ಸೊರಬದಲ್ಲಿ ಕರ್ನಾಟಕ ದೀವರ ಸಾಂಸ್ಕೃತಿಕ ಅಧ್ಯಯನ ಸಂಸ್ಥೆಯಿಂದ ದೀವರ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ರಾಜಪ್ಪ ಮಾಸ್ತರ್, ವೈ.ಜಿ.ಪುಟ್ಟಸ್ವಾಮಿ, ನಾಗೇಶ್, ರಾಮಪ್ಪ ಇತರರಿದ್ದರು. 
ಶಿವಮೊಗ್ಗ

ದೀವರ ಸಂಸ್ಕೃತಿ ಸಾರುವ ಕ್ಯಾಲೆಂಡರ್

ಸೊರಬ: ದೀವರ ಹಸೆ ಚಿತ್ತಾರ, ಜಾನಪದ ಕಲೆ ಹಾಗೂ ಸಂಪ್ರದಾಯವನ್ನು ಇನ್ನಷ್ಟು ಪ್ರಚಲಿತಗೊಳಿಸಲು ಹಾಗೂ ಅವರ ಜೀವನ ಸಾರುವ ಗ್ರಂಥ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ ಎಂದು ಚಿಂತಕ ರಾಜಪ್ಪ ಮಾಸ್ತರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರ್ನಾಟಕ ದೀವರ ಸಾಂಸ್ಕೃತಿಕ ಅಧ್ಯಯನ ಸಂಸ್ಥೆಯಿಂದ ದೀವರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ದೀವರ ಸಮುದಾಯದ ಚರಿತ್ರೆಯನ್ನು ದಾಖಲೆ ರೂಪದಲ್ಲಿ ಹೊರತರಲು ಸಂಘಟನೆ ಸನ್ನದ್ಧವಾಗಿದೆ. ಗ್ರಾಮೀಣ ಭಾಗದ ಹೆಣ್ಣು ಮಕ್ಕಳಲ್ಲಿ ಜಾನಪದ ಕಲೆ, ಸಂಸ್ಕೃತಿ ಅಡಕವಾಗಿದ್ದು, ಕಲಾವಿದರನ್ನು ಗುರುತಿಸುವ ಅಭಿಯಾನ ಶುರುವಾಗಿದೆ ಎಂದು ತಿಳಿಸಿದರು.
ಹಿರಿಯ ವಕೀಲ ವೈ.ಜಿ.ಪುಟ್ಟಸ್ವಾಮಿ, ನಾಗೇಶ್, ರಾಮಪ್ಪ, ಸಂತೋಷ್, ವಿಶ್ವನಾಥ, ಕೆರಿಯಪ್ಪ, ಆರ್.ಭಾಸ್ಕರ್, ವೀರೇಶ್, ಏಕಾಂತಪ್ಪ ಇದ್ದರು.