ಸುಳ್ಳು ಸುದ್ದಿ ಪೋಸ್ಟರ್ ಹಾಕಿರುವ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಪದಾಧಿಕಾರಿಗಳು ಡಿಸಿ ಕಚೇರಿ ಸಹಾಯಕ ಚನ್ನಪ್ಪ ಅವರಿಗೆ ಮನವಿ ಸಲ್ಲಿಸಿದರು. ರಶ್ಮಿ ಶ್ರೀನಿವಾಸ್, ಸುಮಾ ಭೂಪಳಂ, ಶಾಂತಾ ಸುರೇಂದ್ರ ಮತ್ತಿತರರಿದ್ದರು.
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಭಾವಚಿತ್ರ ಬಳಸಿ ಸುಳ್ಳು ಸುದ್ದಿ ಪೋಸ್ಟರ್(Poster)ಗಳನ್ನು ಹಾಕಿ ರಾಜಕೀಯ ದಂಗೆಗೆ ಪ್ರಚೋದಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬುಧವಾರ ಬಿಜೆಪಿ ನಗರ ಮತ್ತು ಮಹಿಳಾ ಮೋರ್ಚಾ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಸಮಿತಿಯ ಕೆಲವರು ಕಾನೂನು ಸುವ್ಯವಸ್ಥೆ(Law and order)ಗೆ ಧಕ್ಕೆ ತರುವ ದುರುದ್ದೇಶದಿಂದ ಪ್ರಧಾನಿ ಮೋದಿ ಭಾವಚಿತ್ರ ಬಳಸಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ(Centrol govt)ದ ಹೆಸರು ಬಳಸಿಕೊಂಡು ಸಂಚು ರೂಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ರಶ್ಮಿ ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಾ ಭೂಪಳಂ, ಜಿಲ್ಲಾ ಕಾರ್ಯದರ್ಶಿ ಶಾಂತಾ ಸುರೇಂದ್ರ, ಮಂಜುಳಾ ಶ್ರೀನಿವಾಸ್, ಚೈತ್ರಾ ಪೈ, ಸುರೇಖಾ ಪಾಲಾಕ್ಷಪ್ಪ, ನಂದಿನಿ, ಪಾರ್ವತಮ್ಮ, ವಿನುತಾ, ಸುವರ್ಣಾ, ಮಂಜುಳಮ್ಮ, ಉಮಾ, ಸರಳಾ ಮತ್ತಿತರರು ಉಪಸ್ಥಿತರಿದ್ದರು.