ಶಿವಮೊಗ್ಗ ವೀರಶೈವ ಸಾಂಸ್ಕೃತಿಕ ಭವನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವವನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಸ್ವಾಮೀಜಿ, ಶ್ರೀ ರಾಚೋಟೇಶ್ವರ ಸ್ವಾಮೀಜಿ, ಟಿ.ಬಿ.ಈಶ್ವರಯ್ಯ, ಮಹಾಲಿಂಗಯ್ಯ ಶಾಸ್ತ್ರಿ, ಹನುಮಂತಪ್ಪ, ಎಚ್.ಎಲ್.ಲಿಂಗರಾಜು, ಎಂ.ಸಿ.ಚಿನ್ನಯ್ಯ, ಚೇತನ್ ಹಿರೇಮಠ, ಎಚ್.ಬಿ.ಪ್ರದೀಪ ಚಂದ್ರ, ಮೃತ್ಯುಂಜಯ ಶಾಸ್ತ್ರಿ, ಟಿ.ಬಿ.ಸೋಮಶೇಖರಯ್ಯ ಇದ್ದರು.
- ಸಹಕಾರ ಸಂಘಗಳು ಕೇವಲ ಹಣದ ವ್ಯವಹಾರ ನಡೆಸುವ ಕೇಂದ್ರಗಳಲ್ಲ
- ಜಗದ್ಗುರು ಪಂಚಾಚಾರ್ಯ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ
- ಶಿವಮೊಗ್ಗದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿಕೆ
ಶಿವಮೊಗ್ಗ: ಸಹಕಾರ ಸಂಘ(Cooperative Society)ಗಳು ಎಂಬುದು ಕೇವಲ ಹಣದ ವ್ಯವಹಾರ ನಡೆಸುವ ಕೇಂದ್ರಗಳಲ್ಲ. ನಂಬಿಕೆ, ವಿಶ್ವಾಸ ಮತ್ತು ಸಾಮೂಹಿಕ ಶಕ್ತಿ ಮೇಲೆ ನಡೆಯುವುದಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ಜೆ.ಎಚ್.ಪಟೇಲ್ ಬಡಾವಣೆಯ ಶ್ರೀ ವೀರಶೈವ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಶ್ರೀ ಜಗದ್ಗುರು ಪಂಚಾಚಾರ್ಯ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ(Silver Jubilee) ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಸಹಕಾರ ಕ್ಷೇತ್ರದಲ್ಲಿ ಬದಲಾವಣೆ ಆಗುತ್ತಿವೆ. ವಿಶೇಷವಾಗಿ ಕೇಂದ್ರ ಸರ್ಕಾರ(Centrol govt)ನಾನಾ ಯೋಜನೆಗಳ ಮೂಲಕ ಸಹಕಾರ ಸಂಘಗಳಿಗೆ ಸಾಕಷ್ಟು ಹಣವನ್ನು ನೀಡುತ್ತಿದೆ. ಅದರಲ್ಲೂ ಕೇಂದ್ರ ಗೃಹ ಸಚಿವ ಅಮಿತ್ ಷಾ(Amit shah) ಅವರೇ ಸಹಕಾರ ಖಾತೆಯನ್ನು ವಹಿಸಿಕೊಂಡ ಬಳಿಕ ಪಾರದರ್ಶಕತೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ ಎಂದರು.
ಒಂದು ಕಾಲದಲ್ಲಿ ಹೂಡಿಕೆಯು ರಾಷ್ಟ್ರೀಕೃತ ಬ್ಯಾಂಕ್(Nationalized bank)ಗಳಿಂತ ಹೆಚ್ಚು ಸಹಕಾರ ಸಂಘಗಳಲ್ಲೇ ಹೆಚ್ಚಿತ್ತು. ಆದರೆ ಅಲ್ಲಲ್ಲಿ ಅವ್ಯವಹಾರಗಳು ನಡೆದು ಇಡೀ ಸಹಕಾರ ಕ್ಷೇತ್ರಕ್ಕೆ ಕೆಟ್ಟ ಹೆಸರು ಬಂದಿತ್ತು. ಆದರೆ ಕೇಂದ್ರ ಸರ್ಕಾರ ಪ್ರತ್ಯೇಕ ಖಾತೆಯನ್ನು ತೆರೆಯುವ ಮೂಲಕ ಸಹಕಾರ ಕ್ಷೇತ್ರಕ್ಕೆ ವಿಶೇಷ ಗಮನ ಹರಿಸಿದೆ. ಸಹಕಾರ ಸಂಘಗಳು ಏಳಿಗೆಯು ದೇಶದ ಅಭಿವೃದ್ಧಿಗೆ ಪೂರಕವಾಗಿರಲಿದೆ ಎಂದರು.
ಆಡಳಿತ ಮಂಡಳಿ, ಠೇವಣಿದಾರು ಒಳಗೊಂಡಂತೆ ಎಲ್ಲರ ಶಕ್ತಿ ಮತ್ತು ಪ್ರಯೋಗದಿಂದ ಪಂಚಾಚಾರ್ಯ ಸಹಕಾರ ಸಂಘದ ರಜತ ಮಹೋತ್ಸವ ಸಾಧ್ಯವಾಗಿದೆ. ಮುಂದೆ ಸಮಾಜಮುಖಿ ಕೆಲಸಗಳ ಮೂಲಕ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿ ಸುವರ್ಣ ಮಹೋತ್ಸವವನ್ನೂ ಆಚರಿಸುವಂತೆ ಆಗಲಿ ಆಶಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ ಮಾತನಾಡಿದರು. ಉಜ್ಜಯಿನಿ ಪೀಠದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಿದ್ದರು. ಹೊನ್ನಾಳಿ ಹಿರೇಮಠದ ಶ್ರೀ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಸಾಲೂರು ಹಿರೇಮಠದ ಗುರುಲಿಂಗ ಜಂಗಮ ಸ್ವಾಮೀಜಿ, ಬಿಳಕಿ ಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಸಂಘದ ಅಧ್ಯಕ್ಷ ಟಿ.ಬಿ.ಈಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಮಹಾಲಿಂಗಯ್ಯ ಶಾಸ್ತ್ರಿ, ಹನುಮಂತಪ್ಪ, ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಶ್ರೀನಿವಾಸ್, ಸಂಘದ ಉಪಾಧ್ಯಕ್ಷ ಎಚ್.ಎಲ್.ಲಿಂಗರಾಜು, ನಿರ್ದೇಶಕರಾದ ಎಂ.ಸಿ.ಚಿನ್ನಯ್ಯ, ಚೇತನ್ ಹಿರೇಮಠ, ಎಚ್.ಬಿ.ಪ್ರದೀಪ ಚಂದ್ರ, ಮೃತ್ಯುಂಜಯ ಶಾಸ್ತ್ರಿ, ಟಿ.ಬಿ.ಸೋಮಶೇಖರಯ್ಯ ಮತ್ತಿತರರು ಉಪಸ್ಥಿತರಿದ್ದರು.