ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿಯಲ್ಲಿ ಜಖಂಗೊಂಡ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಪ್ರಯಾಣಿಸುತ್ತಿದ್ದ ಕಾರು. 
ಶಿವಮೊಗ್ಗ

ಸರಣಿ ಅಪಘಾತದಲ್ಲಿ ಬಿ.ವೈ.ರಾಘವೇಂದ್ರ ಕಾರು ಜಖಂ । Serial accident

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿಯಲ್ಲಿ ಬುಧವಾರ ಸರಣಿ ಅಪಘಾತ
  • ಬಿ.ವೈ.ರಾಘವೇಂದ್ರ ಸೇರಿ ಕಾರಿನಲ್ಲಿದ್ದ ಎಲ್ಲರೂ ಅಪಾಯದಿಂದ ಪಾರು
  • ಎಸ್ಕಾರ್ಟ್ ವಾಹನದಲ್ಲೇ ವಿಮಾಣ ನಿಲ್ದಾಣಕ್ಕೆ ತೆರಳಿದ ಲೋಕಸಭಾ ಸದಸ್ಯ
ಶಿವಮೊಗ್ಗ: ತಾಲೂಕಿನ ಕುಂಚೇನಹಳ್ಳಿಯಲ್ಲಿ ಬುಧವಾರ ಸರಣಿ ಅಪಘಾತ(Serial accident)ದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಪ್ರಯಾಣಿಸುತ್ತಿದ್ದ ಕಾರು(Car) ಜಖಂಗೊಂಡಿದ್ದು, ಬಿ.ವೈ.ರಾಘವೇಂದ್ರ ಸೇರಿ ಕಾರಿನಲ್ಲಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಶಿಕಾರಿಪುರದಿಂದ ಸವಳಂಗ(Savalanga) ಮಾರ್ಗವಾಗಿ ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗ ವಿಮಾನ ನಿಲ್ದಾಣ(Airport)ಕ್ಕೆ ಎಸ್ಕಾರ್ಟ್‌ನೊಂದಿಗೆ ಇನ್ನೋವಾ ಕಾರಿನಲ್ಲಿ ಬರುತ್ತಿದ್ದಾಗ ಕುಂಚೇನಹಳ್ಳಿ ಬಳಿ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಇನ್ನೋವಾ ಕಾರು ಮುಂದಿದ್ದ ಎಸ್ಕಾರ್ಟ್ ವಾಹನಕ್ಕೆ ಡಿಕ್ಕಿಯಾಗಿದೆ.
ಹೆದ್ದಾರಿಯಲ್ಲಿ ಹಂಪ್ಸ್(Humps) ಇದ್ದ ಕಾರಣಕ್ಕೆ ಎಸ್ಕಾರ್ಟ್(Escort) ವಾಹನದ ವೇಗವನ್ನು ಚಾಲಕ ನಿಧಾನ ಮಾಡಿದ್ದ. ಅದರ ಹಿಂದಿದ್ದ ಇನ್ನೋವಾ ಕಾರು ಕೂಡ ನಿಧಾನವಾಗಿ ಚಲಿಸುತ್ತಿತ್ತು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಬುಲೆರೋ ಕಾರು ಡಿಕ್ಕಿ ಹೊಡೆದಿದೆ. 
ಅಪಘಾತದ ರಭಸಕ್ಕೆ ಸಂಸದರ ಕಾರು ಹಿಂದೆ ಮತ್ತು ಮುಂದೆ ಜಖಂಗೊಂಡಿದೆ. ಬಿ.ವೈ.ರಾಘವೇಂದ್ರ ಸೇರಿದಂತೆ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಅಲ್ಲಿಂದ ಎಸ್ಕಾರ್ಟ್ ವಾಹನದಲ್ಲೇ ವಿಮಾಣ ನಿಲ್ದಾಣಕ್ಕೆ ರಾಘವೇಂದ್ರ ಅವರು ತೆರಳಿದರು. ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.