ಶಿಕಾರಿಪುರದಲ್ಲಿ ಛತ್ರಪತಿ ಶಿವಾಜಿ ಪುತ್ಥಳಿ ನಿರ್ಮಾಣಕ್ಕೆ ಶಾಸಕ ಬಿ.ವೈ.ವಿಜಯೇಂದ್ರ ಭೂಮಿಪೂಜೆ ನೆರವೇರಿಸಿದರು. ಶ್ರೀ ದಯಾನಂದಗಿರಿ ಸ್ವಾಮೀಜಿ, ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ, ಕೆ.ಎಸ್​.ಗುರುಮೂರ್ತಿ, ಗುರುರಾಜ್​ ಜಗತಾಪ್​, ದೇವರಾಜ್​ ಸಿಂಧೆ ಇತರರಿದ್ದರು. 
ಶಿವಮೊಗ್ಗ

ಛತ್ರಪತಿ ಶಿವಾಜಿ ಮಹಾರಾಜ ಹಿಂದವೀ ಸಮಾಜದ ಅಸ್ಮಿತೆ

ಪ್ರಮುಖ ಮುಖ್ಯಾಂಶಗಳು

  • ಶಿಕಾರಿಪುರದಲ್ಲಿ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ
  • ಶಾಸಕ ಬಿ.ವೈ.ವಿಜಯೇಂದ್ರ ಅಭಿಮತ
  • ಛತ್ರಪತಿ ಶಿವಾಜಿ ಮಹಾರಾಜ ಹಿಂದವೀ ಸಮಾಜದ ಅಸ್ಮಿತೆ
ಶಿಕಾರಿಪುರ: ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣ ಬಹಳ ವರ್ಷಗಳ ಕನಸು. ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಅವರು ಇಡೀ ದೇಶದ ಅಸ್ಮಿತೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಶಿವಗಿರಿ ಮಹಾ ಸಂಸ್ಥಾನ ಮಠ, ಶಿವಗಿರಿ ಮರಾಠ ಸಮಾಜ, ಶಿವಗಿರಿ ಚಾರಿಟೆಬಲ್​ ಟ್ರಸ್ಟ್​ ಹಾಗೂ ತಾಲೂಕು ಮರಾಠ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಶಿವಾಜಿ ಮಹಾರಾಜರು ಕೋಟ್ಯಂತರ ಯುವಕರ ಚೈತನ್ಯದ ಸಂಕೇತ. ಹಿಂದವೀ ಸಾಮ್ರಾಜ್ಯ ನಿರ್ಮಾಣಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ವೀರಪುರುಷ ಎಂದು ತಿಳಿಸಿದರು.
ಹಿಂದೂ ಸಮಾಜೋತ್ಥಾನ ಕಾರ್ಯದಲ್ಲಿ ಶಿವಾಜಿ ಮಹಾರಾಜರ ಕಾರ್ಯ ಅನನ್ಯ. ಪ್ರಧಾನಿ ಮೋದಿ ಅವರು ಶಿವಾಜಿ ಅವರ ಕಾರ್ಯಗಳಿಂದ ಸ್ಫೂರ್ತಿ ಪಡೆದು ಆಡಳಿತ ನಡೆಸುತ್ತಿದ್ದಾರೆ. ನೌಕಾಪಡೆಗೆ ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನಿರಿಸಿದ್ದಾರೆ. ಹಿಂದೂ ಸಮಾಜವನ್ನು ಒಗ್ಗೂಡಿಸುವಂಥದ್ದು ಶ್ರೇಷ್ಠ ಕಾರ್ಯ ಎಂದರು.
ಸಮಾಜ ಸಮಾಜಗಳ ನಡುವೆ ವಿಷ ಬೀಜ ಬಿತ್ತಿ ಸಂಟನೆಯನ್ನು ಸಡಿಲಗೊಳಿಸುವ ಕಾರ್ಯ ಅಮ್ಯ. ನಾವು ಯಾವತ್ತೂ ಜೋಡಿಸುವಂತಹ ಕೆಲಸ ಮಾಡಬೇಕು. ನಮಗೆ ಸಂಟಿತ ಪ್ರಯತ್ನ ಬಹಳ ಪ್ರಮುಖ. ಪ್ರತಿ ಸಮುದಾಯವೂ ಸಹ ಹಿಂದೂ ಸಮಾಜಕ್ಕೆ ಅನ್ಯರ್ ರತ್ನಗಳಿದ್ದಂತೆ ಎಂದು ಹೇಳಿದರು.
ಮರಾಠ ಅತ್ಯಂತ ಸ್ವಾಭಿಮಾನಿ, ದೇಶಭಕ್ತ ಹಾಗೂ ಪರಾಕ್ರಮಿ ಸಮಾಜ. ದೇಶಭಕ್ತಿ, ಶೌರ್ಯ, ಸಾಹಸ ಅನನ್ಯ. ಭಾರತದ ಹಿರಿಮೆಗೆ ಮರಾಠ ಸಮಾಜದ ಕೊಡುಗೆ ಸಾಕಷ್ಟಿದೆ. ಶಿವಾಜಿ ಮಹಾರಾಜರ ಪ್ರತಿಮೆಯೂ ಶಿಕಾರಿಪುರ ನಗರದ ಅಂದವನ್ನು ಹೆಚ್ಚಿಸುತ್ತದೆ. ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಸ್ಥಾಪನೆಯಾಗುವ ಕಾರಣ ಇನ್ನಷ್ಟು ಶೋಭೆ ತರಲಿದೆ ಎಂದು ಹೇಳಿದರು.
ಶಿಕಾರಿಪುರದ ಶಿವಗಿರಿ ಮಠದ ಶ್ರೀ ದಯಾನಂದಗಿರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಂಎಡಿಬಿ ಮಾಜಿ ಅಧ್ಯ ಕೆ.ಎಸ್​.ಗುರುಮೂರ್ತಿ, ತಾಲೂಕು ಮರಾಠ ಸಮಾಜದ ಗೌರವಾಧ್ಯ ಗುರುರಾಜ್​ ಜಗತಾಪ್​, ಜಿಲ್ಲಾ ಮರಾಠ ಒಕ್ಕೂಟದ ಅಧ್ಯ ದೇವರಾಜ್​ ಸಿಂಧೆ, ತಾಲೂಕು ಮರಾಠ ಸಮಾಜದ ಅಧ್ಯ ಗಣೇಶ್​ ರಾವ್​ ಕರಾಡೆ ಇತರರಿದ್ದರು.

ಧಾರ್ಮಿಕ ಚಿಂತನೆಗಳು ನಮ್ಮ ಮನಸ್ಸನ್ನು ಪರಿಶುದ್ಧಗೊಳಿಸುತ್ತವೆ. ಧರ್ಮವನ್ನು ನಾವು ಕಾಪಾಡಿದರೆ ಧರ್ಮವು ನಮಗೆ ನೆರಳಿನಂತೆ ಕಾಪಾಡುತ್ತದೆ. ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣ ಮರಾಠ ಸಮಾಜದ ಬಹಳ ದಿನದ ಕನಸು. ಇದೀಗ ನನಸಾಗುತ್ತಿದೆ. ಶಿವಾಜಿ ಮಹಾರಾಜರ ಹಾಗೆ ನಾವು ಈ ಮಣ್ಣಿನ ಸಂಸತಿ, ಸಂಸ್ಕಾರ, ಪರಂಪರೆಗಳನ್ನು ಉಳಿಸಿ ಬೆಳೆಸಬೇಕು.
ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ
ಗೋಸಾಯಿ ಮಠ, ಬೆಂಗಳೂರು

ಶಿವಾಜಿ ಮಹಾರಾಜರ ಪುತ್ಥಳಿ ಸೌಹಾರ್ದದ ಪ್ರತಿಕ. ಶಿಕಾರಿಪುರದಲ್ಲಿ ಮರಾಠ ಸಮಾಜದಿಂದ ಪುತ್ಥಳಿ ಪ್ರತಿಷ್ಠಾಪನೆ ಆಗುತ್ತಿರುವುದು ಇಡೀ ತಾಲೂಕಿಗೆ ಹೆಮ್ಮೆಯ ವಿಷಯ. ಸಮುದಾಯವು ಶಿಕಾರಿಪುರದ ಸಾಂಸತಿಕ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಸುದೀರ್ ಇತಿಹಾಸ ಹೊಂದಿದೆ. ಎಲ್ಲ ಸಮುದಾಯಗಳನ್ನು ಒಟ್ಟಾಗಿ ಕೊಂಡೊಯ್ಯುವ ಮೂಲಕ ತಾಲೂಕಿನಲ್ಲಿ ಸೌಹಾರ್ದದ ವಾತಾವರಣವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು.
> ಬಿ.ವೈ.ವಿಜಯೇಂದ್ರ, ಶಾಸಕ