ತೀರ್ಥಹಳ್ಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ೇತ್ರಗಳ ಗಣ್ಯರನ್ನು ಗೌರವಿಸಲಾಯಿತು. ಆರಗ ಾನೇಂದ್ರ, ಕಿಮ್ಮನೆ ರತ್ನಾಕರ, ಜಿ.ಆರ್​.ಅಜ್ಜಯ್ಯ, ಪ್ರಭಾಕರ ಕಾರಂತ ಮತ್ತಿತರರಿದ್ದರು. 
ಶಿವಮೊಗ್ಗ

ಒಂದೇ ಸ್ಥಳದಲ್ಲಿ 25ಕ್ಕೂ ಹೆಚ್ಚು ಮರಗಳಿದ್ದರೆ ಡೀಮ್ಡ್​ ಫಾರೆಸ್ಟ್​ ಪರಿಗಣನೆ

ಪ್ರಮುಖ ಮುಖ್ಯಾಂಶಗಳು

  • ಅರಣ್ಯ ಕಾಯ್ದೆ ಗೊಂದಲದಿಂದ ಹಕ್ಕುಪತ್ರ ವಿತರಣೆಗೆ ತೊಡಕು
  • ಶಾಸಕ ಆರಗ ಾನೇಂದ್ರ ಅಸಮಾಧಾನ
  • ಪತ್ರಿಕಾ ದಿನಾಚರಣೆಯಲ್ಲಿ ರೈತರ ಸಮಸ್ಯೆ ಕುರಿತು ಸಂವಾದ
ತೀರ್ಥಹಳ್ಳಿ: 

ಮಲೆನಾಡು ಭಾಗದ ಭೂಮಿ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ಮುಂದಾದರೆ ಕೆಲವು ಶಾಸಕರಿಗೆ ಇದು ಅರ್ಥವಾಗುವುದಿಲ್ಲ. ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದರೆ ನಗರಗಳ ರಿಯಲ್​ ಎಸ್ಟೇಟ್​ ವ್ಯವಹಾರದ ರೀತಿ ಪರಿಗಣಿಸುತ್ತಾರೆ ಎಂದು ಶಾಸಕ ಆರಗ ಾನೇಂದ್ರ ಬೇಸರ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಶುಕ್ರವಾರ ತಾಲೂಕು ಪತ್ರಕರ್ತರ ಸಂ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಅರಣ್ಯ, ಕಂದಾಯ, ಮುಳುಗಡೆ ಯೋಜನೆಯ ರೈತರ ಸಮಸ್ಯೆಗೆ ಸ್ಪಂದನೆ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಶಾಸಕನಾದ ನನಗೆ ಹಕ್ಕುಪತ್ರ ವಿತರಿಸುವಾಗ ಸಿಗುವ ಸಂತೋಷ ಯಾವ ಸಭೆಯೂ ಕೊಡುವುದಿಲ್ಲ. ಸೊಪ್ಪಿನಬೆಟ್ಟ, ಅರಣ್ಯದ ಸಮಸ್ಯೆ ಪರಿಹಾರವಾಗದ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಹಕ್ಕುಪತ್ರ ವಿತರಿಸಲು ಆಗುತ್ತಿಲ್ಲ. ಅಧಿಸೂಚಿತ ಪ್ರದೇಶ ಎಂಬುದು ಸುಳ್ಳುಗಳಿಂದ ಕೂಡಿದೆ. ಕಾನೂನಿಗೆ ತಕ್ಕಂತೆ ಅಧಿಕಾರಿಗಳು ಸಭೆ ನಡೆಸಿ ಸಹಿ ಪಡೆದು ಅಧಿಸೂಚನೆ ಹೊರಡಿಸುತ್ತಾರೆ. ಇದರಿಂದ ಸ್ಥಳಿಯ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿವಮೊಗ್ಗ ಉಪ ವಿಭಾಗದ ಉಪ ಅರಣ್ಯ ಸಂರಣಾಧಿಕಾರಿ ಜಿ.ಆರ್​.ಅಜ್ಜಯ್ಯ ಮಾತನಾಡಿ, ಅಧಿಕಾರಿಗಳು ಕಾನೂನು ಬಿಟ್ಟು ಏನನ್ನೂ ಮಾಡಲು ಆಗುವುದಿಲ್ಲ. ಸ್ಥಳಿಯರ ನೆರವಿನಿಂದ ಅರಣ್ಯ ಇಲಾಖೆ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಲು ಸಾಧ್ಯ. ಈಗಾಗಲೇ ನಿಷ್ಕ್ರಿಯಗೊಂಡ ಗ್ರಾಮ ಅರಣ್ಯ ಸಮಿತಿ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗುವುದು. ಸಂರತ ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ಗಿಡ ನೆಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.
ಲೇಖಕ ಪ್ರಭಾಕರ ಕಾರಂತ ಮಾತನಾಡಿ, ಒಂದು ಹೆಕ್ಟೇರ್​ ಪ್ರದೇಶದಲ್ಲಿ 25 ಮರಗಳು ಬೆಳೆದಿದ್ದರೆ ಅದನ್ನು ಡೀಮ್ಡ್​ ಫಾರೆಸ್ಟ್​ ಪಟ್ಟಿಗೆ ಸೇರಿಸಲಾಗುತ್ತದೆ. ಮಲೆನಾಡಿನ ವಾಸದ ಮನೆ ಎಂದರೆ ಸೌದೆ ಕೊಟ್ಟಿಗೆ, ಒಕ್ಕಲು ಕಣ, ಗೊಬ್ಬರ ಗುಂಡಿ, ಕೋಳಿ ಒಡ್ಡಿ, ಗಾಡಿ, ಜಾನುವಾರು ಕೊಟ್ಟಿಗೆ ಸೇರಿ ಒಂದು ಎಕರೆ ಪ್ರದೇಶವಾಗುತ್ತದೆ. ಈ ಪ್ರದೇಶದಲ್ಲಿಯೇ ಕನಿಷ್ಠ 30ಕ್ಕೂ ಹೆಚ್ಚು ಮರಗಳು ಬೆಳೆದಿರುತ್ತಾರೆ. ದಾಖಲೆ ಇಲ್ಲದ ಕಾರಣ ಅವೆಲ್ಲವೂ ಪರಿಭಾವಿತ ಅರಣ್ಯಕ್ಕೆ ಸೇರಿಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರೈತ ಮುಖಂಡ ಕೋಡ್ಲು ವೆಂಕಟೇಶ್​ ಕಾರ್ಯಕ್ರಮ ಉದ್ಘಾಟಿಸಿದರು. ಬಿಜೆಪಿ ಮುಖಂಡ ನವೀನ್​ ಹೆದ್ದೂರು, ಕಾಂಗ್ರೆಸ್​ ಮುಖಂಡ ಆದರ್ಶ ಹುಂಚದಕಟ್ಟೆ, ಪಪಂ ಅಧ್ಯ ರತ್ನಾಕರ ಶೆಟ್ಟಿ, ಪತ್ರಕರ್ತರ ಸಂದ ತಾಲೂಕು ಅಧ್ಯ ಮೋಹನ್​ ಮುನ್ನೂರು, ತಹಸೀಲ್ದಾರ್​ ಎಸ್​.ರಂಜಿತ್​, ಇಒ ಎನ್​.ಶೈಲಾ, ಪತ್ರಕರ್ತರಾದ ರವಿಕುಮಾರ್​, ರಂಜಿತ್​, ಸತ್ಯನಾರಾಯಣ ಇದ್ದರು. ಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. 
ನ್ಯಾಯಾಂಗ ವ್ಯವಸ್ಥೆ ಮೇಲೆ ಬೇಸರ
ಪಾರಂಪರಿಕ ಅರಣ್ಯ ಕಾನೂನು ಇದ್ದರೂ ಇಂದಿಗೂ ಹಕ್ಕುಗಳು ಮಾತ್ರ ಸಿಕ್ಕಿಲ್ಲ. ನ್ಯಾಯಾಲಯಕ್ಕೆ ಹೋದರೆ ಸಂತ್ರಸ್ತರನ್ನು ವಾಪಸ್​ ಕಳುಹಿಸಲಾಗುತ್ತಿದೆ. ವಕೀಲನಾದ ನನಗೆ ನ್ಯಾಯಾಲಯದ ಮೇಲಿನ ಭರವಸೆ ಕಳೆದು ಹೋಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಬೇಸರ ವ್ಯಕ್ತಪಡಿಸಿದರು. ಮಾಜಿ ಶಾಸಕ ಕಡಿದಾಳು ದಿವಾಕರ್​, ನಾನು, ಆರಗ ಜ್ಞಾನೇಂದ್ರ ಮಂಜೂರು ಮಾಡಿಸಿದ 400ಕ್ಕೂ ಹೆಚ್ಚು ಬಗರ್​ಹುಕುಂ ಹಕ್ಕುಪತ್ರ ರದ್ದಾಗುವ ಸ್ಥಿತಿಗೆ ತಲುಪಿವೆ. ಪಾತೀತವಾಗಿ ನಾವೆಲ್ಲರೂ ಸಣ್ಣ ಒತ್ತುವರಿದಾರರ ಪರವಾಗಿದ್ದೇವೆ ಎಂದರು.