ಶಿವಮೊಗ್ಗ ಎಂಆರ್‌ಎಸ್ ವೃತ್ತದ ಪಕ್ಕದಲ್ಲಿರುವ ದೂರದರ್ಶನ ಮರುಪ್ರಸರಣ ಕೇಂದ್ರ.
- ಫಲ ನೀಡಿದ ಸಂಸದ ಬಿವೈಆರ್ ಶ್ರಮ
- ಇಂದು 10 ಕಿವ್ಯಾ ಟ್ರಾನ್ಸ್‌ಮೀಟರ್ ಲೋಕಾರ್ಪಣೆ
- ಕೇಂದ್ರ ಸಚಿವ ಡಾ.ಎಲ್.ಮುರುಗನ್ ಭಾಗಿ.
ಶಿವಮೊಗ್ಗ: ಜಿಲ್ಲೆಯ ಜನರ ಬಹುವರ್ಷದ ಬೇಡಿಕೆಯಾಗಿದ್ದ ಮೇಲ್ದರ್ಜೆಗೇರಿದ ಎಫ್ ಎಂ ರೇಡಿಯೊ (fm raido) ಪ್ರಸರಣಾ ಕೇಂದ್ರ ಸ್ಥಾಪನೆಯ ಕನಸು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (raghavendra) ಅವರ ಪ್ರಯತ್ನದಿಂದ ಸಾಕಾರವಾಗುತ್ತಿದೆ. ಫೆ.26ರಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ (minister) ಡಾ. ಎಲ್.ಮುರುಗನ್ ಕೇಂದ್ರವನ್ನು ಲೋಕಾರ್ಪಣೆಗೊಳಿಸುವರು.
ಆಕಾಶವಾಣಿ 10 ಕಿಲೋವಾಟ್ ಪ್ರಸರಣ ಕೇಂದ್ರ ಸ್ಥಾಪನೆಗೆ 2024ರ ಜ.19ರಂದು ಪ್ರಧಾನಿ ನರೇಂದ್ರ ಮೋದಿ ಚೆನ್ನೈನಿಂದ ವರ್ಚುವಲ್ ಮೂಲಕ ಶಿಲಾನ್ಯಾಸ ನೆರವೇರಿಸಿದ್ದರು. 2025ರ ಜ.23ರಂದು ಶಿವಮೊಗ್ಗಕ್ಕೆ ಆಗಮಿಸಿದ್ದ ಸಚಿವ ಎಲ್.ಮುರುಗನ್ ವಿದ್ಯಾನಗರದ ದೂರದರ್ಶನ ಮರುಪ್ರಸಾರ ಕೇಂದ್ರದಲ್ಲಿ ಎಫ್‌ಎಂ ರೇಡಿಯೋ ಕೇಂದ್ರಕ್ಕಾಗಿ ಕೆನಡಾದಿಂದ ತರಿಸಿದ್ದ ಅತ್ಯಧಿಕ ತರಂಗಾಂತರಗಳನ್ನು ಸೂಸುವ ಟ್ರಾನ್ಸ್‌ಮೀಟರ್ ಅಳವಡಿಕೆಗೆ ಪೂಜೆ ನೆರವೇರಿಸಿದ್ದರು.
ನಗರದ ಸಹ್ಯಾದ್ರಿ ಕಾಲೇಜು ಎದುರಿನ ದೂರದರ್ಶನ ಕೇಂದ್ರದಲ್ಲಿ ಎ್ಎಂ ಟ್ರಾನ್ಸ್‌ಮೀಟರ್ ಸ್ಥಾಪನೆಯಾಗುತ್ತಿದೆ. ಭದ್ರಾವತಿ ಆಕಾಶವಾಣಿ 63ನೇ ವಸಂತದಲ್ಲಿರುವ ಸಂದರ್ಭದಲ್ಲಿ ಇದೊಂದು ಅಪರೂಪದ ಕ್ಷಣವಾಗಿದೆ. ಮನರಂಜನೆ ದೃಷ್ಟಿಯಿಂದ ಇದೊಂದು ಮೈಲಿಗಲ್ಲು ಎಂದರೆ ಅಚ್ಚರಿಯಲ್ಲ.
ಮೊಬೈಲ್, ಇಂಟರ್‌ನೆಟ್ ಹಾಗೂ ಕಂಪ್ಯೂಟರ್ ಯುಗದಲ್ಲಿ ರೇಡಿಯೋ ಬಳಕೆ ಕಡಿಮೆಯಾಗುತ್ತಿದ್ದರೂ ಕೇಂದ್ರ ಸರ್ಕಾರದ ಪ್ರಸಾರ ಭಾರತಿ ಆಕಾಶವಾಣಿ ಇಂದಿಗೂ ತನ್ನ ವಿಶ್ವಾಸಾರ್ಹ ಸುದ್ದಿ, ಮನರಂಜನೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಸಾರದಲ್ಲಿ ಮೊದಲ ಸ್ಥಾನದಲ್ಲಿದೆ.
10 ವರ್ಷದ ಹಿಂದೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆಕಾಶವಾಣಿ ಭದ್ರಾವತಿ ಕೇಂದ್ರದಿಂದ ಎ್ಎಂ ಮೋಡ್‌ನಲ್ಲಿ ಕಾರ್ಯಕ್ರಮ ಪ್ರಸಾರ ಮಾಡುವ ಉದ್ದೇಶದಿಂದ ಪ್ರಯತ್ನ ಆರಂಭಿಸಿದ್ದರು. ಆ ಸಂದರ್ಭದಲ್ಲಿ ವಾರ್ತಾ ಸಚಿವರಾಗಿದ್ದ ಪ್ರಕಾಶ್ ಜಾವ್ಡೇಕರ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಆಕಾಶವಾಣಿ ಭದ್ರಾವತಿಗೆ ಒಂದು ಕಿಲೋವಾಟ್ ಸಾಮರ್ಥ್ಯದ ಎ್ಎಂ ಟ್ರಾನ್ಸ್‌ಮೀಟರ್ ಒದಗಿಸಲಾಗಿತ್ತು. ಅದರಿಂದ 20 ಕಿಮೀವರೆಗೆ ಮಾತ್ರ ಕಾರ್ಯಕ್ರಮ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಬಳಿಕ ಬಿ.ವೈ.ರಾಘವೇಂದ್ರ 10 ಕಿಲೋವ್ಯಾಟ್ ಎ್ಎಂ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ಮತ್ತು ಪ್ರಸಾರ ಭಾರತಿ ಸಿಇಒ ದ್ವಿವೇದಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದರ ಲವಾಗಿ 9 ಕೋಟಿ ರೂ. ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ 10 ಕಿಲೋ ವಾಟ್ ಎ್ಎಂ ಟ್ರಾನ್ಸ್‌ಮೀಟರ್ ಮಂಜೂರು ಮಾಡಿತ್ತು.
ನೆರೆ ಜಿಲ್ಲೆಗಳಿಗೂ ಪ್ರಸಾರ
ನೂತನ 10 ಕಿಲೋ ವಾಟ್ ಎಫ್‌ಎಂ ಟ್ರಾನ್ಸ್‌ಮೀಟರ್‌ನಿಂದ ವಾಹನಗಳಲ್ಲಿ ಪ್ರಯಾಣಿಸುವ ವೇಳೆಯೂ ಎಫ್‌ಎಂ ಕಾರ್ಯಕ್ರಮ ಆಲಿಸಬಹುದು. ಜಿಲ್ಲೆಯ ಎಲ್ಲ ಮೂಲೆಗಳಿಗೂ ಸ್ಪಷ್ಟ ಧ್ವನಿಯೊಂದಿಗೆ ಕಾರ್ಯಕ್ರಮ ಪ್ರಸಾರವಾಗಲಿದೆ. 150 ಕಿಲೋಮೀಟರ್‌ವರೆಗೆ ಇದರ ವ್ಯಾಪ್ತಿ ಇರುತ್ತದೆ. ಯುವ ಪ್ರತಿಭೆಗಳು, ಜಾನಪದ ಕಲಾವಿದರು, ಮಹಿಳೆಯರು, ಮಕ್ಕಳು, ರೈತರು ಕಾರ್ಯಕ್ರಮ ನೀಡುವ ಮೂಲಕ ತಮ್ಮ ಪ್ರತಿಭೆಗೆ ವೇದಿಕೆ ಪಡೆಯಬಹುದಾಗಿದೆ. ಭದ್ರಾವತಿಯಲ್ಲಿಯೇ ಸ್ಟುಡಿಯೋ, ಧ್ವನಿ ಮುದ್ರಣ ಹಾಗೂ ಕಾರ್ಯಕ್ರಮ ಪ್ರಸಾರವಾಗಲಿದೆ. ಇದರಿಂದ ಭದ್ರಾವತಿ ಆಕಾಶವಾಣಿಗೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ.
ಕೋಟಿ ಜನಕ್ಕೆ ಎಫ್‌ಎಂ
ಒಂದು ಕೋಟಿ ಜನರು ಆಕಾಶವಾಣಿ ಎಫ್‌ಎಂ ಕೇಳಬಹುದಾಗಿದೆ. 63ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಭದ್ರಾವತಿ ಆಕಾಶವಾಣಿ ವೃದ್ಧಾಪ್ಯದತ್ತ ಹೆಜ್ಜೆ ಹಾಕುತ್ತಿಲ್ಲ. ಬದಲಿಗೆ ನವ ಯೌವ್ವನದತ್ತ ಸಾಗುತ್ತಿದೆ. ಈಗ ಮಲೆನಾಡು ಹೊಸತನ ಪಡೆಯುತ್ತಿದೆ. ಭದ್ರಾವತಿ ಆಕಾಶವಾಣಿಗೆ ಫೆ.26 ಹೆಮ್ಮೆಯ ದಿನವಾಗಲಿದೆ.
ನೂರು ಕಿಮೀವರೆಗೆ ವಿಸ್ತಾರ
ಶಿವಮೊಗ್ಗದ ನೂತನ ಪ್ರಸಾರ ಕೇಂದ್ರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕೆನಡಾದಿಂದ ತರಿಸಿರುವ 10 ಕಿ.ವಾ. ಸಾಮರ್ಥ್ಯದ ಟ್ರಾನ್ಸ್‌ಮೀಟರ್ ಅಳವಡಿಸಲಾಗಿದೆ. 100 ಕಿ.ಮೀ. ಪ್ರದೇಶದ ವ್ಯಾಪ್ತಿಯವರೆಗೆ ಯಾವುದೇ ಡಾಟಾ ಕೇಬಲ್‌ಗಳ ಸಹಾಯವಿಲ್ಲದೆ ರೇಡಿಯೋ ಆಲಿಸಬಹುದು.
ಇದೀಗ ಇರುವ ಮಧ್ಯಮ ತರಂಗಾಂತರದಿಂದ (ಮೀಡಿಯಂ ವೇವ್)ಫ್ರೀಕ್ವೆನ್ಸಿ ಮಾಡ್ಯುಲೇಷನ್ ಟ್ರಾನ್ಸ್‌ಮಿಷನ್‌ಗೆ ಭದ್ರಾವತಿ ಆಕಾಶವಾಣಿ ಕೇಂದ್ರ ಬದಲಾಗುತ್ತಿದೆ. ಪ್ರಸ್ತುತ ಭದ್ರಾವತಿಯಲ್ಲಿರುವ 1 ಕಿ.ವಾ. ಸಾಮರ್ಥ್ಯದ ಎಫ್‌ಎಂ ಟ್ರಾನ್ಸ್‌ಮೀಟರ್ ಎತ್ತರ 100 ಮೀಟರ್ ಇದ್ದು, ಶಿವಮೊಗ್ಗದಲ್ಲಿ ಸ್ಥಾಪಿಸಿರುವ ಟ್ರಾನ್ಸ್‌ಮೀಟರ್ 150 ಮೀ. ಎತ್ತರದಲ್ಲಿದೆ. 10 ಕಿ.ವಾ. ಟ್ರಾನ್ಸ್‌ಮೀಟರ್ ಅಳವಡಿಸಿರುವುದರಿಂದ ಪ್ರಸಾರ ಸಾಮರ್ಥ್ಯ 10 ಪಟ್ಟು ಹೆಚ್ಚಾಗಲಿದೆ.
ಪ್ರಸ್ತುತ ಕಾರ್ಯಕ್ರಮ ಪ್ರಸಾರ ವ್ಯಾಪ್ತಿ ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಸೀಮಿತವಾಗಿದೆ. ಇನ್ಮುಂದೆ ಹಾವೇರಿ, ಗದಗ, ಚಿತ್ರದುರ್ಗ, ಹಾಸನ, ಉಡುಪಿ, ಉತ್ತರ ಕನ್ನಡ ಹಾಗೂ ತುಮಕೂರು ಜಿಲ್ಲೆಗೂ ಭದ್ರಾವತಿ ಆಕಾಶವಾಣಿ ಕಾರ್ಯಕ್ರಮ ಪ್ರಸಾರವಾಗಲಿದೆ.
ಬೆಳಗ್ಗೆ 11.30ಕ್ಕೆ ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ವೋಕಲ್ ಫಾರ್ ಲೋಕಲ್ ಧ್ಯೇಯದಂತೆ ಸ್ಥಳೀಯ ಪ್ರತಿಭೆಗಳು, ರೈತರು, ಕಲಾವಿದರ ಧ್ವನಿ ಇನ್ನು ಮುಂದೆ ಎಫ್‌ಎಂ ಮೂಲಕ ನೆರೆಹೊರೆಯ ಜಿಲ್ಲೆಯನ್ನೂ ತಲುಪಲಿದೆ. ಮಲೆನಾಡಿನ ಸಣ್ಣ ಹಳ್ಳಿಗಳಲ್ಲೂ ಇನ್ನು ಮುಂದೆ ಆಕಾಶವಾಣಿ ಧ್ವನಿ ಸ್ಪಷ್ಟವಾಗಿ ಕೇಳಲಿದೆ.ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ