ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
- ಗ್ರಾಮ ಸ್ವರಾಜ್ಯ ಮಹಾತ್ಮ ಗಾಂಧಿ ಅವರ ಕನಸಾಗಿತ್ತು
- ಕೇಂದ್ರ ಸರ್ಕಾರ ಗ್ರಾಮ ಸ್ವರಾಜ್ಯದ ಆಶಯಕ್ಕೆ ಕೊಡಲಿ ಪೆಟ್ಟು ಹಾಕುತ್ತಿದೆ
- ಮನರೇಗಾ ಎಂಬುದು ಹಳ್ಳಿಗರ ಜೀವನಾಡಿ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಶಿವಮೊಗ್ಗ: ಮನರೇಗಾ(Maneraga) ಎಂಬುದು ಹಳ್ಳಿಗರ ಜೀವನಾಡಿ. ಕಳೆದ 20 ವರ್ಷದಿಂದ ಹಳ್ಳಿಗರ ಜೀವನದಲ್ಲಿ ಆಸರೆಯಾದ ಯೋಜನೆ. ಅದನ್ನೇ ಬದಲಿಸಿರುವ ಬಿಜೆಪಿಯವರಿಗೆ ನಾಚಿಗೆ ಆಗಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಕಿಡಿಕಾರಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನರೇಗಾ ಒಂದೇ ಹೆಸರು ಬದಲಾವಣೆ ಮಾಡಲಿಲ್ಲ. ಗ್ರಾಮ ಸ್ವರಾಜ್ಯ(Grama Swarajya) ಮಹಾತ್ಮ ಗಾಂಧಿ ಅವರ ಕನಸಾಗಿತ್ತು. ಹಾಗಾಗಿಯೇ ಗಾಂಧೀಜಿ ಅವರ ಹೆಸರು ಇಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ಇದೀಗ ಗ್ರಾಮ ಸ್ವರಾಜ್ಯದ ಆಶಯಕ್ಕೆ ಕೊಡಲಿ ಪೆಟ್ಟು ಹಾಕುತ್ತಿದೆ ಎಂದು ದೂರಿದರು.
ವಿಬಿಜಿ ರಾಮ್ ಜೀ(VBG Ram Ji) ಯೋಜನೆಯಲ್ಲಿ ಕೇಂದ್ರ ಸರ್ಕಾರ ಬಹಳಷ್ಟು ಬದಲಾವಣೆ ತಂದಿದೆ. ಕೇಂದ್ರ ಯೋಜನೆ ಬದಲಾವಣೆ ಮಾಡುವುದಕ್ಕೂ ಮುನ್ನ ರಾಜ್ಯಗಳ ಜತೆ ಚರ್ಚೆ ಮಾಡಬೇಕಿತ್ತು. ಆದರೆ ತರಾತುರಿಯಲ್ಲಿ ಬದಲಾವಣೆ ತರಲು ಮುಂದಾಗಿದೆ. ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬದಲಾವಣೆ ತರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿಗಳಿಗಿದ್ದ ಹಕ್ಕನ್ನು ಕೇಂದ್ರ ಕಸಿದುಕೊಂಡಿದೆ. ಹಳ್ಳಿಗಳ(Villages) ಕೆಲಸವನ್ನು ದೆಹಲಿಯಲ್ಲಿ ಕುಳಿತು ಕೆಲಸ ಮಾಡುವುದಕ್ಕೆ ಯೋಜನೆ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷದವರು ಆರು ಕೋಟಿ ಕುಟುಂಬಗಳ ಪರವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ನರೇಗಾದಲ್ಲಿ ಹಣ ದುರುಪಯೋಗ ಆಗುತ್ತಿದೆ ಎಂದು ಪತ್ತೆ ಮಾಡುವುದಕ್ಕೆ ಅವರಿಗೆ 12 ವರ್ಷ ಬೇಕಾಯ್ತ ಎಂದು ಪ್ರಶ್ನಿಸಿದ ಅವರು, ಅವರಿಗೆ ನಾಚಿಗೆ ಆಗಬೇಕು. ಇಷ್ಟು ದಿನ ಕತ್ತೆ ಕಾಯುತ್ತಿದ್ದರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಡೀ ದೇಶದ ಆಸ್ತಿಯನ್ನು ಅದಾನಿ ಹಾಗೂ ಅಂಬಾನಿಗೆ ಬರೆದುಕೊಟ್ಟವರು, ಬಂಡವಾಳ ಶಾಹಿಗಳ 23 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದವರು, ಕರ್ನಾಟಕದಲ್ಲಿ ಶೇ.40ರಷ್ಟು ಕಮೀಷನ್ ತಿಂದವರು ಬಿಜೆಪಿಯವರು. ಎಷ್ಟೋ ಕೇಸ್‌ಗಳಲ್ಲಿ ಮುಖ್ಯಮಂತ್ರಿಗಳೇ ಜೈಲಿಗೆ ಹೋಗಿ ಬಂದಿದ್ದಾರೆ. ಹಾಗಾಗಿ ಕಾಂಗ್ರೆಸ್ ಬಗ್ಗೆ ಆರೋಪ ಮಾಡುವುದಕ್ಕೆ ಅವರಿಗೆ ನೈತಿಕತೆ ಇಲ್ಲ.