ಶಿವಮೊಗ್ಗದಲ್ಲಿ ವಧು-ವರನಿಗೆ ಶುಭ ಕೋರಿದ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ. 
ಶಿವಮೊಗ್ಗ

ಮದುವೆಗೆ ತರಾತುರಿಯಲ್ಲಿ ಬಂದು ವಾಪಸ್ಸಾದ ಅಣ್ಣಾಮಲೈ lAnnamalai

ಪ್ರಮುಖ ಮುಖ್ಯಾಂಶಗಳು

  • ಮದುವೆ ಸಮಾರಂಭಕ್ಕೆ ಬಂದಿದ್ದ ಅಣ್ಣಾಮಲೈಗೆ ವಿಮಾನ ಕ್ಯಾನ್ಸಲ್ ಬಿಸಿ
  • ವಧು-ವರನಿಗೆ ಶುಭ ಕೋರಿ ಮರಳಿದ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ
ಶಿವಮೊಗ್ಗ: ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ(Annamalai) ಸೋಮವಾರ ಶಿವಮೊಗ್ಗದಲ್ಲಿ ನಡೆದ ಸ್ನೇಹಿತನ ಪುತ್ರನ ಮದುವೆ(wedding) ಸಮಾರಂಭಕ್ಕೆ ತರಾತುರಿಯಲ್ಲಿ ಬಂದು ವಾಪಸ್ಸಾದರು.
ಬೊಮ್ಮನಕಟ್ಟೆಯ ಕೆ.ಎನ್.ಶ್ರೀದೇವಿ-ಕುಮಾರೇಶ್ ಮೊದಲಿಯರ್ ಅವರ ಪುತ್ರ ಪ್ರವೀಣ್ ಅವರ ವಿವಾಹ ಬೆಂಗಳೂರಿನ ಕಲಾವತಿ-ತ್ಯಾಗರಾಜನ್ ದಂಪತಿ ಪುತ್ರಿ ಚೈತ್ರಾ ಜತೆ ವಿಮಾನ ನಿಲ್ದಾಣ(Airport) ರಸ್ತೆಯ ಮಲ್ಲೇಶ್ ಕನ್ವೆನ್ಷಲ್ ಹಾಲ್‌ನಲ್ಲಿ ನಿಗದಿಯಾಗಿತ್ತು. 
ಈ ನಡುವೆ ಸ್ನೇಹಿತನ ಪುತ್ರನ ಮದುವೆ ಸಮಾರಂಭಕ್ಕೆ ಬಂದಿದ್ದ ಅಣ್ಣಾಮಲೈ ಅವರಿಗೆ ವಿಮಾನ ಕ್ಯಾನ್ಸಲ್ ಬಿಸಿ ತಟ್ಟಿದೆ. ಹಾಗಾಗಿ ತರಾತುರಿಯಲ್ಲಿ ಕಲ್ಯಾಣ ಮಂಟಪಕ್ಕೆ ತೆರಳಿ ವಧು-ವರನಿಗೆ ಶುಭ ಕೋರಿ ಮರಳಿದರು. 
ಚೆನ್ನೈನಿಂದ ಶಿವಮೊಗ್ಗಕ್ಕೆ ನೇರವಾಗಿ ವಿಮಾನದಲ್ಲಿ ಆಗಮಿಸಬೇಕಿತ್ತು. ಆದರೆ ಸ್ಪೈಸ್‌ಜೆಟ್ ವಿಮಾನ ರದ್ದಾಗಿದ್ದರಿಂದ ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ವಿಮಾನದಲ್ಲಿ ಶಿವಮೊಗ್ಗಕ್ಕೆ ಬಂದಿದ್ದರು. ಅದೇ ವಿಮಾನದಲ್ಲಿ ಪುನಃ ಬೆಂಗಳೂರಿಗೆ ಮರಳಬೇಕಿತ್ತು. ಹಾಗಾಗಿ ತರಾತುರಿಯಲ್ಲಿ ಆಗಮಿಸಿ ವಾಪಸ್ಸಾದರು ಎನ್ನಲಾಗಿದೆ.
ತಮಿಳುನಾಡು ಬಿಜೆಪಿಯೊಳಗಿನ ಸಂಘರ್ಷ, ಇತ್ತೀಚೆಗೆ ಅಣ್ಣಾಮಲೈ ನೀಡಿದ್ದ ಹೇಳಿಕೆ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ನ.10ರ ನಂತರ ಪುನಃ ಶಿವಮೊಗ್ಗಕ್ಕೆ ಬರುತ್ತೇನೆ. ಆಗ ಮಾತನಾಡುತ್ತೇನೆಂದು ಹೊರಟು ಹೋದರು.