ಮಧು ಬಂಗಾರಪ್ಪ ಸಚಿವರಾಗಿದ್ದಕ್ಕೆ ಸೊರಬದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಬೇಕರಿ ಸಂಘದ ಪದಾಧಿಕಾರಿಗಳು ಪುರಸಭೆ ಎದುರು ಸಂಭ್ರಮಾಚರಣೆ ನಡೆಸಿದರು. ಪ್ರಸನ್ನಕುಮಾರ್, ಸುರೇಂದ್ರ, ಶೋಭರಾಜ್, ರಾಮಪ್ಪ ಇತರರಿದ್ದರು.
ಸೊರಬ: ಮತ್ತೊಮ್ಮೆ ಮಧು ಬಂಗಾರಪ್ಪ ಸಚಿವ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೇಕರಿ ಸಂಘದಿಂದ ಪಟ್ಟಣದ ಪುರಸಭೆ ಎದುರು ಸೋಮವಾರ ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚಿ ಸಂಭ್ರಮಿಸಿದರು.
ಪಟ್ಟಣದ ಬೇಕರಿ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಮಧು ಬಂಗಾರಪ್ಪ ಅವರು ಹಿಂದಿನ ಬಾರಿ ಶಿಕ್ಷಣ ಖಾತೆಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಇಲಾಖೆಯಲ್ಲಿ ಸಮಗ್ರ ಬದಲಾವಣೆ ತಂದಿದ್ದಾರೆ ಎಂದರು. ಅಲ್ಲದೆ ಕೆಪಿಎಸ್ ಶಾಲೆಗಳ ಮಂಜೂರಾತಿ, ಶಿಕ್ಷಕರ ವರ್ಗಾವಣೆ ಸೇರಿ ಹಲವು ಸುಧಾರಣೆಗಳ ಮೂಲಕ ಜನರ ಹಾಗೂ ಶಿಕ್ಷಕರ ಮನಸ್ಸು ಗೆದ್ದಿದ್ದರು. ಅವರ ಉತ್ತಮ ಆಡಳಿತಕ್ಕೆ ಪಕ್ಷದ ಹೈಕಮಾಂಡ್ ಮೊತ್ತೊಮ್ಮೆ ಅವರ ಮೇಲೆ ವಿಶ್ವಾಸ ಇಟ್ಟು ಮಂತ್ರಿ ಮಾಡಿದೆ ಎಂದರು.
ಸುರೇಂದ್ರ, ಶೋಭರಾಜ್, ರಾಮಪ್ಪ, ಓಂಕಾರಪ್ಪ, ಬೆನಕೇಶ್, ರೇವಣಪ್ಪ, ಮನೋಹರ್, ಡಾಕಪ್ಪ, ಹರೀಶ್, ಅನ್ಸರ್ ಅಹ್ಮದ್, ಫಯಾಜ್ ರಶೀದ್ ಮತ್ತಿತರರು ಭಾಗವಹಿಸಿದ್ದರು.