ರಿಪ್ಪನ್‌ಪೇಟೆ ಮಕ್ಕಳ ಬೇಸಿಗೆ ಮಕ್ಕಳ ಶಿಬಿರ ಕಾರ್ಯಕ್ರಮವನ್ನು ತ.ಮ.ನರಸಿಂಹ ಉದ್ಘಾಟಿಸಿದರು. ಶಾಲಿನಿ, ಲಕ್ಷ್ಮೀ, ವಾಹಿದಾ ಇತರರಿದ್ದರು. 
ಶಿವಮೊಗ್ಗ

ಬೌದ್ಧಿಕ ಬೆಳವಣಿಗೆಗೆ ಶಿಬಿರ ಸಹಕಾರಿ

ರಿಪ್ಪನ್‌ಪೇಟೆ: ಬೌದ್ಧಿಕ ಸಾಮರ್ಥ್ಯ ವೃದ್ಧಿಸುವಲ್ಲಿ ಬೇಸಿಗೆ ಶಿಬಿರಗಳು ಸಹಕಾರಿ ಎಂದು ಕಸಾಪ ತಾಲೂಕು ಮಾಜಿ ಅಧ್ಯಕ್ಷ ತ.ಮ.ನರಸಿಂಹ ಹೇಳಿದರು.
ಪಟ್ಟಣದ ಗ್ರಾಪಂ ಸಭಾಂಗಣದಲ್ಲಿ ಗ್ರಂಥಾಲಯ ಅರಿವು ಕೇಂದ್ರದಿಂದ ಆಯೋಜಿಸಿದ್ದ ಬೇಸಿಗೆ ಮಕ್ಕಳ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ರಜೆ ದಿನಗಳನ್ನು ಅರ್ಥಪೂರ್ಣವಾಗಿ ಕಳೆಯುವ ಯೋಜನೆ ಸಮಯೋಚಿತ. ಬೇರೆ ಮಕ್ಕಳೊಂದಿಗೆ ವಿಧ ವಿಧದ ಆಟ, ಕಲಿಕೆಯಲ್ಲಿ ಪಾಲ್ಗೊಂಡು ವಿಭಿನ್ನ ಅಭಿರುಚಿ ಹೊಂದುತ್ತಾರೆ. ಎಲ್ಲರೊಂದಿಗೆ ಚಟುವಟಿಕೆಯಲ್ಲಿ ಪಾಲ್ಗೊಂಡಾಗ ಪ್ರತಿಭೆ ಪ್ರದರ್ಶನಕ್ಕೆ ನೆರವಾಗುತ್ತದೆ ಎಂದು ತಿಳಿಸಿದರು.
ಮಕ್ಕಳು ಸಮೂಹ ನೃತ್ಯ, ಗಾಯನ, ನಾಟಕ ಇನ್ನಿತರ ಶಿಬಿರ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಕಾರ್ಯದರ್ಶಿ ಶಾಲಿನಿ, ಲಕ್ಷ್ಮೀ, ಗ್ರಂಥಾಲಯ ಮೇಲ್ವಿಚಾರಕಿ ವಾಹಿದಾ ಇತರರಿದ್ದರು.