ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆ 
ಶಿವಮೊಗ್ಗ

ಫೋನ್ ಡೀಲರ್‌ಶಿಪ್ ಹೆಸರಲ್ಲಿ ವ್ಯಾಪಾರಿಗೆ ವಂಚನೆ Fraud

ಶಿವಮೊಗ್ಗ: ದುಬೈನಿಂದ ಕಡಿಮೆ ದರಕ್ಕೆ ಮೊಬೈಲ್ ಹಾಗೂ ಆಕ್ಸೆಸರೀಸ್ ಪೂರೈಸುವುದಾಗಿ ಮತ್ತು ಡೀಲರ್‌ಶಿಪ್ ನೀಡುವುದಾಗಿ ನಂಬಿಸಿ ಶಿವಮೊಗ್ಗದ ವ್ಯಾಪಾರಿಯೊಬ್ಬರಿಗೆ 2.79 ಲಕ್ಷ ರೂ. ವಂಚಿಸಲಾಗಿದೆ.

ಶಿವಮೊಗ್ಗ: ದುಬೈನಿಂದ ಕಡಿಮೆ ದರಕ್ಕೆ ಮೊಬೈಲ್ ಹಾಗೂ ಆಕ್ಸೆಸರೀಸ್ ಪೂರೈಸುವುದಾಗಿ ಮತ್ತು ಡೀಲರ್‌ಶಿಪ್ ನೀಡುವುದಾಗಿ ನಂಬಿಸಿ ಶಿವಮೊಗ್ಗದ ವ್ಯಾಪಾರಿಯೊಬ್ಬರಿಗೆ 2.79 ಲಕ್ಷ ರೂ. ವಂಚಿಸಲಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಕೀಪ್ಯಾಡ್ ಹಾಗೂ ಸ್ಮಾರ್ಟ್‌ಫೋನ್‌ಗಳ ಮಾರಾಟಕ್ಕಾಗಿ ಡೀಲರ್‌ಶಿಪ್ ನೀಡುವ ಜಾಹೀರಾತು ನೋಡಿ ವ್ಯಾಪಾರಿ ಪ್ರತಿಕ್ರಿಯಿಸಿದ್ದರು. ವ್ಯಕ್ತಿಯೊಬ್ಬ ದುಬೈನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ಬೆಂಗಳೂರು ಹಾಗೂ ಮುಂಬೈಗಿಂತ ಅತ್ಯಂತ ಕಡಿಮೆ ದರದಲ್ಲಿ ಮೊಬೈಲ್ ಫೋನ್‌ಗಳನ್ನು ಪೂರೈಸುವುದಾಗಿ ನಂಬಿಸಿದ್ದರು.

ಜೂ. 4ರಂದು ಫೋನ್ ಪೇ ಮೂಲಕ 25 ಸಾವಿರ ರೂ. ಮುಂಗಡ ಪಡೆದಿದ್ದ ಆ ವ್ಯಕ್ತಿ ಬಳಿಕ ವಿವಿಧ ಶುಲ್ಕಗಳ ನೆಪದಲ್ಲಿ ಅ. 9ರವರೆಗೆ ಹಂತ ಹಂತವಾಗಿ 2.79 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾನೆ. ಹಣ ಪಡೆದ ನಂತರ ಮೊಬೈಲ್ ಹಾಗೂ ಸಾಮಗ್ರಿಗಳನ್ನು ಕಳುಹಿಸಿರಲಿಲ್ಲ. ಕರೆ ಮಾಡಿದಾಗ ಆ ವ್ಯಕ್ತಿಯಿಂದ ಸ್ಪಂದನೆ ಸಿಗದಿದ್ದಾಗ ಮೋಸ ಹೋಗಿರುವುದು ವ್ಯಾಪಾರಿಯ ಅರಿವಿಗೆ ಬಂದಿದ್ದು, ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.