ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ
- ಸಾಮಾಜಿಕ ಜಾಲತಾಣಗಳಿಗೆ ರೀಲ್ಸ್ ಮತ್ತು ವಿಡಿಯೋ ಚಿತ್ರೀಕರಣ
- ಆರು ಯುವಕರ ವಿರುದ್ಧ ವನ್ಯಜೀವಿ ಇಲಾಖೆ ಕ್ರಮ
- ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ನೇತೃತ್ವದಲ್ಲಿ ಕಾರ್ಯಾಚರಣೆ
ಶಿವಮೊಗ್ಗ: ಶೆಟ್ಟಿಹಳ್ಳಿ ವನ್ಯಜೀವಿ(Shettyhalli Wildlife) ಅಭಯಾರಣ್ಯ ಹಾಗೂ ಪುರದಾಳ್ ಡ್ಯಾಂ ಸುತ್ತಮುತ್ತಲಿನ ಸಂರಕ್ಷಿತ ಪ್ರದೇಶಗಳಲ್ಲಿ ಸಾಮಾಜಿಕ ಜಾಲತಾಣಗಳಿಗೆ ರೀಲ್ಸ್ ಮತ್ತು ವಿಡಿಯೋ(Reels and Videos)ಗಳನ್ನು ಚಿತ್ರೀಕರಿಸುತ್ತಿದ್ದ ಆರು ಯುವಕರ ವಿರುದ್ಧ ವನ್ಯಜೀವಿ ಇಲಾಖೆ ಕ್ರಮ ಕೈಗೊಂಡಿದೆ.
ವೈರಲ್ ಆಗಿದ್ದ ಕೆಲ ವಿಡಿಯೋಗಳ ಆಧಾರದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಅಭಯಾರಣ್ಯ(Sanctuary)ದೊಳಗೆ ನಿಯಮ ಉಲ್ಲಂಘಿಸಿ ಚಿತ್ರೀಕರಣ ನಡೆಸಿರುವುದು ಬೆಳಕಿಗೆ ಬಂದಿದೆ. ಯುವಕರು ವಿದ್ಯಾರ್ಥಿಗಳಾಗಿರುವ ಹಿನ್ನೆಲೆ ಅವರ ಭವಿಷ್ಯದ ಹಿತದೃಷ್ಟಿಯಿಂದ ಗುರುತು ಬಹಿರಂಗಪಡಿಸಿಲ್ಲ.
ವನ್ಯಜೀವಿ ಸಂರಕ್ಷಿತ ಪ್ರದೇಶ(Wildlife sanctuary)ಗಳಲ್ಲಿ ಅನಧಿಕೃತ ಪ್ರವೇಶ, ಚಿತ್ರೀಕರಣ ಹಾಗೂ ವನ್ಯಜೀವಿಗಳಿಗೆ ತೊಂದರೆ ಉಂಟುಮಾಡುವ ಚಟುವಟಿಕೆಗಳ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ನಿಲುವು ತಾಳಿದೆ. ಈ ಕಾರ್ಯಾಚರಣೆ ನೇತೃತ್ವವನ್ನು ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ಹಾಗೂ ಸಿಬ್ಬಂದಿ ವಹಿಸಿದ್ದರು.