ಜೆಎನ್‌ಎನ್ಇ ಕಾಲೇಜಿನ ಪ್ರಾಚಾರ್ಯ ಡಾ. ವೈ.ವಿಜಯಕುಮಾರ್ ಮಾತನಾಡಿದರು. ಕಾರ್ಯಕ್ರಮದ ಸಂಘಟನಾ ಸಮಿತಿ ಸದಸ್ಯರಾದ ಡಾ. ಆರ್.ಜೆ.ರಾಘವೇಂದ್ರ, ಡಾ. ಎಂ.ಪಿ.ಪವನ್‌ಕುಮಾರ್, ಡಾ. ಸಂಜೀವ್‌ಕುಂಟೆ, ಪಿ.ಅರುಣ್‌ಕುಮಾರ್, ಕೆ.ಎಂ.ಮನೀಷಾ, ಎಸ್.ಎನ್. ವಿಶೃತ ರಾಣಿ ಸುದ್ದಿಗೋಷ್ಠಿಯಲ್ಲಿದ್ದರು.
- ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಯುಗ್ಮಾ ಟೆಕ್ ಫೆಸ್ಟ್ 2.0 ಕಾರ್ಯಕ್ರಮದಡಿ ಸ್ಪರ್ಧೆ
- ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಎಐ ಆಸಕ್ತರಿಗೊಂದು ವೇದಿಕೆ
- ಜೆಎನ್‌ಎನ್ಇ ಕಾಲೇಜಿನ ಪ್ರಾಚಾರ್ಯ ಡಾ. ವೈ.ವಿಜಯಕುಮಾರ್ ಹೇಳಿಕೆ
ಶಿವಮೊಗ್ಗ: ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಿಂದ ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಯುಗ್ಮಾ ಟೆಕ್ ಫೆಸ್ಟ್ 2.0 ಕಾರ್ಯಕ್ರಮದಡಿ ಜು.24 ಮತ್ತು 25ರಂದು ಮೇಧಾದೃಷ್ಟಿ ರಾಷ್ಟ್ರಿಯ ಮಟ್ಟದ ಕೃತಕ ಬುದ್ಧಿಮತ್ತೆ(Artificial Intelligence)(ಎಐ) ಹ್ಯಾಕಥಾನ್ ಸ್ಪರ್ಧೆ(Hackathon Competition) ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ವೈ.ವಿಜಯಕುಮಾರ್ ಹೇಳಿದರು.
ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ಆಹ್ವಾನಿಸಿದ್ದು, ತಮಿಳುನಾಡು(Tamil Nadu), ಆಂಧ್ರಪ್ರದೇಶ(, Andhra Pradesh), ಕೇರಳ(Kerala) ಒಳಗೊಂಡಂತೆ 54 ಕಾಲೇಜುಗಳ 124 ತಂಡ ಪಾಲೊಳ್ಳಲಿವೆ. 500 ಉತ್ಸಾಹಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವರು. 24 ತಾಸು ನಿರಂತರವಾಗಿ ಸ್ಪರ್ಧೆ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಎಐ ಆಸಕ್ತರಿಗೊಂದು ವೇದಿಕೆಯಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎಐಸಿಟಿಇ ಮಾನ್ಯತೆ(AICTE accreditation) ಪಡೆದ ದೇಶದ ಯಾವುದೇ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಟೆಕ್‌ಫೆಸ್ಟ್‌ನಲ್ಲಿ ಭಾಗವಹಿಸಬಹುದು. ಒಂದು ತಂಡದಲ್ಲಿ ಗರಿಷ್ಠ 4 ಮಂದಿ ಸದಸ್ಯರಿಗೆ ಅವಕಾಶವಿದೆ ಎಂದರು.
ಜು.24ರಂದು ಬೆಳಗ್ಗೆ 10ಕ್ಕೆ ಉದ್ಯಮಿ ಎಸ್.ರುದ್ರೇಗೌಡ ಸ್ಪರ್ಧೆ ಉದ್ಘಾಟಿಸುವರು. ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಧ್ಯಕ್ಷತೆ ವಹಿಸುವರು. ಕಾರ್ಯದರ್ಶಿ ಎಸ್.ಎನ್.ನಾಗರಾಜ ಭಾಗವಹಿಸುವರು. ಜು.25ರಂದು ಸಂಜೆ 4ಕ್ಕೆ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(Nitte Meenakshi Institute of Technology) ಪ್ರಾಧ್ಯಾಪಕಿ ಡಾ. ಅರ್ಚನಾ ಮತೂರ್ ಸಮಾರೋಪ ಭಾಷಣ ಮಾಡುವರು. ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್ ಭಾಗವಹಿಸುವರು ಎಂದು ಹೇಳಿದರು.
ಕಾರ್ಯಕ್ರಮದ ಸಂಘಟನಾ ಸಮಿತಿ ಸದಸ್ಯರಾದ ಡಾ. ಆರ್.ಜೆ.ರಾಘವೇಂದ್ರ, ಡಾ. ಎಂ.ಪಿ.ಪವನ್‌ಕುಮಾರ್, ಡಾ. ಸಂಜೀವ್‌ಕುಂಟೆ, ಪಿ.ಅರುಣ್‌ಕುಮಾರ್, ಕೆ.ಎಂ.ಮನೀಷಾ, ಎಸ್.ಎನ್. ವಿಶೃತ ರಾಣಿ ಸುದ್ದಿಗೋಷ್ಠಿಯಲ್ಲಿದ್ದರು.