ಹುಲಿಕಲ್ ಘಾಟ್ ಮಾರ್ಗದಲ್ಲಿ 9 ಟನ್ ಒಳಗಿನ ಲಾರಿಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವಂತೆ ಚಾಲಕರು ಮತ್ತು ಮಾಲೀಕರು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಮನವಿ ಸಲ್ಲಿಸಿದರು. ಹಿದಾಯತ್, ಗೋಪಾಲ ಶೆಟ್ಟಿ, ರಾಕೇಶ್, ಬಸಪ್ಪ ಗೌಡ ಇತರರಿದ್ದರು. 
ಶಿವಮೊಗ್ಗ

9 ಟನ್ ಒಳಗಿನ ಲಾರಿಗಳಿಗೂ ಅವಕಾಶ ಕೊಡಿ | Lorry drivers Appeal

ಹೊಸನಗರ: ಹುಲಿಕಲ್ ಘಾಟ್ ಮಾರ್ಗದಲ್ಲಿ 9 ಟನ್ ಒಳಗಿನ ಲಾರಿಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಸರ್ಕಾರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಲಾರಿ ಚಾಲಕರು ಮನವಿ ಸಲ್ಲಿಸಿದರು.
ಈಗಾಗಲೇ 9 ಟನ್ ಒಳಗಿನ ಮಜಲು ಸರ್ವೀಸ್ ಬಸ್‌ಗಳು, ಲಘು ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸರಕು, ಅಗತ್ಯ ಪದಾರ್ಥಗಳನ್ನು ಸಾಗಿಸುವ 6 ಚಕ್ರದ ಲಾರಿಗೆ ಅವಕಾಶವಿಲ್ಲ. ಇದರಿಂದ 50 ಕಿ.ಮೀ ಹೆಚ್ಚುವರಿ ದಾರಿ ಕ್ರಮಿಸಬೇಕಿದೆ ಎಂದು ಚಾಲಕರು ಮನವರಿಕೆ ಮಾಡಿಕೊಟ್ಟರು.
ಜಿಲ್ಲಾಧಿಕಾರಿ ಆದೇಶದಂತೆ 9 ಟನ್ ವ್ಯಾಪ್ತಿಯ ವಾಹನಗಳಿಗೆ ಅವಕಾಶ ನೀಡಲಾಗಿದೆ. ಇದರನ್ವಯ 6 ಚಕ್ರದ ಖಾಲಿ ಲಾರಿಗಳು 6ರಿಂದ 7 ಟನ್ ವ್ಯಾಪ್ತಿಗೆ ಬರುತ್ತದೆ. ಖಾಲಿ ಲಾರಿಗಳಿಗೆ ಅವಕಾಶ ನೀಡಿದಲ್ಲಿ ಒಂದು ಕಡೆಯ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಕಿಮ್ಮನೆ ರತ್ನಾಕರ್, ಜಿಲ್ಲಾಧಿಕಾರಿ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಗಮನಕ್ಕೆ ತರಲಾಗಿದೆ. ಸಚಿವರು ಕೂಡ ಈ ಬಗ್ಗೆ ಗಮನ ಹರಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಹಿದಾಯತ್, ಗೋಪಾಲ ಶೆಟ್ಟಿ, ರಾಕೇಶ್, ಬಸಪ್ಪ ಗೌಡ, ಹಂಝಾ, ರಾಜೇಂದ್ರ ಬೈಸೆ, ಡೇವಿಡ್, ಆನಂದ, ಲಾರಿ ಚಾಲಕರು ಮತ್ತು ಮಾಲೀಕರು ಉಪಸ್ಥಿತರಿದ್ದರು.