ತುಮರಿ ವೃತ್ತದಲ್ಲಿ ವಾಣಿಶ್ರೀ ಸಾವಿಗೆ ಕಾರಣರಾದವರ ಬಂಧನಕ್ಕೆ ಆಗ್ರಹಿಸಿ ತುಮರಿ ಸಮಾನ ಮನಸ್ಕರ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಆನಂದ ಬಾಳ, ಮಂಜಯ್ಯ ಸಂಸೆ, ಜಿ.ಟಿ.ಸತ್ಯನಾರಾಯಣ ಮತ್ತಿತರರಿದ್ದರು. 
ಶಿವಮೊಗ್ಗ

ವಾಣಿಶ್ರೀ ಸಾವಿಗೆ ಕಾರಣರಾದವರ ಬಂಧಿಸಿ

ಟಿ.ಎಚ್.ಸಂತೋಷ್ ಕುಮಾರ್
ತುಮರಿ: ಬೆಂಗಳೂರಿನಲ್ಲಿ ಆತ್ಮಹತ್ಯೆಯಿಂದ ಮೃತಪಟ್ಟಿರುವ ಬೆಳಮಕ್ಕಿ ನಿವಾಸಿ ವಾಣಿಶ್ರೀ ಸಾವಿಗೆ ಕಾರಣರಾದವರನ್ನು ತಣ ಬಂಧಿಸಬೇಕೆಂದು ಆಗ್ರಹಿಸಿ ತುಮರಿ ಸಮಾನ ಮನಸ್ಕರ ವೇದಿಕೆಯಿಂದ ಶುಕ್ರವಾರ ಸಂಜೆ ಮೇಣದಬತ್ತಿ ಬೆಳಗಿ ಪ್ರತಿಭಟನೆ ನಡೆಸಲಾಯಿತು.
ಟನೆ ನಡೆದು ಆರು ದಿನಗಳು ಕಳೆದರೂ ಆರೋಪಿಗಳನ್ನು ಬಂಧಿಸದ ಪೊಲೀಸ್​ ಇಲಾಖೆಯ ನಿಲುವಿಗೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಯುವ ಮುಖಂಡ ಆನಂದ ಬಾಳ, ಟನೆ ನಡೆದು ಹಲವು ದಿನಗಳಾದರೂ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಗ್ರಾಮೀಣ ಭಾಗದ ಬಡ ಹೆಣ್ಣು ಮಗಳೆಂಬ ಕಾರಣಕ್ಕೆ ಈ ಪ್ರಕರಣವನ್ನು ಕಡೆಗಣಿಸಲಾಗುತ್ತಿದೆ. ಪೊಲೀಸ್​ ಇಲಾಖೆಯ ಇಚ್ಛಾಶಕ್ತಿ ಕೊರತೆ ಅಥವಾ ರಾಜಕೀಯ ಒತ್ತಡವೇ ಈ ವಿಳಂಬಕ್ಕೆ ಕಾರಣ ಎಂಬ ಅನುಮಾನ ಕಾಡುತ್ತಿದೆ ಎಂದರು.
ಆರೋಪಿಯು ವಾಣಿಶ್ರೀ ತಂದೆಗೆ ನಿನ್ನ ಮಗಳನ್ನು ಬಿಡುವುದಿಲ್ಲ ಎಂದು ಬಹಿರಂಗವಾಗಿ ಸವಾಲು ಹಾಕಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಟನೆ ನಡೆದ ದಿನ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸುವ ಬದಲು, ಆತನ ಊರಿಗೆ ತೆರಳಿ ಕಟ್ಟೆ ಪಂಚಾಯಿತಿ ನಡೆಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಮುಖಂಡ ಮಂಜಯ್ಯ ಸಂಸೆ ಮಾತನಾಡಿ, ರಾಜ್ಯದಲ್ಲಿ ಪೊಲೀಸ್​ ಇಲಾಖೆ ಸಂಪೂರ್ಣ ನಿಷ್ಕಿ ್ರಯವಾಗಿದೆ. ಈ ಪ್ರಕರಣದಲ್ಲಿ ರಾಜಕೀಯ ಒತ್ತಡ ಇರುವುದರಿಂದ ವಾಣಿಶ್ರೀ ಅವರಿಗೆ ಸೂಕ್ತ ನ್ಯಾಯ ಸಿಗಲು ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಬೇಕು ಮತ್ತು ಆರೋಪಿಯನ್ನು ತಣ ಬಂಧಿಸಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ಅ.ನಾ.ಚಂದ್ರಶೇಖರ್​, ಜಿ.ಟಿ.ಸತ್ಯನಾರಾಯಣ, ಮೃತ ವಾಣಿಶ್ರೀ ಪಾಲಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.