ಆನವೇರಿಯಲ್ಲಿ ಸರ್ಕಾರಿ ಪ್ರೌಢಶಾಲೆಯ 2000ನೇ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ನಿವೃತ್ತ ಉಪಪ್ರಾಚಾರ್ಯ ಟಿ.ಮಂಜಪ್ಪ ಉದ್ಘಾಟಿಸಿದರು. ಮಲ್ಲೇಶಪ್ಪ, ಬಿ.ಓಂಕಾರಪ್ಪ, ಹಾಲೇಶಪ್ಪ, ಕೃಷ್ಣಮೂರ್ತಿ, ಡಿ.ಜಗದೀಶ್ ಇತರರಿದ್ದರು. 
ಶಿವಮೊಗ್ಗ

ಶಿಕ್ಷಣದ ಜತೆಗೆ ಸಂಸ್ಕಾರ ಅವಶ್ಯ

ಹೊಳೆಹೊನ್ನೂರು: ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಸಿಕ್ಕಾಗ ಮಾತ್ರ ಮಾದರಿಯಾಗಿ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ನಿವೃತ್ತ ಮುಖ್ಯ ಶಿಕ್ಷಕ ಮಲ್ಲೇಶಪ್ಪ ಹೇಳಿದರು.

ಆನವೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 2000ನೇ ಸಾಲಿನ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಮನಸಿನಲ್ಲಿ ಬೆಳಕು ಮೂಡಿಸುವವನೇ ನಿಜವಾದ ಶಿಕ್ಷಕ. ವೃತ್ತಿಯಲ್ಲಿ ಯಶಸ್ವಿಯಾದ ಶಿಕ್ಷಕನಿಂದ ಮಾತ್ರ ಸಮಾಜ ಕಟ್ಟುವ ಕೆಲಸ ಸಾಧ್ಯ. ಗ್ರಾಮದ ಹಿರಿಯ ಮುಖಂಡರ ಪ್ರಯತ್ನದ ಫಲವಾಗಿ ಗ್ರಾಮೀಣ ಭಾಗದಲ್ಲಿ ಉತ್ತಮ ಶಾಲಾ ಕಾಲೇಜುಗಳು ನಿರ್ಮಾಣವಾದವು. ಮೂಲ ಸೌಕರ್ಯಗಳ ಕೊರತೆ ನಡುವೆಯೂ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಿದ ಶ್ರೇಯಸ್ಸು ಅಂದಿನ ಶಿಕ್ಷಕರಿಗೆ ಸಲ್ಲುತದೆ ಎಂದರು.

ಎಷ್ಟೇ ಉನ್ನತ ಶಿಕ್ಷಣ ಪಡೆದರೂ ವಿನಯವನ್ನು ಎಂದಿಗೂ ಮರೆಯಬಾರದು. ಮನೆಯ ಹಿರಿಯರನ್ನು ಕಡೆಗಣಿಸಿದವರ ಅಂತ್ಯದ ದಿನಗಳು ಮತ್ತಷ್ಟು ಕಠೋರವಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.

ನಿವೃತ್ತ ಉಪ ಪ್ರಾಚಾರ್ಯ ಟಿ.ಮಂಜಪ್ಪ, ಬಿ.ಓಂಕಾರಪ್ಪ, ಹಾಲೇಶಪ್ಪ, ಕೃಷ್ಣಮೂರ್ತಿ, ಡಿ.ಜಗದೀಶ್, ಜಿ.ಆರ್.ವೀರಪ್ಪ, ಬಿ.ಸಿ.ನಾಗರಾಜ್, ಶರಾವತಿ, ಲೀಲಾವತಿ, ಶಂಭೋಜಿ ರಾವ್, ರಂಗಪ್ಪ ಇತರರಿದ್ದರು.