ಶಿರಾಳಕೊಪ್ಪ ಪಟ್ಟಣದ ಬಸ್​ ನಿಲ್ದಾಣದ ವೃತ್ತದಲ್ಲಿ ಅಳವಡಿಸಿರುವ ಆಧುನಿಕ ಸಿಸಿ ಕ್ಯಾಮರಾ. 
ಶಿವಮೊಗ್ಗ

ಅಪರಾಧಿಗಳ ಪತ್ತೆ ಹಚ್ಚುವಲ್ಲಿ ನೆರವಾಗುತ್ತಿರುವ ಸಿಸಿ ಕ್ಯಾಮರಾ

ಶಿರಾಳಕೊಪ್ಪ: ಅಪರಾಧ ತಡೆಯುವ ನಿಟ್ಟಿನಲ್ಲಿ ಶಿರಾಳಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು, ಪಟ್ಟಣದಲ್ಲಿ ನಡೆಯುವ ಚಲವನಗಳ ಮೇಲೆ ಪೊಲೀಸ್​ ಇಲಾಖೆ ವಿಶೇಷ ಕಣ್ಣಿಟ್ಟಿದೆ. ಸಿಸಿ ಕ್ಯಾಮರಾ ಅಳವಡಿಕೆ ಅಪರಾಧಿಗಳ ಪತ್ತೆ ಹಚ್ಚುವಲ್ಲಿ ನೆರವಾಗುತ್ತಿದೆ.
ಪಟ್ಟಣದ ಮುಖ್ಯ ಬಸ್​ ನಿಲ್ದಾಣ, ಆನವಟ್ಟಿ ವೃತ್ತ್ತ, ಹಳೂರು ವೃತ್ತ, ಸಂತೆ ಮಾರುಕಟ್ಟೆ, ಸರ್ಕಾರಿ ಆಸ್ಪತ್ರೆ ವೃತ್ತ ಸೇರಿ 34ಕ್ಕೂ ಹೆಚ್ಚು ಸೂಕ್ಷ$್ಮ ಸ್ಥಳಗಳಲ್ಲಿ ಸ್ಮಾರ್ಟ್​ ಕ್ಯಾಮರಾ ಅಳವಡಿಸಲಾಗಿದೆ. ಅಪರಾಧ ಟನೆಗಳ ದೃಶ್ಯ ಪರಿಶೀಲನೆ ಜತೆಯಲ್ಲಿ ಪಟ್ಟಣದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಮೇಲೆ ನಿರಂತರ ನಿಗಾ ಇರಿಸಿ ಅಪರಾಧ ತಡೆಗೂ ನೆರವಾಗಿದೆ.
ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಅಳವಡಿಸಿರುವ 324ಕ್ಕೂ ಹೆಚ್ಚು ಖಾಸಗಿ ಕ್ಯಾಮರಾಗಳ ದೃಶ್ಯಾವಳಿಗಳನ್ನೂ ಅಗತ್ಯ ಇದ್ದಾಗ ಪೊಲೀಸ್​ ಇಲಾಖೆ ತನಿಖೆಗೆ ಬಳಸಿಕೊಳ್ಳುತ್ತಿದೆ. ಪಟ್ಟಣದ ಎಲ್ಲ ಕ್ಯಾಮರಾಗಳ ದೃಶ್ಯಾವಳಿಗಳನ್ನು ಠಾಣೆಯಲ್ಲೇ ಕುಳಿತು ವೀಸುವ ವ್ಯವಸ್ಥೆ ಮಾಡಲಾಗಿದೆ. ಟನಾ ಸ್ಥಳಕ್ಕೆ ತೆರಳುವ ಮುನ್ನ ಪೊಲೀಸರಿಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಅಪರಾಧಿಗಳ ವಾಹನ, ಉಡುಪು ಹಾಗೂ ಚಲನವಲನದ ವಿವರಗಳು ತನಿಖೆಗೆ ಮಹತ್ವದ ಸುಳಿವು ಆಗುವುದರಿಂದ ಹಲವು ಪ್ರಕರಣಗಳ ಆರೋಪಿಗಳನ್ನು ಪತ್ತೆಹಚ್ಚಲು ನೆರವಾಗಿದೆ.
ಲೋಕಸಭಾ ಸದಸ್ಯ ಬಿ.ವೈ.ರಾವೇಂದ್ರ ಅವರ ಸ್ಥಳಿಯ ಪ್ರದೇಶಾಭಿವೃದ್ಧಿ ಹಾಗೂ ಪುರಸಭೆ ನಿಧಿಯಿಂದ ಲಾಂತರ ರೂ. ವೆಚ್ಚದಲ್ಲಿ ವ್ಯವಸ್ಥೆ ಜಾರಿಗೊಂಡಿದೆ. ಇನ್ನೂ ಕೆಲ ಪ್ರಮುಖ ಸ್ಥಳಗಳಲ್ಲಿ ಕ್ಯಾಮರಾ ಅಳವಡಿಕೆಗೆ ಪೊಲೀಸ್​ ಇಲಾಖೆ ಮನವಿ ಸಲ್ಲಿಸಿದೆ. ಶಿರಾಳಕೊಪ್ಪದಲ್ಲಿ ಈಗ ಪೊಲೀಸರ ಗಸ್ತಿನ ಜತೆಗೆ ತಂತ್ರಜ್ಞಾನದ ಕಾವಲು ಜತೆಗೂಡಿದೆ. ಕತ್ತಲಲ್ಲಿ ಕಣ್ಣಿಗೆ ಬೀಳದೆ ಪರಾರಿ ಆಗಬಹುದೆಂಬ ಭಾವನೆಯಲ್ಲಿರುವವರು ಕ್ಯಾಮರಾ ಕಣ್ಗಾವಲಿನಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ.
ಶಿರಾಳಕೊಪ್ಪ ಪಟ್ಟಣದ ಸುರಕ್ಷೆ ದೃಷ್ಟಿಯಿಂದ ಪ್ರಮುಖ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಠಾಣಾ ವ್ಯಾಪ್ತಿ ಗ್ರಾಮಗಳ ಆಯಕಟ್ಟಿನ ಸ್ಥಳಗಳಲ್ಲಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಇದು ಅಪರಾಧ ತಡೆ ಮತ್ತು ಶ್ರೀ ಪತ್ತೆಗೆ ಸಹಕಾರಿಯಾಗಲಿದೆ.
> ಪ್ರಶಾಂತ್​, ಸಬ್​ಇನ್​ಸ್ಪೆಕ್ಟರ್​
ಶಿರಾಳಕೊಪ್ಪ ಪಟ್ಟಣದಲ್ಲಿ ಅಳವಡಿಸಿರುವಂತೆ ಗ್ರಾಮಗಳಲ್ಲೂ ಸಹ ಅತ್ಯಾಧುನಿಕ ಸಿಸಿ ಕ್ಯಾಮರಾ ಅಳವಡಿಸುವ ಅವಶ್ಯಕತೆ ಇದೆ. ಗ್ರಾಮಗಳಲ್ಲಿ ನಡೆಯುತ್ತಿರುವ ಅಡಿಕೆ, ಜೋಳ, ಜಾನುವಾರುಗಳ ಕಳ್ಳತನ ತಡೆಯಲು ಸಹಕಾರಿಯಾಗುತ್ತದೆ.
> ವೀರೇಶ್​ ಪಾಟೀಲ್​, ಮ್ಯಾಮ್ಕೋಸ್​ ನಿರ್ದೇಶಕ