ಶಿವಮೊಗ್ಗ ತಾಲೂಕಿನ ಕುಂಸಿ ಠಾಣೆ. 
ಶಿವಮೊಗ್ಗ

ಲಾಡ್ಜ್‌ನಲ್ಲಿ ತಂಗಿದ್ದ ಐವರು ಪೊಲೀಸರ ಮೇಲೆ ಹಲ್ಲೆಗೆ ಯತ್ನ | Attempted Attack

ಪ್ರಮುಖ ಮುಖ್ಯಾಂಶಗಳು

  • ಚೋರಡಿ ಲಾಡ್ಜ್‌ನಲ್ಲಿ ಅನುಮಾನಾಸ್ಪದವಾಗಿ ತಂಗಿದ್ದ ಐವರು
  • ತಪಾಸಣೆಗೆ ತೆರಳಿದ್ದ ಕುಂಸಿ ಠಾಣೆ ಪೊಲೀಸರು
  • ಸ್ಥಳೀಯ ವ್ಯಕ್ತಿಯ ಆಧಾರ್ ಕಾರ್ಡ್ ನೀಡಿ ವಾರದ ಹಿಂದೆ ಲಾಡ್ಜ್‌ನಲ್ಲಿ ಕೊಠಡಿ ಬುಕ್
ಶಿವಮೊಗ್ಗ: ತಾಲೂಕಿನ ಚೋರಡಿಯ ಲಾಡ್ಜ್‌(Choradi Lodge)ನಲ್ಲಿ ಅನುಮಾನಾಸ್ಪದವಾಗಿ ತಂಗಿದ್ದ ಐವರು ತಪಾಸಣೆಗೆ ತೆರಳಿದ್ದ ಕುಂಸಿ ಠಾಣೆ ಪೊಲೀಸರ ಮೇಲೆ ಶನಿವಾರ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದಾರೆ.
ಸ್ಥಳೀಯ ವ್ಯಕ್ತಿಯ ಆಧಾರ್ ಕಾರ್ಡ್(Aadhar Card) ನೀಡಿ ವಾರದ ಹಿಂದೆ ಲಾಡ್ಜ್‌ನಲ್ಲಿ ಕೊಠಡಿ ಪಡೆಯಲಾಗಿತ್ತು. ಐವರು ಒಂದೇ ಕೊಠಡಿಯಲ್ಲಿದ್ದು, ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರೆನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಶನಿವಾರ ಚೋರಡಿಗೆ ತೆರಳಿದ್ದ ಪೊಲೀಸರ ತಪಾಸಣೆಗೆ ಸಹಕರಿಸದ ಯುವಕರು ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. 
ಅವರಿಂದ ಪೊಲೀಸರು ತಪ್ಪಿಸಿಕೊಂಡಿದ್ದು, ಈ ವೇಳೆ ಐವರು ಕೊಠಡಿಯಿಂದ ಹೊರಬಂದು ಕಾರಿನಲ್ಲಿ ಪರಾರಿ(Escape in a car)ಯಾಗಿದ್ದಾರೆ. ತಕ್ಷಣವೇ ಪೊಲೀಸರು ಅವರನ್ನು ಹಿಂಬಾಲಿಸಿದ್ದು, ಆಯನೂರಿನಿಂದ ಮುಂದೆ ಕಾರು ಬಿಟ್ಟು ಪರಾರಿಯಾಗಿದ್ದಾರೆ. ಕಾರು ವಶಕ್ಕೆ ಪಡೆದ ಪೊಲೀಸರು ಕೊಠಡಿ ಪರಿಶೀಲಿಸಿದಾದ ಚಾಕು ಮತ್ತು ಗಾಂಜಾ ಪತ್ತೆಯಾಗಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.