ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. 
ಶಿವಮೊಗ್ಗ

ಕುಗ್ರಾಮ ಬೇಳೂರು ಸರ್ಕಾರಿ ಶಾಲೆಗೆ ಅಮೃತೋತ್ಸವದ ಸಂಭ್ರಮ

ರವಿ ಬಿದನೂರು
ಹೊಸನಗರ: ಸಂಚಾರ, ಸಂಪರ್ಕ, ಆರೋಗ್ಯ, ಶಿಣದಿಂದ ವಂಚಿತವಾಗಿರುವ ಬೇಳೂರು ಗ್ರಾಮದ ಸರ್ಕಾರಿ ಶಾಲೆ ಇದೀಗ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ.
ಬೇಳೂರು ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ 8 ದಶಕಗಳನ್ನು ಪೂರೈಸಿದೆ. ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಒಳಗೆ ಕೂತು ಪಾಠ ಕೇಳಲು ಮಕ್ಕಳಿಗೆ ಭಯ ಹುಟ್ಟಿಸುವಂತಿದೆ. ಆದರೂ 35 ಮಕ್ಕಳು ಇಲ್ಲಿ ಅನಿವಾರ್ಯವಾಗಿ ಪಾಠ ಕೇಳುತ್ತಿದ್ದಾರೆ. ಶಾಲಾ ಕಟ್ಟಡದ ಬಗ್ಗೆ ಗ್ರಾಮಸ್ಥರು ಕೊಟ್ಟ ಮನವಿಗಳಿಗೆ ಲೆಕ್ಕವಿಲ್ಲ.
ಇಲ್ಲಿನ ಶಿಣಕ್ಕೆ ಮಜರೆ ಹಳ್ಳಿಗಳಿಂದ ಮಕ್ಕಳು 2&3 ಕಿಮೀ ದೂರದಿಂದ ನಡೆದೇ ಬರಬೇಕು. ಪ್ರಾಥಮಿಕ ಶಿಣದ ನಂತರ ದೂರದ ನಗರ, ಹೊಸನಗರಕ್ಕೆ ಶಿಣಕ್ಕೆ ಹೋಗಬೇಕು. ಬಸ್​ ವ್ಯವಸ್ಥೆ ಇರದ ಕಾರಣ ದಿನನಿತ್ಯ 5 ರಿಂದ 8 ಕಿಮೀ ನಡೆದೇ ಹೋಗಬೇಕು. ಕೆಲವರು ಶಾಲೆ ದೂರದ ಕಾರಣದಿಂದಾಗಿ ಶಿಣವನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಕಣ್ಕಿ, ವಡ್ಡಿನಬೈಲು, ಕೌರಿ, ಬೇಳೂರು ಮಕ್ಕಳಿಗೆ ಇರುವ ಏಕೈಕ ಹಿರಿಯ ಪ್ರಾಥಮಿಕ ಶಾಲೆ ಇದು. ಈ ಶಾಲೆಗೆ ಆಂಗ್ಲ ಮಾಧ್ಯಮ ನೀಡಿದರೆ ವಿದ್ಯಾರ್ಥಿಗಳ ಸಂಖ್ಯೆ ನೂರರ ಗಡಿ ದಾಟುತ್ತದೆ ಎಂಬುದು ಗ್ರಾಮಸ್ಥರ ವಾದ. ಬೇಳೂರು ಗ್ರಾಮದಲ್ಲಿ ಆಟದ ಮೈದಾನವಿದೆ. ಅದು ಮೈದಾನ ಎಂದು ಹೇಳಿದರೆ ಮಾತ್ರ ಅರ್ಥ ಮಾಡಿಕೊಳ್ಳಬಹುದು.
ಇಂಥದ್ದೊಂದು ಸಮಸ್ಯೆ ಹೊಂದಿರುವ ಕುಗ್ರಾಮ ಬೇಳೂರಿನಲ್ಲಿ 1950ರಲ್ಲಿ ಆರಂಭಗೊಂಡ ಸರ್ಕಾರಿ ಪ್ರಾಥಮಿಕ ಶಾಲೆ ೆ.18 ಮತ್ತು 19ರಂದು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ತವರೂರ ಬಾಗಿನ ಎಂಬ ಕಾರ್ಯಕ್ರಮಕ್ಕೆ ಬೇಳೂರು ಸಾಯಾಗುತ್ತಿದ್ದು, ಊರಿನೆಲ್ಲೆಡೆ ಸಂಭ್ರಮ ಮನೆ ಮಾಡಿದೆ.
ಹೀಗಿದೆ ಊರಿನ ಚಿತ್ರಣ
ಅಂಡಗದೋದೂರು ಗ್ರಾಪಂ ವ್ಯಾಪ್ತಿಯ ಬೇಳೂರು ಗ್ರಾಮದಲ್ಲಿ 1500ಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಕಣ್ಕಿ, ಬೇಳೂರು, ವಡ್ಡಿನಬೈಲು, ಮಕ್ಕಿಮನೆ, ಕೌರಿ, ಬೈಸೆ, ಬಜೇಕುಂಬ್ರಿ, ಮೇಲಿನಕೊಪ್ಪ, ಮಠದಹಳ್ಳಿ, ಬಾಳೆಗದ್ದೆ, ಕೆಳಗಿನಕೊಪ್ಪ, ಹೆನ್ನೇಬೆಲು, ಚಿಮಡಿಗದ್ದೆ, ಕುಂಟೆ ಕುಂಬ್ರಿ ಸೇರಿ ಹತ್ತಾರು ಮಜರೆ ಹಳ್ಳಿಗಳನ್ನು ಈ ಗ್ರಾಮ ಒಳಗೊಂಡಿದೆ. ಹೊಸನಗರದಿಂದ ಹಿಲ್ಕುಂಜಿ ಮಾರ್ಗವಾಗಿ ಬೇಳೂರಿಗೆ 17 ಕಿ.ಮೀ ದೂರ. ಪ್ರತಿಯೊಂದಕ್ಕೂ ನಗರ, ತಾಲೂಕು ಕೇಂದ್ರಕ್ಕೆ ಹೋಗಬೇಕು. ಆದರೆ ಬಸ್​ ಸಂಪರ್ಕ ವ್ಯವಸ್ಥೆಯೇ ಇಲ್ಲ. ಇರುವುದೊಂದೇ ಸರ್ಕಾರಿ ಬಸ್​. ಅದು 27 ಕಿ.ಮೀ ದೂರದ ತೀರ್ಥಹಳ್ಳಿಗೆ. ಬೆಳಗ್ಗೆ ಹೋದರೆ ಸಂಜೆ ವಾಪಸಾಗುತ್ತದೆ. ಪ್ರತಿಯೊಂದಕ್ಕೂ ಬೇಳೂರು ಗ್ರಾಮದಿಂದ ಹಿಲ್ಕುಂಜಿವರೆಗೆ 5 ಕಿ.ಮೀ ನಡೆದು ಹೋಗುವ ಅನಿವಾರ್ಯತೆ ಇದೆ.
ಬೇಳೂರು ಗ್ರಾಮ ಅಭಿವೃದ್ಧಿ ವಂಚಿತವಾಗಿದೆ. ಇರುವ ಸರ್ಕಾರಿ ಶಾಲಾ ಕಟ್ಟಡಕ್ಕೆ 80 ವರ್ಷವಾಗಿದ್ದು, ಕಟ್ಟಡ ಶಿಥಿಲವಾಗಿದೆ. ಮಕ್ಕಳ ಸಂಖ್ಯೆ ತುಂಬ ಕಡಿಮೆ ಇದೆ. ಆಂಗ್ಲ ಮಾಧ್ಯಮ ಮಾನ್ಯತೆ ನೀಡಿದರೆ ಅನುಕೂಲ. ರಂಗಮಂದಿರದ ಅವಶ್ಯಕತೆ ಇದೆ.
> ವಿವೇಕಾನಂದ, ಎಸ್​ಡಿಎಂಸಿ ಅಧ್ಯ
ಬೇಳೂರು ಗ್ರಾಮವು ಸಂಚಾರ, ಸಂಪರ್ಕ ಸೇರಿ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಇದೀಗ ಈ ಗ್ರಾಮವನ್ನು ಸಂಬಂಧವೇ ಇಲ್ಲದ ಹುಂಚ ಜಿಪಂ ಕೇತ್ರ ವ್ಯಾಪ್ತಿಗೆ ಸೇರಿಸಲಾಗಿದೆ. ಕೂಡಲೇ ಇದನ್ನು ರದ್ದು ಪಡಿಸಬೇಕು. ಸದರಿ ಶಾಲೆಗೆ ಶಿಕರು, ಕಟ್ಟಡ ಕೊರತೆ ಸಮಸ್ಯೆ ನೀಗಿಸಬೇಕು.
> ಈಶ್ವರಪ್ಪ ಗೌಡ, ಪೀಕಾರ್ಡ್​ ಬ್ಯಾಂಕ್​ ಸದಸ್ಯ