ಶ್ರೀ ಗಣೇಶೋತ್ಸವ ಸಮಿತಿಯ ಹೊಸನಗರ ಘಟಕದ ನೂತನ ಸಂಚಾಲಕ ಕೆ.ಎಸ್.ವಿನಾಯಕ ಅವರಿಗೆ ಆಯ್ಕೆಯಾದ ಪ್ರತಿ ನೀಡಲಾಯಿತು. ಗಣೇಶ್ ಮಧುಕರ್, ಅನೂಪ್ ಅರವಿಂದ್ ಇತರರಿದ್ದರು. 
ಶಿವಮೊಗ್ಗ

ಗಣೇಶೋತ್ಸವ ಸಮಿತಿ ಸಂಚಾಲಕರ ನೇಮಕ

ಹೊಸನಗರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಖಿಲ ಭಾರತ ಹಿಂದೂ ಮಹಾಸಭಾ ಹೊಸನಗರ ಘಟಕದ ನೂತನ ಸಂಚಾಲನಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಕೆ.ಎಸ್.ವಿನಾಯಕ (ಗೌರವ ಸಂಚಾಲಕ), ಗಣೇಶ್ ಮಧುಕರ್ (ಪ್ರಧಾನ ಸಂಚಾಲಕ), ಅನೂಪ್ ಅರವಿಂದ್ (ಕಾರ್ಯ ಸಂಚಾಲಕ), ಆರ್.ನಾಗರಾಜ್ (ಪ್ರಧಾನ ಕೋಶಾಧಿಕಾರಿ), ಮಂಜುನಾಥ್ ಪೂಜಾರಿ (ಸಾಂಸ್ಕೃತಿಕ ವೇದಿಕೆ ಸಂಚಾಲಕ) ಅವರನ್ನು ಮುಂದಿನ ಎರಡು ವರ್ಷದ ಅವಧಿಗೆ ಆಯ್ಕೆ ಮಾಡಲಾಗಿದೆ.
ಸಮಿತಿಯ ರಮೇಶ್ ಹಲಸಿನಕಟ್ಟೆ, ರಾಧಾಕೃಷ್ಣ ಪೂಜಾರಿ, ಸುರೇಂದ್ರ ಕೋಟ್ಯಾನ್, ಪ್ರಶಾಂತ್, ಸಂತೋಷ್, ಕೆ.ವಿನಯ್‌ಕುಮಾರ್ ಇತರರಿದ್ದರು.