- ಸವಾರರು ಹೆಲ್ಮೆಟ್ ಧರಿಸದಿದ್ದರೆ ದಂಡ
- ಡಿವೈಎಸ್ಪಿ ಡಾ. ಬೆನಕಪ್ರಸಾದ್ ಎಚ್ಚರಿಕೆ
- 500ಕ್ಕೂ ಹೆಚ್ಚು ಜನರ ಮೇಲೆ ಕೇಸ್
ಸಾಗರ: ಪಟ್ಟಣ ವ್ಯಾಪ್ತಿಯಲ್ಲಿ ಐಟಿಎಂಎಸ್ ತಂತ್ರಜ್ಞಾನ ಜಾರಿಯಲ್ಲಿದೆ. ಹೆಲ್ಮೆಟ್ ಧರಿಸುವುದು ಸೇರಿ ದ್ವಿಚಕ್ರ ವಾಹನ ಸವಾರರು ಕಾನೂನು ಪಾಲಿಸುವುದು ಕಡ್ಡಾಯ. ಕಾನೂನು ಮೀರಿ ವಾಹನ ಚಲಾಯಿಸಿದರೆ ಜಿಪಿಎಸ್ ಮೂಲಕ ೋಟೋ ತೆಗೆದು ವಾಹನ ಮಾಲೀಕರ ಮೊಬೈಲ್ಗೆ ದಂಡದ ರಸೀದಿ ಕಳುಹಿಸಲಾಗುವುದು ಎಂದು ಡಿವೈಎಸ್ಪಿ ಡಾ. ಬೆನಕ ಪ್ರಸಾದ್ ಮಾಹಿತಿ ನೀಡಿದರು.
ಸಾಗರ ಪಟ್ಟಣ ಠಾಣೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಕ್ ಚಾಲನೆ ಮಾಡುವಾಗ ಅಪಘಾತವಾದರೆ ನಿಮ್ಮನ್ನು ನಂಬಿಕೊಂಡ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ. ವೇಗದ ಚಾಲನೆ, ಟ್ರಿಪಲ್ ರೈಡಿಂಗ್, ಸೀಟ್ಬೆಲ್ಟ್ ಹಾಕದೆ ಕಾರು ಚಾಲನೆ ಸೇರಿ ಬೇರೆಬೇರೆ ಪ್ರಕರಣದಲ್ಲಿ ದಂಡ ವಿಧಿಸಲಾಗುತ್ತದೆ. ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಇಲಾಖೆ ಮೂಲಕ ಈ ಕಾರ್ಯಕ್ರಮ ಜಾರಿಯಿದೆ ಎಂದು ತಿಳಿಸಿದರು.
ಐಟಿಎಂಎಸ್ ಮೂಲಕ ದಂಡ ಹಾಕುವ ಕಾನೂನು ಸ್ಮಾರ್ಟ್ ಸಿಟಿ ಶಿವಮೊಗ್ಗದಲ್ಲಿ ಜಾರಿಯಲ್ಲಿತ್ತು. ಜಿಲ್ಲಾ ರಣಾಧಿಕಾರಿ ಸೂಚನೆ ಮೇರೆಗೆ ಸಾಗರದಲ್ಲೂ ಜಾರಿಗೆ ತರಲಾಗಿತ್ತು. ಈತನಕ 500ಕ್ಕೂ ಹೆಚ್ಚು ಜನರ ಮೇಲೆ ಕೇಸ್ ಹಾಕಲಾಗಿದೆ. ದಂಡ ಹಾಕಿಸಿಕೊಂಡ ದ್ವಿಚಕ್ರ ವಾಹನ ಸವಾರರು ಮೊಬೈಲ್ ಮೂಲಕ ಆನ್ಲೈನ್ನಲ್ಲಿ ಅಥವಾ ಠಾಣೆಗೆ ಬಂದು ಪಾವತಿಸಲು ಅವಕಾಶವಿದೆ. ಅಪ್ರಾಪ್ತರಿಗೆ ಯಾವುದೇ ವಾಹನ ಚಾಲನೆಗೆ ಪಾಲಕರು ಅವಕಾಶ ಕೊಟ್ಟರೆ ಪಾಲಕರನ್ನು ಜೈಲಿಗೆ ಕಳುಹಿಸುವ ಕಾನೂನು ಇದೆ ಎಂದು ಎಚ್ಚರಿಸಿದರು.
ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಜಾನುವಾರುಗಳನ್ನು ರಾತ್ರಿ ವೇಳೆ ಕೊಟ್ಟಿಗೆಯಲ್ಲಿ ಕಟ್ಟಿಕೊಳ್ಳಬೇಕು. ಗ್ರಾಮೀಣ ಪ್ರದೇಶದ ಮುಖ್ಯ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಗೋಕಳ್ಳತನ ತಪ್ಪಿಸಬೇಕು. ಯುಗಾದಿ ಮತ್ತು ರಂಜಾನ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಟನೆ ನಡೆಯದಂತೆ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ನಗರದ ಹೊರ ಬಡಾವಣೆಗಳಲ್ಲಿ ಗಾಂಜಾ ಸೇವನೆ ಮತ್ತು ಸಾಗಣೆಗೆ ಸಂಬಂಧಿಸಿ ನಿಗಾ ವಹಿಸಲಾಗಿದೆ. ಇಲಾಖೆ ಈತನಕ ಗಾಂಜಾ ಸೇವನೆ ಮಾಡಿದವರನ್ನು ಪರೀೆಗೆ ಒಳಪಡಿಸಿ ಕಾನೂನು ಕ್ರಮ ಜರುಗಿಸಿದೆ. ಗಾಂಜಾ ಸೇವನೆ ಮತ್ತು ಮಾರಾಟದ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ತಿಳಿಸಿ. ಮಾಹಿತಿ ಕೊಟ್ಟವರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ.