ಭದ್ರಾವತಿ ಸೈಲ್ನ ವಿಐಎಸ್ಎಲ್ ಕಾರ್ಖಾನೆ ಅಧಿಕಾರಿಗಳು, ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಿ. ವಿಶ್ವನಾಥ, ಅಮೃತ್ಕುಮಾರ್ ಮುಂತಾದವರಿದ್ದರು.
- ಭದ್ರಾ ಅತಿಥಿಗೃಹದಲ್ಲಿ ನಡೆದ ಸನ್ಮಾನ ಕಾರ್ಯಕ್ರಮ
- ವಿಐಎಸ್ಎಲ್ ಉದ್ಯೋಗಿಗಳ ಮಕ್ಕಳಿಗೆ ಪುರಸ್ಕಾರ '
ಭದ್ರಾವತಿ: ಸೈಲ್ನ ವಿಐಎಸ್ಎಲ್ ಸಂಸ್ಥೆಯು ಉದ್ಯೋಗಿಗಳ ಮಕ್ಕಳ ಶೈಣಿಕ ಸಾಧನೆ ಗುರುತಿಸಿ ಶುಕ್ರವಾರ ಸನ್ಮಾನಿಸಿತು. ಭದ್ರಾ ಅತಿಥಿಗೃಹದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ 2025&26ನೇ ಶೈಣಿಕ ವರ್ಷದಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವೀತಿಯ ಪಿಯುಸಿ ಪರೀೆಯಲ್ಲಿ ಶೇ.90 ಹಾಗೂ ಅದಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ ಒಟ್ಟು ಹತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಅನೂಪ್ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳ ಅತ್ಯುತ್ತಮ ಶೈಣಿಕ ಸಾಧನೆ ಅಭಿನಂದಿಸಿ, ಪ್ರಶಂಸಾ ಪತ್ರ ಹಾಗೂ ನಗದು ಬಹುಮಾನ ವಿತರಿಸಿದರು. ಮುಖ್ಯ ಮಹಾಪ್ರಬಂಧಕ ಬಿ.ವಿಶ್ವನಾಥ, ವಿಐಎಸ್ಎಸ್ ಕಾರ್ಮಿಕ ಸಂದ ಅಧ್ಯ ಅಮೃತ್ಕುಮಾರ್ ಮುಂತಾದವರಿದ್ದರು.