ಸೊರಬ ಶ್ರೀ ಲಕ್ಷ್ಮೀರಂಗನಾಥ ದೇವರ ರಥದ ಮನೆಯನ್ನು ಹಳೆಯ ರಥ ನಿಲ್ಲುತ್ತಿದ್ದ ಜಾಗದಲ್ಲಿಯೇ ನಿರ್ಮಿಸಬೇಕು ಎಂದು ಒತ್ತಾಯಿಸಿ ಭಕ್ತರು ತಹಸೀಲ್ದಾರ್ ಕೆ. ಪುರಂದರ ಅವರಿಗೆ ಮನವಿ ಸಲ್ಲಿಸಿದರು. ಸಿ.ಪಿ ವೀರೇಶ್ ಗೌಡ, ಡಿ.ಶಿವಯೋಗಿ, ಮಹೇಶ್ ಖಾರ್ವಿ, ರಂಗನಾಥ, ಲೋಕೇಶ್ ಇತರರಿದ್ದರು. 
ಶಿವಮೊಗ್ಗ

ಹಳೆಯ ಜಾಗದಲ್ಲೇ ರಥದ ಮನೆ ನಿರ್ಮಿಸಿ | request to tahasildar

ಸೊರಬ: ಪಟ್ಟಣದ ಶ್ರೀ ಲಕ್ಷ್ಮೀರಂಗನಾಥ ದೇವರ ಬ್ರಹ್ಮರಥವನ್ನು ನಿಲ್ಲಿಸಲು ಪುರಸಭೆಯಿಂದ ಸಾರ್ವಜನಿಕ ಉದ್ಯಾನದ ಜಾಗದಲ್ಲಿ  ನಿರ್ಮಾಣವಾಗುತ್ತಿರುವ ಕಾಮಗಾರಿಯನ್ನು ಕೈಬಿಟ್ಟು ಹಳೇ ರಥ ನಿಲ್ಲುತ್ತಿದ್ದ ಜಾಗದಲ್ಲಿಯೇ ಮಾಡಬೇಕು ಎಂದು ಭಕ್ತ ಸಮೂಹ ಹಾಗೂ ನಾಗರಿಕರು ಬುಧವಾರ ತಹಸೀಲ್ದಾರ್ ಕೆ.ಪುರಂದರ ಅವರಿಗೆ ಮನವಿ ಸಲ್ಲಿಸಿದರು.
ನೂತನ ರಥ ನಿರ್ಮಾಣವಾಗಿ ಎರಡು ತಿಂಗಳು ಕಳೆದಿವೆ. ರಥದ ಸಂರಕ್ಷಣೆಗೆ ಇನ್ನೂ ಮನೆ ನಿರ್ಮಾಣವಾಗಿಲ್ಲ. ಈಗ ಪುರಸಭೆಯಿಂದ ಸಾರ್ವಜನಿಕ ಉದ್ಯಾನದ ಶೌಚಗೃಹದ ಬಳಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದರ ಬದಲಿಗೆ ದೇವಸ್ಥಾನದ ಪಕ್ಕದಲ್ಲಿ  ಹಳೇ ರಥ ನಿಲ್ಲುವ ಜಾಗವನ್ನು ಅಭಿವೃದ್ಧಿಪಡಿಸಿ ಅಲ್ಲಿಯೇ ರಥದ ಮನೆ ಮಾಡಬೇಕು. ಅಲ್ಲದೆ ದೇವಾಲಯದ ಒಳಗಡೆ ನೀರು ಸೋರುತ್ತಿದೆ. ತಕ್ಷಣ ಸರಿಪಡಿಸುವ ಕೆಲಸ ಆಗಬೇಕಿದೆ ಎಂದು ಆಗ್ರಹಿಸಿದರು.
ತಹಸೀಲ್ದಾರ್ ಕೆ.ಪುರಂದರ ಮಾತನಾಡಿ, ರಥದ ಮನೆ ನಿರ್ಮಾಣವನ್ನು ಪುರಸಭಾ ಸದಸ್ಯರು ಉದ್ಯಾನದಲ್ಲೇ ಮಾಡಲು ನಿರ್ಣಯ ಮಾಡಿದ್ದಾರೆ. ಈಗ ಸಾಗರ ಉಪವಿಭಾಗಾಧಿಕಾರಿ ಅವರು ಪುರಸಭೆ ಆಡಳಿತಾಧಿಕಾರಿ. ಅವರಿಗೆ ಈ ಮಾಹಿತಿ ನೀಡುತ್ತೇನೆ. ಅವರ ತೀರ್ಮಾನದಂತೆ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.
ಸಿ.ಪಿ ವೀರೇಶ್ ಗೌಡ, ಡಿ.ಶಿವಯೋಗಿ, ಮಹೇಶ್ ಖಾರ್ವಿ, ರಂಗನಾಥ, ಲೋಕೇಶ್, ನಾಗರಾಜ್, ಕೆರೆಯಪ್ಪ, ರಾಘವೇಂದ್ರ ಆಚಾರ್, ನವೀನ್, ಎಂ.ಎಸ್ ಕಾಳಿಂಗರಾಜ್, ಭಾರತಿ ಭಂಡಾರಿ, ಮಮತಾ, ಪ್ರತಿಭಾ ನಾಗರತ್ನ, ಸಚಿನ್ ಗೌಡ, ಸತೀಶ್ ಬೈಂದೂರು, ರವಿ, ಸಂಜಯ್ ಇತರರಿದ್ದರು.