ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವದ ನಿಮಿತ್ತ ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಬಿಳಕಿ ಶ್ರೀ ರಾಚೋಟೇಶ್ವರ ಸ್ವಾಮೀಜಿ, ಮಳಲಿ ಮಠದ ಶ್ರೀ ಡಾ. ನಾಗಭೂಷಣ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭೂಮಿಪೂಜೆ ನೆರವೇರಿತು. ಆಯನೂರು ಮಂಜುನಾಥ್, ಸಿ.ಎಸ್.ಷಡಾಕ್ಷರಿ, ಎಸ್.ಪಿ.ದಿನೇಶ್, ಎಸ್.ಎಸ್.ಜ್ಯೋತಿಪ್ರಕಾಶ್, ಅನಿತಾ ರವಿಶಂಕರ್ ಇತರರಿದ್ದರು. 
ಶಿವಮೊಗ್ಗ

ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಉತ್ಸವದ ಸಿದ್ಧತೆಗೆ ಭೂಮಿಪೂಜೆ | Addapallakki Utsav

ಪ್ರಮುಖ ಮುಖ್ಯಾಂಶಗಳು

  • ಅಲ್ಲಮಪ್ರಭು ಮೈದಾನದಲ್ಲಿ ಮೇ 17ರಂದು ಹಮ್ಮಿಕೊಂಡಿರುವ ಅಡ್ಡಪಲ್ಲಕ್ಕಿ ಮಹೋತ್ಸವ
  • ವಿವಿಧ ಕಾರ್ಯಕ್ರಮಗಳ ಸಿದ್ಧತೆಗೆ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ
  • ಶ್ರೀ ರಾಚೋಟೇಶ್ವರ ಸ್ವಾಮೀಜಿ, ಶ್ರೀ ಡಾ. ನಾಗಭೂಷಣ ಸ್ವಾಮೀಜಿ ಸಾನ್ನಿಧ್ಯ
ಶಿವಮೊಗ್ಗ: ಅಲ್ಲಮಪ್ರಭು ಮೈದಾನದಲ್ಲಿ ಮೇ 17ರಂದು ಹಮ್ಮಿಕೊಂಡಿರುವ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ(Addapallakki Mahotsava)ದ ಅಂಗವಾಗಿ ವಿವಿಧ ಕಾರ್ಯಕ್ರಮಗಳ ಸಿದ್ಧತೆಗೆ ಭಾನುವಾರ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಮಹೋತ್ಸವದ ನಿಮಿತ್ತ ನಿರ್ಮಿಸುವ ಸಭಾಮಂಟಪ, ಮುಖ್ಯ ವೇದಿಕೆ, ದಾಸೋಹ ಭವನ(Dasoha Bhavan) ಸೇರಿ ಭಕ್ತರಿಗೆ ಅಗತ್ಯವಿರುವ ವಿವಿಧ ಮೂಲ ಸೌಕರ್ಯಗಳ ನಿರ್ಮಾಣ ಕಾರ್ಯಕ್ಕೆ ಭದ್ರಾವತಿ ಬಿಳಕಿ ಶ್ರೀ ರಾಚೋಟೇಶ್ವರ ಸ್ವಾಮೀಜಿ, ಮಳಲಿ ಮಠದ ಶ್ರೀ ಡಾ. ನಾಗಭೂಷಣ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಾಲನೆ ದೊರಕಿತು. 
ಮಹೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲು ಸಮಿತಿ ಈಗಾಗಲೇ ವ್ಯಾಪಕ ಸಿದ್ಧತೆಗಳನ್ನು ಕೈಗೊಂಡಿದ್ದು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇರುವುದರಿಂದ ಮೂಲ ಸೌಕರ್ಯ(Infrastructure), ದಾಸೋಹ ವ್ಯವಸ್ಥೆ, ವಾಹನ ನಿಲುಗಡೆ, ಕುಡಿಯುವ ನೀರು ಹಾಗೂ ಭಕ್ತರ ಸೌಲಭ್ಯಗಳಿಗೆ ವಿಶೇಷ ಆದ್ಯತೆ ಬಗ್ಗೆ ಸಮಿತಿ ಪದಾಧಿಕಾರಿಗಳು ಚರ್ಚಿಸಿದರು.
ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ(Panchapithadhishara) ಅಡ್ಡಪಲ್ಲಕ್ಕಿ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಎಸ್.ರುದ್ರೇಗೌಡ, ಕಾರ್ಯಾಧ್ಯಕ್ಷ ಆಯನೂರು ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಸಿ.ಎಸ್.ಷಡಾಕ್ಷರಿ, ಬಳ್ಳೆಕೆರೆ ಸಂತೋಷ್, ಖಜಾಂಚಿ ಎಸ್.ಪಿ.ದಿನೇಶ್, ಸಮಾಜದ ಮುಖಂಡರಾದ ಎಸ್.ಎಸ್.ಜ್ಯೋತಿಪ್ರಕಾಶ್, ಅನಿತಾ ರವಿಶಂಕರ್, ಶಾಂತಾ ಆನಂದ್, ಡಾ. ಸಿ.ಎ.ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.