ಜಿಲ್ಲಾ ವಕೀಲರ ಸಂಘದ ನಾಲ್ಕನೇ ದಿನದ ಧರಣಿಯಲ್ಲಿ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಹಿರಿಯ ವಕೀಲ ಬಸಪ್ಪಗೌಡ, ಅಶೋಕ್ ಜಿ.ಭಟ್, ಕೆ.ಪಿ.ಶ್ರೀಪಾಲ್, ಕೆ.ಸಿ.ಬಸವರಾಜ್, ಡಿ.ಬಿ.ಚಂದ್ರಕುಮಾರ, ಸರೋಜಾ ಚಂಗೊಳ್ಳಿ ಇತರರಿದ್ದರು. 
ಶಿವಮೊಗ್ಗ

ಸಂಚಾರಿ ಪೀಠ ಸ್ಥಾಪನೆಗೆ ಮುಖ್ಯಮಂತ್ರಿ ಸಕರಾತ್ಮಕ ಸ್ಪಂದನೆ | Mobile bench

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವಂತೆ ಆಗ್ರಹ
  • ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪೀಠ ಸ್ಥಾಪನೆ ಅವಶ್ಯಕತೆ ಮನವರಿಕೆ
  • ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ ಹೇಳಿಕೆ
ಶಿವಮೊಗ್ಗ: ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ(Mobile bench) ಸ್ಥಾಪಿಸುವಂತೆ ಬುಧವಾರ ಮುಖ್ಯಮಂತ್ರಿ(Chief Minister) ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪೀಠ ಸ್ಥಾಪನೆ ಅವಶ್ಯಕತೆ ಮನವರಿಕೆ ಮಾಡಿ ಕೊಟ್ಟಿದ್ದು, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ ಹೇಳಿದರು. 
ವಕೀಲರ ಭವನ(Lawyer's House)ದ ಎದುರು ಜಿಲ್ಲಾ ವಕೀಲರ ಸಂಘದ ನಾಲ್ಕನೇ ದಿನದ ಧರಣಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಹೆಸರು ಕೈಬಿಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಆದರೆ ಶಿವಮೊಗ್ಗದಲ್ಲಿ ಪೀಠ ಸ್ಥಾಪನೆ ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸಿಲ್ಲ. ಜೂ.1ರಂದು ಸಿದ್ದರಾಮಯ್ಯ ಅವರನ್ನು ನಮ್ಮ ನಿಯೋಗ ಭೇಟಿಯಾಗಲಿದೆ ಎಂದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಹಿರಿಯ ವಕೀಲ ಬಸಪ್ಪಗೌಡ, ಅಶೋಕ್ ಜಿ.ಭಟ್, ಕೆ.ಪಿ.ಶ್ರೀಪಾಲ್, ಕೆ.ಸಿ.ಬಸವರಾಜ್, ಡಿ.ಬಿ.ಚಂದ್ರಕುಮಾರ, ಸರೋಜಾ ಚಂಗೊಳ್ಳಿ, ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಎಸ್.ವಿ.ರಾಜಮ್ಮ ಇತರರಿದ್ದರು.

ಕರವೇ ಸ್ವಾಭಿಮಾನ ಬಣದಿಂದ ಮನವಿ

ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು. ವಕೀಲರ ಸಂಘದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಬೈಕ್ ರ‌್ಯಾಲಿ ನಡೆಸಿದರು. ಜಿಲ್ಲಾಧ್ಯಕ್ಷ ಎಚ್.ಎಸ್.ಕಿರಣ್‌ಕುಮಾರ್, ಮುಜೀಬ್, ಅರವಿಂದ್, ಅನ್ವರ್ ಅಹಮ್ಮದ್, ಕೆ.ಬಿ.ನಾಗರಾಜ್ ಇತರರಿದ್ದರು. ಹಿಂದುಳಿದ ಜನ ಜಾಗೃತಿ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ, ಬೀದಿಬದಿ ವ್ಯಾಪಾರಸ್ಥರ ಸಂಘ, ಕರ್ನಾಟಕ ಆದಿ ಜಾಂಬವ ಸಂಘ ಸೇರಿ ವಿವಿಧ ಸಂಘಟನೆಗಳು ಧರಣಿಯಲ್ಲಿ ಪಾಲ್ಗೊಂಡಿದ್ದವು.