ಆಟೋ ಕಾಂಪ್ಲೆಕ್ಸ್‌ನ ಕಾರು ಗ್ಯಾರೇಜ್‌ನಲ್ಲಿ ಕಳ್ಳತನ ಮಾಡಿದ ಮುಸುಕುಧಾರಿಗಳ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
- ಆಟೋ ಕಾಂಪ್ಲೆಕ್ಸ್‌ನ ಗ್ಯಾರೇಜ್‌ಗೆ ನುಗ್ಗಿದ ಮುಸುಕುಧಾರಿಗಳು
- ಕಳ್ಳತನದ ದೃಶ್ಯ ಪಕ್ಕದ ಗ್ಯಾರೇಜ್‌ನ ಸಿಸಿಟಿವಿಯಲ್ಲಿ ಸೆರೆ
- ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಶಿವಮೊಗ್ಗ: ಸಾಗರ ರಸ್ತೆಯ ಆಟೋ ಕಾಂಪ್ಲೆಕ್ಸ್(Auto Complex)ನ ಕಾರ್ ಗ್ಯಾರೇಜ್‌ಗೆ ನುಗ್ಗಿದ ಮುಸುಕುಧಾರಿಗಳು ಕ್ಯಾಶ್ ಬಾಕ್ಸ್ ಮುರಿದು 3.01 ಲಕ್ಷ ರೂ. ನಗದು ಹಾಗೂ ಬ್ಯಾಟರಿ ಕಳ್ಳತನ ಮಾಡಿದ್ದಾರೆ. ಕಳ್ಳತನದ ದೃಶ್ಯ ಪಕ್ಕದ ಗ್ಯಾರೇಜ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆಟೋ ಕಾಂಪ್ಲೆಕ್ಸ್ 2ನೇ ಅಡ್ಡರಸ್ತೆಯ ಇಂಡಿಯನ್ ಕಾರ್ ಗ್ಯಾರೇಜ್‌ನಲ್ಲಿ ಕಳ್ಳತನ(Theft) ನಡೆದಿದೆ. ಕಾರುಗಳ ರಿಪೇರಿಗಾಗಿ ಮಾಲೀಕರು ನೀಡಿದ್ದ 3,01,200 ರೂ. ನಗದನ್ನು ಗ್ಯಾರೇಜ್‌ನ ಕ್ಯಾಶ್ ಬಾಕ್ಸ್‌ನಲ್ಲಿ ಇಡಲಾಗಿತ್ತು. ರಾತ್ರಿ ಗ್ಯಾರೇಜ್‌ಗೆ ನುಗ್ಗಿದ ಇಬ್ಬರು ಮುಸುಕುಧಾರಿಗಳು ಬೀಗ ಮುರಿದು ಹಣ ಹಾಗೂ ಕಾರಿನ ಬ್ಯಾಟರಿ ಕದ್ದೊಯ್ದಿದ್ದಾರೆ.
ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಮುಸುಕುಧಾರಿಗಳನ್ನು ಬಿಟ್ಟು ಹೋಗಿದ್ದಾನೆ. ಅಲ್ಲದೆ ಹೊರಗೆ ನಿಂತು ಸಿಗ್ನಲ್ ನೀಡುತ್ತಿರುವ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗ್ಯಾರೇಜ್ ಬಗ್ಗೆ ಪರಿಚಿತರೆ ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ವಿನೋಬನಗರ ಪೊಲೀಸ್(Vinobanagara Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.