಾರ್ಯಕ್ರಮದ ಸಂಟಕರು ಆಹ್ವಾನಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪೊಲೀಸ್​ ಉಮೇಶ್​, ನನಗೆ ಮೋಸ ಮಾಡಿದವರ ಜತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಬಿ.ಎಸ್​.ಗಣೇಶ್​ ಮತ್ತು ಕುಟುಂಬ ಸದಸ್ಯರು ವಿರೋಧ ವ್ಯಕ್ತಪಡಿಸಿ, ಇದು ರಾಜಕೀಯ ಕಾರ್ಯಕ್ರಮವಲ್ಲ. ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಆಗ ವೇದಿಕೆಯ ಮುಂಭಾಗದಲ್ಲಿದ್ದ ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಪೊಲೀಸ್​ ಉಮೇಶ್​ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ನಡೆದಿದೆ ಎನ್ನಲಾಗಿದೆ. ಗಲಾಟೆ ಬಿಡಿಸಲು ಹೋದ ಪೊಲೀಸ್​ ಸಿಬ್ಬಂದಿಗೂ ಗಾಯವಾಗಿದೆ. ದರ್ಶನ್​ ಎಂಬುವನನ್ನು ಬಂಧಿಸಲಾಗಿದೆ.