ರಿಪ್ಪನ್ಪೇಟೆಯಲ್ಲಿ ಪಿಎಸಿಎಸ್, ಕ್ಯಾಂಪ್ಕೋ ಸಹಯೋಗದಲ್ಲಿ ಆಯೋಜಿಸಿದ್ದ ಅಡಿಕೆ ಖರೀದಿ ಕೇಂದ್ರದ ಉದ್ಘಾಟನೆ ಸಮಾರಂಭದಲ್ಲಿ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿದರು. ಸತೀಶ್ಚಂದ್ರ, ಎಂ.ಎಂ.ಪರಮೇಶ್, ದಿನೇಶ್ ಗೌಡ, ಕೀರ್ತೀರಾಜ್ ಗೌಡ, ಬಂಡಿ ದಿನೇಶ ಇತರರಿದ್ದರು.
- ರಿಪ್ಪನ್ಪೇಟೆಯಲ್ಲಿ ಖರೀದಿ ಕೇಂದ್ರ ಉದ್ಘಾಟನೆ
- ಎಂಎಡಿಬಿ ಅಧ್ಯ ಆರ್.ಎಂ.ಮಂಜುನಾಥ ಗೌಡ ಹೇಳಿಕೆ
- ಅಡಿಕೆಗೆ ಸ್ಥಿರ ಬೆಲೆ ಒದಗಿಸುವಲ್ಲಿ ಕ್ಯಾಂಪ್ಕೋ ಮುಖ್ಯ ಪಾತ್ರ
ರಿಪ್ಪನ್ಪೇಟೆ: ಅಡಿಕೆಗೆ ಗೌರವಯುತ ಬೆಲೆ ತಂದುಕೊಡುವಲ್ಲಿ ಕ್ಯಾಂಪ್ಕೋ ನಿರ್ವಹಿಸುತ್ತಿರುವ ಪಾತ್ರ ಮಹತ್ವದ್ದಾಗಿದೆ ಎಂದು ಎಂಎಡಿಬಿ ಅಧ್ಯ ಆರ್.ಎಂ.ಮಂಜುನಾಥ ಗೌಡ ಹೇಳಿದರು.
ಪಟ್ಟಣದ ಸಹಕಾರ ಸಂದ ಪ್ರಾಂಗಣದಲ್ಲಿ ಗುರುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂ ಹಾಗೂ ಕ್ಯಾಂಪ್ಕೋ ಸಹಯೋಗದಲ್ಲಿ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ ನೆರವೇರಿಸಿ ಮಾತನಾಡಿದ್ಟ್ಠ.
ಕ್ಯಾಂಪ್ಕೋ ಸಂಸ್ಥೆ ಅಡಿಕೆಯ ವಿವಿಧ ಉತ್ಪನ್ನಗಳನ್ನು ತಯಾರಿಸಿ, ಮಾರುಕಟ್ಟೆ ಸೃಷ್ಟಿಸುವ ಮೂಲಕ ಬೆಳೆ ಉಳಿಸುವ ನಿರಂತರ ಪ್ರಯತ್ನದಲ್ಲಿದೆ. ಆದರೂ ಬೆಲೆ ಅಸ್ಥಿರತೆ ಭಯ ಇನ್ನೂ ತಪ್ಪಿಲ್ಲ. ಸುಪ್ರೀಂ ಕೋರ್ಟ್ನಲ್ಲಿ ಪರ&ವಿರೋಧದ ಚರ್ಚೆ ಮುಂದುವರಿದಿದೆ. ಆತಂಕದ ತೂಗುಗತ್ತಿ ರೈತರ ನೆತ್ತಿ ಮೇಲಿದೆ ಎಂದರು.
ಈಗ ತೋಟ ನಿರ್ವಹಣೆಯ ಖರ್ಚು ಅಧಿಕವಾಗಿದೆ. ಎಲೆಚುಕ್ಕೆ ಜತೆಗೆ ಅನೇಕ ರೋಗಗಳು ಬೆಳೆಯನ್ನು ಬಾಧಿಸುತ್ತಿವೆ. ಸಹಕಾರ ಸಂಗಳು ಬೆಳೆಗಾರರ ನೆರವಿಗಿದ್ದರೂ ಶೇ.80 ಅಡಕೆ ವ್ಯವಹಾರ ಖಾಸಗಿಯಾಗಿ ನಡೆಯುತ್ತಿದೆ. ಕೃಷಿಯನ್ನು ಲಾಭದಾಯಕವಾಗಿಸಲು ಏಕ ಬೆಳೆಯನ್ನು ಅವಲಂಬಿಸದೆ ಮಿಶ್ರಬೆಳೆಯನ್ನು ರೂಢಿಸಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ.ಪರಮೇಶ್, ಸಹಕಾರ ಸಂದ ಅಧ್ಯಕ್ಷ ದಿನೇಶ್ ಗೌಡ, ಕೀರ್ತೀರಾಜ್ ಗೌಡ, ಬಂಡಿ ದಿನೇಶ, ಕ್ಯಾಂಪ್ಕೋ ನಿರ್ದೇಶಕ ರಾವೇಂದ್ರ ಇತರರಿದ್ದರು.
ಬೆಳೆಗಳ ಉತ್ಪನ್ನ ಮತ್ತು ಮಾರುಕಟ್ಟೆ ಎರಡಕ್ಕೂ ಆದ್ಯತೆ ನೀಡಿರುವ ನಮ್ಮ ಸಂಸ್ಥೆ ರೈತರ ಹಣದ ಭದ್ರತೆಯನ್ನು ಖಾತ್ರಿ ಪಡಿಸುತ್ತದೆ. ಇಂದು ಅಡಿಕೆಯ ಜತೆಗೆ ಕಾಳುಮೆಣಸು, ತೆಂಗು ಹಾಗೂ ರಬ್ಬರ್ ಬೆಳೆಯ ವಹಿವಾಟು ಮಾಡುತ್ತಿದ್ದು, ಸಂಸ್ಥೆ ದೇಶ&ವಿದೇಶಗಳಲ್ಲಿ ವ್ಯಾಪಾರ ವಿಸ್ತರಿಸಿದೆ. ರೈತರು ಬಹುಬೆಳೆ ಕೃಷಿಯತ್ತ ಆಸಕ್ತಿವಹಿಸಿ ಸಹಕಾರ ಸಂಗಳಲ್ಲಿಯೇ ವ್ಯವಹರಿಸಿ.
> ಸತೀಶ್ಚಂದ್ರ, ಕ್ಯಾಂಪ್ಕೋ ಅಧ್ಯ