ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕಾರ್ಯ ಕುರಿತು ಭದ್ರಾವತಿಯಲ್ಲಿ ಆಯೋಜಿಸಿದ್ದ ಬಿಎಲ್‌ಎ-2 ಕಾರ್ಯಗಾರದಲ್ಲಿ ಎನ್.ಕೆ.ಜಗದೀಶ್ ಮಾತನಾಡಿದರು. ಜಿ.ಧರ್ಮಪ್ರಸಾದ್, ಕೆ.ಎಚ್.ತೀರ್ಥಯ್ಯ, ಮಂಗೋಟೆ ರುದ್ರೇಶ್ ಇತರರಿದ್ದರು.
ಭದ್ರಾವತಿ: ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ ಬಿಎಲ್‌ಎ-2 ಪಾತ್ರ ಮುಖ್ಯ. ಮತದಾರರಿಗೆ ಎಸ್‌ಐಆರ್ ಕುರಿತು ಜಾಗೃತಿ ಮೂಡಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್ ಹೇಳಿದರು.
ನಗರ ಹಾಗೂ ಗ್ರಾಮಾಂತರ ಮಂಡಲದಿಂದ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಬಿಎಲ್‌ಎ-2 ಕಾರ್ಯಾಗಾರದಲ್ಲಿ ಮಾತನಾಡಿ, ಚುನಾವಣಾ ಆಯೋಗದ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ವಿರೋಧಿಸುತ್ತಿದ್ದು ಮತದಾರರ ಪಟ್ಟಿ ಪರಿಷ್ಕರಣೆ ಹಕ್ಕನ್ನು ಸಂವಿಧಾನವೇ ಚುನಾವಣಾ ಆಯೋಗಕ್ಕೆ ನೀಡಿದೆ. ಇದನ್ನು ಯಾರು ಪ್ರಶ್ನಿಸುವಂತಿಲ್ಲ ಎಂಬುದಾಗಿ ನ್ಯಾಯಾಲಯ ಆದೇಶಿಸಿದೆ ಎಂದರು.
ಮತ ಚಲಾಯಿಸುವುದು ನಾಗರಿಕರ ಹಕ್ಕು. ದೇಶದ ಭವಿಷ್ಯಕ್ಕಾಗಿ, ಮುಂದಿನ ಪೀಳಿಗೆ ಸುರಕ್ಷತೆಗೆ ಮತದಾನ ಅವಶ್ಯಕ. ಇದರಿಂದ ಯಾರು ವಂಚಿತರಾಗದಂತೆ ಹಾಗೂ ಅನೇಕ ಕಾರಣಗಳಿಂದ 2-3 ಕ್ಷೇತ್ರಗಳಲ್ಲಿ ಹೆಸರು ನೋಂದಣಿ ಆಗಿರುವುದು, ನಿಧನರಾದವರನ್ನು ಪಟ್ಟಿಯಿಂದ ಕೈಬಿಡದಿರುವುದು, 18 ವರ್ಷ ಪೂರೈಸಿ ಮತದಾನ ಹಕ್ಕಿನ ಅರ್ಹತೆ ಪಡೆದವರ ಸೇರ್ಪಡೆ, ದೇಶಕ್ಕೆ ಮಾರಕವಾಗಿರುವ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವುದು, ಅನರ್ಹ ಮತದಾರರನ್ನು ಪಟ್ಟಿಯಿಂದ ತೆಗೆಯುವುದು ಜವಾಬ್ದಾರಿಯುತ ಕಾರ್ಯ ಎಂದು ತಿಳಿಸಿದರು.
ನಗರ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್.ತೀರ್ಥಯ್ಯ, ಚಿಕ್ಕಮಗಳೂರು ಜಿಲ್ಲೆ ಪ್ರಧಾನ ಕಾರ್ಯದರ್ಶಿ ಜಿ.ಎಸ್.ನರೇಂದ್ರ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ, ಚನ್ನೇಶ್, ರಘುರಾವ್, ಮೊಸರಳ್ಳಿ ಅಣ್ಣಪ್ಪ, ಎಂ.ಎಸ್.ಸುರೇಶಪ್ಪ, ಮಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್, ಎಂ.ಮಂಜುನಾಥ್, ಸರಸ್ವತಿ, ತಮ್ಮಡಿಹಳ್ಳಿ ನಾಗರಾಜ್ ಇತರರಿದ್ದರು.