ಸೊರಬ ಚಂದ್ರಗುತ್ತಿ ಕಬಡ್ಡಿ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಚಂದ್ರಗುತ್ತಿ ಮಹಾಗಣಪತಿ ತಂಡ. 
ಶಿವಮೊಗ್ಗ

ಚಂದ್ರಗುತ್ತಿ ಮಹಾಗಣಪತಿ ತಂಡ ಪ್ರಥಮ

ಟಿ.ಎಚ್.ಸಂತೋಷ್ ಕುಮಾರ್
ಸೊರಬ: ಚಂದ್ರಗುತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರೀ ರೇಣುಕಾಂಬ ಬಾಯ್ಸನಿಂದ 3ನೇ ವರ್ಷದ ಚಂದ್ರಗುತ್ತಿ ಕಬಡ್ಡಿ ಪ್ರೀಮಿಯರ್ ಲೀಗ್ ಪಂದ್ಯಾವಳಿ ನಡೆಯಿತು. ಹೊನಲು-ಬೆಳಕಿನ ಕಬಡ್ಡಿ ಲೀಗ್ ಪಂದ್ಯಾವಳಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ಮರಡಿ ಚಾಲನೆ ನೀಡಿದರು.
ಕಬಡ್ಡಿ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಆರು ತಂಡಗಳು ಪಾಲ್ಗೊಂಡಿದ್ದವು. ಚಂದ್ರಗುತ್ತಿ ಮಹಾಗಣಪತಿ ತಂಡ ಪ್ರಥಮ, ಸಿಜಿಟಿ ಎಕ್ಸ್‌ಪ್ರೆಸ್ ತಂಡ ದ್ವಿತೀಯ ಬಹುಮಾನ ಗಳಿಸಿತು. ವಿಜೇತ ತಂಡಗಳಿಗೆ ನಗದು ಬಹುಮಾನ, ಟ್ರೋಫಿ ನೀಡಲಾಯಿತು. ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಮತ್ತು ಉಳಿದ ತಂಡಗಳಿಗೆ ಸಮಾಧಾನಕರ ಟ್ರೋಫಿ ನೀಡಲಾಯಿತು.
ರಾಜ್ಯಮಟ್ಟದ ತಂಡ ಪ್ರತಿನಿಧಿಸಿರುವ ನಿತೀಶ್ ಹೊರಬೈಲು, ಗ್ರಾಮೀಣ ಕ್ರೀಡಾಪಟುಗಳಾದ ಮುಬಾರಕ್, ಅರವಿಂದ, ಸಂಪತ್ ಅವರನ್ನು ಗುರುತಿಸಿ ವಿಶೇಷ ಬಹುಮಾನ ವಿತರಿಸಲಾಯಿತು. ನಾಗರಾಜ್, ಅಭಿ ಇತರರಿದ್ದರು.