ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ  
ಶಿವಮೊಗ್ಗ

ಪಾಲಿಕೆ ವ್ಯಾಪ್ತಿಯಲ್ಲಿ ಬಿಜೆವೈಎಸ್ ನೋಂದಣಿ | BJYS Registration

ಪ್ರಮುಖ ಮುಖ್ಯಾಂಶಗಳು

  • ವಾರ್ಡ್ 1, 16, 17 ಮತ್ತು 23ರಲ್ಲಿ ತಲಾ ಎರಡು, ಉಳಿದೆಡೆ ಒಂದು ಸಂಘ
  • 16ರಿಂದ 35 ವರ್ಷದೊಳಗಿನ ಯುವಕ, ಯುವತಿಯರು ಸದಸ್ಯತ್ವ ಪಡೆಯಬಹುದು
  • ಆನ್‌ಲೈನ್ ಪೋರ್ಟಲ್ ಮೂಲಕ ನೋಂದಾಯಿಸುವಂತೆ ಕೆ.ಮಾಯಣ್ಣ ಗೌಡ ಮನವಿ
ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಸಹಯೋಗದಲ್ಲಿ ಭಾರತ್ ಜೋಡೋ ಯುವ ಸಂಘ(Bharat Jodo Youth Association)(ಬಿಜೆವೈಎಸ್)ಗಳನ್ನು ಆನ್‌ಲೈನ್ ಪೋರ್ಟಲ್(Online portal) ಮೂಲಕ ನೋಂದಾಯಿಸುವಂತೆ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ತಿಳಿಸಿದ್ದಾರೆ. 
ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ತಲಾ ಒಂದು ಸಂಘ ಹಾಗೂ ಪಾಲಿಕೆಯ ವಾರ್ಡ್ ಸಂಖ್ಯೆ 1, 16, 17 ಮತ್ತು 23ರಲ್ಲಿ ಜನಸಂಖ್ಯೆಗೆ ಅನುಗುಣವಾಗಿ ತಲಾ ಎರಡು ಸಂಘಗಳ ಸ್ಥಾಪನೆ ಮಾಡಲಾಗುತ್ತಿದೆ. ಸಂಘದ ಮೂಲಕ ಕ್ರೀಡೆ ಮತ್ತು ಫಿಟ್‌ನೆಸ್(Sports and fitness), ಯುವಸಬಲೀಕರಣ, ಕೌಶಲಾಭಿವೃದ್ಧಿ, ಸಮುದಾಯದ ಅಭಿವೃದ್ಧಿ, ಅರಣ್ಯ ಮತ್ತು ಪರಿಸರ ಸಂರಕ್ಷಣೆ, ಆರೋಗ್ಯ ಮತ್ತು ಯೋಗಕ್ಷೇಮ, ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯ ಹಾಗೂ ಕೌಶಲಾಭಿವೃದ್ಧಿ ಸೇವಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದಿದ್ದಾರೆ. 
ಹಾಗಾಗಿ ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಹೊಂದಿರುವ 16ರಿಂದ 35 ವರ್ಷದೊಳಗಿನ ಮಹಾನಗರ ಪಾಲಿಕೆ(Mahanaga palike) ವ್ಯಾಪ್ತಿಯ ಯುವಕ, ಯುವತಿಯರು ಸದಸ್ಯತ್ವ ಪಡೆಯಬಹುದು. ಆಯಾ ಪ್ರದೇಶಗಳಲ್ಲಿ ಕನಿಷ್ಠ 6 ತಿಂಗಳು ವಾಸವಿರಬೇಕು. ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಇರಬೇಕು ಎಂದಿದ್ದಾರೆ.