ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಗೊಣ್ಣೆ ಹುಳುವಿನ ಸುಸ್ಥಿರ ನಿಯಂತ್ರಣ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ಬಿ.ಎಂ.ಪ್ರಸನ್ನ ಮಾತನಾಡಿದರು. ಡಾ. ಆರ್.ಸಿ.ಜಗದೀಶ್, ಎಚ್.ಎಸ್.ಶಶಾಂಕ್, ಡಾ. ಬಿ.ಹೇಮ್ಲಾನಾಯ್ಕಾ, ಎಚ್.ಡಿ.ದೇವಿಕುಮಾರ್ ಇದ್ದರು.
- ವಿಜ್ಞಾನಿ ಡಾ. ಬಿ.ಎಂ.ಪ್ರಸನ್ನ ಹೇಳಿಕೆ
- ಗೊಣ್ಣೆ ಹುಳು ನಿಯಂತ್ರಣ ಕುರಿತ ಸಮ್ಮೇಳನ
- ಕೀಟ ನಿರ್ವಹಣೆಗೆ ಸಮಗ್ರ ಪದ್ಧತಿ ಅಳವಡಿಕೆ ಅಗತ್ಯ
ಶಿವಮೊಗ್ಗ: ಗೊಣ್ಣೆ ಹುಳುಬಾಧೆಯನ್ನು ಸುಸ್ಥಿರವಾಗಿ ನಿಯಂತ್ರಿಸಲು ಸಮಗ್ರ ಕೀಟ ನಿರ್ವಹಣೆ ಪದ್ಧತಿ ಮತ್ತು ಬಹುವಾರ್ಷಿಕ ಯೋಜನೆ (plan) ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಏಷ್ಯಾ (asia) ದ ಸಿಐಎಂಎಂವೈಟಿ ವಿಶೇಷ ವಿಜ್ಞಾನಿ (scientist) ಡಾ. ಬಿ.ಎಂ.ಪ್ರಸನ್ನ ಸಲಹೆ ನೀಡಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಗೊಣ್ಣೆ ಹುಳುವಿನ ಸುಸ್ಥಿರ ನಿಯಂತ್ರಣ ಕುರಿತ ಅಂತಾರಾಷ್ಟ್ರೀಯ (international) ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಗೊಣ್ಣೆ ಹುಳು ಮೊದಲು ಕಂಡುಬಂದಿದ್ದು ಅಮೆರಿಕದಲ್ಲಿ. ನಂತರ 2016ರಲ್ಲಿ ಆಫ್ರಿಕಾದಲ್ಲಿ ಹೆಚ್ಚಿನ ಹಾನಿ ಮಾಡಿತ್ತು ಎಂದರು.
ಕೀಟಬಾಧೆ ಹತೋಟಿಗಾಗಿ ಸಮಗ್ರ ಕೀಟ ನಿರ್ವಹಣೆ ಹಾಗೂ ಬಹುವಾರ್ಷಿಕ ಯೋಜನೆಗಳನ್ನು ರೂಪಿಸಲು ಸ್ಥಳೀಯ, ರಾಜ್ಯ (state) ರಾಷ್ಟ್ರ, ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವ ಬಹಳ ಮುಖ್ಯ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಬೆಂಗಳೂರಿನ ಐಸಿಎಆರ್, ಎನ್‌ಬಿಎಐಆರ್‌ನ ನಿರ್ದೇಶಕ ಡಾ. ಎಸ್.ಎನ್.ಸುನಿಲ್ ಮಾತನಾಡಿ, ಗೊಣ್ಣೆ ಹುಳು ಸೇರಿ ಕೀಟಗಳನ್ನು ನಿರ್ವಹಿಸಲು ಪರಿಸರ (nature) ತನ್ನದೇ ಆದ ವ್ಯವಸ್ಥೆಯನ್ನು ಹೊಂದಿದೆ. ಆದರೆ ನಾವು ಅದಕ್ಕೆ ಅವಕಾಶ ನೀಡದೆ ಅನವಶ್ಯಕವಾಗಿ ಹಲವಾರು ಕೀಟನಾಶಕಗಳನ್ನು ಬಳಸುತ್ತೇವೆ. ಇದರಿಂದ ಸ್ವಾಭಾವಿಕ ಪರಿಸರ ವ್ಯವಸ್ಥೆ ಹಾಳಾಗುತ್ತಿದೆ ಎಂದರು.
ಪರಿಸರದ ವ್ಯವಸ್ಥೆಯನ್ನು ಕಾಪಾಡುವುದು ಅತಿ ಅವಶ್ಯಕ. ಜೈವಿಕ ಸರಪಳಿ ಬೆಳೆಯಲು ಬಿಡಬೇಕು. ಬೆಳೆಗಳನ್ನು ಯಾವುದೇ ರಾಸಾಯನಿಕ, ಕೀಟನಾಶಕಗಳನ್ನು ಹಾಕದೆ ಬೆಳೆಯಬಹುದು. ಪರಿಸರವು ಕೀಟ ನಿಯಂತ್ರಣಕ್ಕೆ ತನ್ನದೇ ಆದ ವ್ಯವಸ್ಥೆ ಹೊಂದಿದೆ. ಆ ಪ್ರಕ್ರಿಯೆಗೆ ಅವಕಾಶ ನೀಡಬೇಕು. ರೈತರು ಅನವಶ್ಯಕವಾಗಿ ಆತಂಕಕ್ಕೀಡಾಗಿ ಅತ್ಯಧಿಕ ರಾಸಾಯನಿಕ ಬಳಕೆ ಮಾಡುವುದಕ್ಕೆ ಮುಂದಾಗುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೊಣ್ಣೆ ಹುಳು ನಿಯಂತ್ರಣ ಕುರಿತ ಕೈಪಿಡಿ ಬಿಡುಗಡೆ ಮಾಡಲಾಯಿತು. ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ವಿವಿಯ ಶಿಕ್ಷಣ ನಿರ್ದೇಶಕ ಡಾ.ಬಿ.ಹೇಮ್ಲಾನಾಯ್ಕಾ, ವಿವಿ ಆಡಳಿತ ಮಂಡಳಿ ನಿರ್ದೇಶಕ ಎಚ್.ಡಿ.ದೇವಿಕುಮಾರ್, ಎಚ್.ಎಸ್.ಶಶಾಂಕ್ ಮುಂತಾದವರಿದ್ದರು.
ಜೈವಿಕ ವಿಧಾನ ಬಳಕೆ ಸೂಕ್ತ
ರಾಸಾಯನಿಕ ಕೀಟನಾಶಕಗಳನ್ನು ಬಳಸದೆ ಕೀಟ ನಿಯಂತ್ರಿಸಲು ಹಲವಾರು ವಿಧಾನಗಳಿವೆ. ಜೈವಿಕ ನಿಯಂತ್ರಣ ವಿಧಾನಗಳು, ಜೈವಿಕ ಕೀಟನಾಶಕಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬಹುದು. ಸಮಗ್ರವಾಗಿ ಕೀಟ ನಿರ್ವಹಣಾ ಕ್ರಮಗಳನ್ನು ಅನುಸರಿಸುವ ಮೂಲಕ ಕೀಟ ಬಾಧೆ ಹತೋಟಿಗೆ ತರಬೇಕು ಎಂದು ಡಾ. ಎಸ್.ಎನ್.ಸುನಿಲ್ ಹೇಳಿದರು. ವಿಶ್ವದಲ್ಲಿ ವಿವಿಧ ದೇಶಗಳು ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಸಾಕಷ್ಟು ಖರ್ಚು ಮಾಡುತ್ತಿವೆ. ಚೀನಾ ತನ್ನ ಜಿಡಿಪಿಯ ಶೇ.2.1ರಷ್ಟು, ಇಸ್ರೇಲ್ ಶೇ.3.4, ಅಮೆರಿಕ 6.8, ದಕ್ಷಿಣ ಕೊರಿಯಾ ಶೇ.4.6, ಭಾರತ ಶೇ.6ರಷ್ಟು ಖರ್ಚು ಮಾಡುತ್ತದೆ ಎಂದು ತಿಳಿಸಿದರು.
ವಿವಿಯಿಂದ ಹಲವು ಪ್ರಯೋಗ
ಮೆಕ್ಕೆಜೋಳ, ಭತ್ತ, ಅಡಕೆ ಮತ್ತು ಶುಂಠಿ ಕೃಷಿ ವಿವಿಯ ವ್ಯಾಪ್ತಿಯ ಮುಖ್ಯ ಬೆಳೆಗಳಾಗಿವೆ. ಈ ಬೆಳೆಗಳಿಗೆ ಕಾಡುವ ಗೊಣ್ಣೆಹುಳು ನಿಯಂತ್ರಣಕ್ಕೆ 2018ರಿಂದ ವಿಶ್ವವಿದ್ಯಾಲಯ ಹಲವಾರು ಪ್ರಯೋಗಗಳನ್ನು ಮಾಡಿದೆ. ಹುಳು ಬಾಧೆ ಕಡಿಮೆಯಾಗುತ್ತಿದೆ. ಈ ಕುರಿತು ಅತ್ಯುತ್ತಮ ಪ್ರಬಂಧಗಳನ್ನು ಪ್ರಕಟಿಸಲಾಗಿದೆ. ಇತ್ತೀಚಿನ ಸಂಶೋಧನೆಗಳು ಹುಳು ನಿಯಂತ್ರಣಕ್ಕೆ ಸಹಕಾರಿಯಾಗಲಿವೆ ಎಂಬ ಭರವಸೆಯಿದೆ. ಗೊಣ್ಣೆ ಹುಳು ಸೇರಿ ಕೀಟಗಳ ನಿಯಂತ್ರಣದಲ್ಲಿ ಸರ್ಕಾರಿ ಸಂಸ್ಥೆಗಳು ಮಾತ್ರವಲ್ಲ, ಖಾಸಗಿ ಸಂಸ್ಥೆಗಳು, ವಿದ್ಯಾರ್ಥಿಗಳು, ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಯೋಗ ಬೇಕು. ಪರಿಸರ ವ್ಯವಸ್ಥೆ ಹಾಳಾಗದಂತೆ ಕೀಟ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಕೀಟಶಾಸ್ತ್ರಜ್ಞರಿಗೆ ಎಲ್ಲರೂ ಅಭಿನಂದನೆ ಸಲ್ಲಿಸಬೇಕೆಂದು ಕುಲಪತಿ ಡಾ. ಆರ್.ಸಿ.ಜಗದೀಶ್ ಹೇಳಿದರು.
ಕಳೆದ ಆರೇಳು ವರ್ಷಗಳಿಂದ ಭಾರತದಲ್ಲಿ ಈ ಹುಳುವಿನ ಬಾಧೆ ಕಾಡುತ್ತಿದೆ. ನಿಯಂತ್ರಣಕ್ಕೆ ಬಳಸಲಾಗುತ್ತಿರುವ ರಾಸಾಯನಿಕ ಕೀಟನಾಶಕಗಳಿಂದ ಪರಿಸರ ವ್ಯವಸ್ಥೆಗೆ ಹಾನಿಯಾಗುತ್ತಿದೆ. ಆದ್ದರಿಂದ ಸಮಗ್ರ ಕೀಟ ನಿರ್ವಹಣೆ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಬೇಕು.