ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡ್ಡೇರಿ ಗ್ರಾಮದಲ್ಲಿ ಸುಜಾತಾ ಗಣಪತಿ ಎಂಬುವರ ತೋಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೆಳೆ ನಾಶಪಡಿಸಿರುವ ಸ್ಥಳಕ್ಕೆ ಮಾಜಿ ಸಚಿವ ಹರತಾಳು ಹಾಲಪ್ಪ ಗುರುವಾರ ಭೇಟಿನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. 
ಶಿವಮೊಗ್ಗ

ಅಡಿಕೆ ಬೆಳೆ ನಾಶ ಅಮಾನವೀಯ ಕೃತ್ಯ

ತ್ಯಾಗರ್ತಿ: ಅಡ್ಡೇರಿ ಗ್ರಾಮದ ಬಡ ಕುಟುಂಬದ ಜಮೀನಿಗೆ ನುಗ್ಗಿ ಅಡಿಕೆ ಗಿಡ ಕಿತ್ತು ಹಾಕಿರುವುದು ಅಮಾನವೀಯ ಕೃತ್ಯ. ಅಧಿಕಾರಿ ವಿರುದ್ಧ ಕ್ರಮ ಜರುಗಿಸುವ ಜತೆಗೆ ಕುಟುಂಬಕ್ಕೆ ರಣೆ ನೀಡಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಒತ್ತಾಯಿಸಿದರು.
ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡ್ಡೇರಿ ಗ್ರಾಮದಲ್ಲಿ ಸುಜಾತಾ ಗಣಪತಿ ಎಂಬುವರ ತೋಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೆಳೆ ನಾಶಪಡಿಸಿರುವ ಸ್ಥಳಕ್ಕೆ ಗುರುವಾರ ಭೇಟಿ ನೀಡಿ, ಸಾಗರ ಉಪ ಅರಣ್ಯ ಸಂರಣಾಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಅಡ್ಡೇರಿ ಗ್ರಾಮದ ಸುಜಾತಾ ಗಣಪತಿ ಎಂಬುವವರು ನಲವತ್ತು, ಐವತ್ತು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಕಾನೂನಾತ್ಮಕವಾಗಿ ಕೆಲವು ಸಮಸ್ಯೆಗಳಿದ್ದರೂ ಮಾನವೀಯತೆ ದೃಷ್ಟಿಯಿಂದ ಅರಣ್ಯ ಇಲಾಖೆ ರೈತರನ್ನು ಕಾಣಬೇಕು. ರಾಜ್ಯ ಸರ್ಕಾರ ಸಹ ಬೆಳೆ ನಾಶ ಮಾಡಬಾರದು ಎಂದು ಅರಣ್ಯ ಇಲಾಖೆಗೆ ಸೂಚನೆ ನೀಡಿದೆ. ಆದರೆ ಗೀತಾ ನಾಯ್ಕ್​ ಎಂಬ ಅರಣ್ಯಾಧಿಕಾರಿ ತೋಟದ ಫಸಲು ಕಿತ್ತಿದ್ದಾರೆ. ತಾಲೂಕಿನಲ್ಲಿ ಎಂಪಿಎಂ ಸೇರಿ ಅನೇಕ ಕಡೆಗಳಲ್ಲಿ ಅರಣ್ಯ ಲೂಟಿ ನಡೆಯುತ್ತಿದೆ. ಇದರ ಬಗ್ಗೆ ಗಮನ ಹರಿಸದ ಅರಣ್ಯ ಇಲಾಖೆ ಬಡ ರೈತರ ಮೇಲೆ ದೌರ್ಜನ್ಯ ಎಸಗಿದ್ದು ಸರಿಯಲ್ಲ ಎಂದು ದೂರಿದರು.
ಮುಖಂಡರಾದ ರತ್ನಾಕರ ಹೊನಗೋಡು, ಮಲ್ಲಿಕಾರ್ಜುನ ಹಕ್ರೆ, ದೇವೇಂದ್ರಪ್ಪ, ಗಣೇಶ ಪ್ರಸಾದ್​, ಮಧುರಾ ಶಿವಾನಂದ್​, ಸುಜಾತಾ ಗಣಪತಿ, ಕೃಷ್ಣಮೂರ್ತಿ, ಶಾಂತಪ್ಪ ಗೌಡ, ಮಲ್ಲಿಕಾ ಇತರರಿದ್ದರು.
ತಾಲೂಕಿನಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸೇರಿದಂತೆ 60&70 ವರ್ಷಗಳಿಂದ ಅರಣ್ಯಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದ ಸಾವಿರಾರು ಕುಟುಂಬಗಳಿವೆ. ಇಂತಹ ಟನೆಗಳಿಂದ ಅವರೆಲ್ಲ ಆತಂಕ ಪಡುವಂತಾಗುತ್ತದೆ. ೇತ್ರದ ಶಾಸಕರು ಕಾಲಕಾಲಕ್ಕೆ ಸಭೆ ಕರೆದು ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿದರೆ ಇಂತಹ ಟನೆ ನಡೆಯುವುದಿಲ್ಲ. ಆಡಳಿತ ವೈಫಲ್ಯವೇ ತಾಲೂಕಿನಲ್ಲಿ ರೈತರ ಜಮೀನು ಬಿಡಿಸಲು, ಫಸಲು ನಾಶ ಮಾಡಲು ಕಾರಣ. ಅಡ್ಡೇರಿ ಪ್ರಕರಣದಲ್ಲಿ ನ್ಯಾಯ ದೊರಕಿಸುವುದಾಗಿ ಡಿಎಫ್​ಒ ಭರವಸೆ ನೀಡಿದ್ದಾರೆ.
> ಹರತಾಳು ಹಾಲಪ್ಪ, ಮಾಜಿ ಸಚಿವ