ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆ. 
ಶಿವಮೊಗ್ಗ

ಉದ್ಯಮಿಗೆ 11.09 ಲಕ್ಷ ರೂ. ವಂಚನೆ | Businessman scam

ಪ್ರಮುಖ ಮುಖ್ಯಾಂಶಗಳು

  • ವಿಮಾನ ಟಿಕೆಟ್ ಬುಕಿಂಗ್ ನೆಪದಲ್ಲಿ ವಂಚನೆ
  • ಭದ್ರಾವತಿ ತಾಲೂಕಿನ 51 ವರ್ಷದ ಉದ್ಯಮಿ
  • ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಶಿವಮೊಗ್ಗ: ವಿಮಾನ ಟಿಕೆಟ್ ಬುಕಿಂಗ್(Flight ticket booking) ಮಾಡಿಸಿಕೊಡುವುದಾಗಿ ನಂಬಿಸಿ ಉದ್ಯಮಿಗೆ 11.09 ಲಕ್ಷ ರೂ. ವಂಚಿಸಲಾಗಿದೆ. ಭದ್ರಾವತಿ ತಾಲೂಕಿನ 51 ವರ್ಷದ ಉದ್ಯಮಿ ವಂಚನೆಗೆ ಒಳಗಾದವರು. 
ಉದ್ಯಮಿ(Businessman)ಗೆ ಖಾಸಗಿ ಸಂಸ್ಥೆಯ ಹೆಸರಿನಲ್ಲಿ ವಿಮಾನ ಟಿಕೆಟ್ ಬುಕಿಂಗ್ ನೀಡುವುದಾಗಿ ನಂಬಿಸಿ ವೈಯಕ್ತಿಕ ಮಾಹಿತಿ ಪಡೆದುಕೊಂಡಿದ್ದರು. ನಂತರ ರಿಜಿಸ್ಟ್ರೇಷನ್ ಫೀ(Registration fee) ಸೇರಿ ವಿವಿಧ ಕಾರಣಗಳನ್ನು ಹೇಳಿ ಜೂ.17ರಿಂದ 20ರವರೆಗೆ ಹಂತ ಹಂತವಾಗಿ ಉದ್ಯಮಿ, ಅವರ ಪತ್ನಿ ಮತ್ತು ಪುತ್ರನ ಬ್ಯಾಂಕ್ ಖಾತೆಗಳಿಂದ 11.09 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ.
ಟಿಕೆಟ್ ನೀಡದೆ ಸಬೂಬು ಹೇಳಿದ್ದು, ಉದ್ಯಮಿ ಹಣ ವಾಪಸ್ ಕೇಳಿದಾಗ ಹೆಚ್ಚುವರಿ ಹಣ ನೀಡುವುದಾಗಿ  ನಂಬಿಸಿದ್ದರು. ಆದರೆ ಹಣ ವಾಪಸ್ ಬಾರದ ಹಿನ್ನೆಲೆ ವಂಚನೆಗೊಳಗಾಗಿರುವುದು ಅರಿವಾಗಿದೆ. ಈ ಬಗ್ಗೆ ಉದ್ಯಮಿ ನೀಡಿದ ದೂರಿನ ಮೇರೆಗೆ ಸಿಇಎನ್ ಪೊಲೀಸ್ ಠಾಣೆ(CEN Police Station)ಯಲ್ಲಿ ಪ್ರಕರಣ ದಾಖಲಾಗಿದೆ.