ಕುವೆಂಪು ವಿವಿ ಘಟಿಕೋತ್ಸವದಲ್ಲಿ ಪ್ರೊ. ಅನಿಲ್ ಡಿ. ಸಹಸ್ರಬುಧೆ ಪ್ರಧಾನ ಭಾಷಣ ಮಾಡಿದರು, ಥಾವರಚಂದ್ ಗೆಹಲೋತ್, ಪ್ರೊ. ಶರತ್ ಅನಂತಮೂರ್ತಿ, ಪ್ರೊ. ಆರ್.ತಿಮ್ಮರಾಯಪ್ಪ, ಎನ್.ಹೇಮಂತ್ ಇದ್ದರು. 
ಶಿವಮೊಗ್ಗ

ಸ್ಟಾರ್ಟಪ್‌ಗಳಿಂದ ಎಐ ಕ್ಷೇತ್ರ ವಿಸ್ತಾರ I startup ai

ಪ್ರಮುಖ ಮುಖ್ಯಾಂಶಗಳು

  • ಎನ್‌ಇಟಿಎಫ್ ಅಧ್ಯಕ್ಷ ಪ್ರೊ. ಅನಿಲ್ ಸಹಸ್ರಬುಧೆ ಅಭಿಮತ
  • ಕುವೆಂಪು ವಿವಿ 33ನೇ ಘಟಿಕೋತ್ಸವ
ಶಿವಮೊಗ್ಗ: ಸ್ಕಿಲ್ ಇಂಡಿಯಾ, ಕ್ಲೀನ್ ಇಂಡಿಯಾ, ಡಿಜಿಟಲ್ (digital) ಇಂಡಿಯಾ, ಸ್ಮಾರ್ಟ್ ಸಿಟಿ, ಮೇಕ್ ಇನ್ ಇಂಡಿಯಾ, ಸ್ಟಾರ್ಟಪ್ (startup)ಮುಂತಾದ ಯೋಜನೆಗಳಿಂದ ಭಾರತ ವೇಗವಾಗಿ ಬದಲಾಗುತ್ತಿದೆ. ಇಲ್ಲಿಯೇ ಅವಕಾಶಗಳು ಹೆಚ್ಚುತ್ತಿವೆ ಎಂದು ಎನ್‌ಇಟಿಎಫ್ (ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆ) ಅಧ್ಯಕ್ಷ ಪ್ರೊ. ಅನಿಲ್ ಡಿ. ಸಹಸ್ರಬುಧೆ (sahsrabudhe) ಹೇಳಿದರು.
ಬುಧವಾರ ಕುವೆಂಪು ವಿವಿಯ 35ನೇ ಘಟಿಕೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ-2020 ಸರಿಯಾದ ಸಮಯದಲ್ಲಿ ಜಾರಿಗೆ ಬಂದಿದೆ. ಇದು ಭಾರತವನ್ನು ಕೌಶಲದ ಹಾಗೂ ಕೃತಕ ಬುದ್ಧಿಮತ್ತೆಯ ರಾಜಧಾನಿಯನ್ನಾಗಿ ಮಾಡಿ ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಲಿದೆ ಎಂದು ಅಭಿಪ್ರಾಯಪಟ್ಟರು.
ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಇಂದು ದೊಡ್ಡ ಬದಲಾವಣೆಗಳನ್ನು ತರುತ್ತಿವೆ. ಭಾರತ ಸರ್ಕಾರವು ಎಐ ತಂತ್ರಜ್ಞಾನದ ಸದ್ಬಳಕೆಗಾಗಿ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಸ್ಟಾರ್ಟಪ್‌ಗಳನ್ನು ಸ್ಥಾಪಿಸಿದೆ. ಕೃಷಿ, ಆರೋಗ್ಯ ಕ್ಷೇತ್ರದಲ್ಲಿ ಎಐ ತನ್ನ ಛಾಪು ಮೂಡಿಸಿದೆ ಎಂದು ಹೇಳಿದರು.
ಪದವೀಧರರು ಸಮಾಜದ ಬದಲಾವಣೆಗೆ ಶ್ರಮಿಸಬೇಕು ಮತ್ತು ಕೌಶಲಗಳನ್ನು ವೃದ್ಧಿಸಿಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕಿದೆ. ನೂರಕ್ಕೂ ಹೆಚ್ಚು ರಾಷ್ಟ್ರಗಳ ಗಣ್ಯರು ಹಾಗೂ ಉದ್ದಿಮೆಗಳ ಪ್ರಮುಖರು ನಮ್ಮ ದೇಶದತ್ತ ನೋಡುತ್ತಿದ್ದಾರೆ. ಶೀಘ್ರವೇ ಫ್ರಾನ್ಸ್‌ನಲ್ಲಿ ನಡೆಯಲಿರುವ ಪ್ರದರ್ಶನದಲ್ಲಿ ಭಾರತದ ಸ್ಟಾರ್ಟಪ್ ಪ್ರತಿಭೆಗಳು ಭಾಗವಹಿಸುತ್ತಿದ್ದಾರೆ ಎಂದರು.
ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಕುಲಸಚಿವ ಎನ್.ಹೇಮಂತ್, ಪರೀಕ್ಷಾಂಗ ಕುಲಸಚಿವ ಪ್ರೊ. ಆರ್.ತಿಮ್ಮರಾಯಪ್ಪ ಉಪಸ್ಥಿತರಿದ್ದರು. ವಿವಿಯ ವಿವಿಧ ವಿಭಾಗಗಳ ಡೀನರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ಸಿಂಡಿಕೇಟ್ ಸದಸ್ಯರು ಪಾಲ್ಗೊಂಡಿದ್ದರು.

ಭಾರತದ ಶಕ್ತಿಯ ಪರಿಚಯ

ಇಂದು ಇಂಟರ್ನೆಟ್ ಆಫ್ ಥಿಂಗ್ಸ್‌ನಂತಹ ತಂತ್ರಜ್ಞಾನಗಳು ಸಾಮಾನ್ಯವಾಗುತ್ತಿವೆ. ಕೃಷಿ ಪಂಪ್‌ಸೆಟ್‌ಗಳನ್ನು ಚಾಲನೆ ಮಾಡುವುದರಿಂದ ಹಿಡಿದು ಮನೆಯ ಎಸಿ ನಿಯಂತ್ರಿಸುವವರೆಗೆ ಮೊಬೈಲ್ ಬಳಕೆ ಕ್ರಾಂತಿಕಾರಕ ಬದಲಾವಣೆ ತಂದಿದೆ. ಒಂದು ಕಾಲದಲ್ಲಿ ಜಾಗತಿಕ ಜಿಡಿಪಿಯಲ್ಲಿ ಭಾರತದ ಪಾಲು ಶೇ.32ರಷ್ಟಿತ್ತು. ಆ ವೈಭವವನ್ನು ಮರಳಿ ಪಡೆಯಲು ಇಂದಿನ ಯುವಶಕ್ತಿ ಶ್ರಮಿಸಬೇಕಿದೆ ಎಂದು ಪ್ರೊ. ಅನಿಲ್ ಡಿ. ಸಹಸ್ರಬುಧೆ ಹೇಳಿದರು. ಭಾರತ ಇಂದು ಬಾಹ್ಯಾಕಾಶ ವಿಜ್ಞಾನ ಮತ್ತು ಪರಮಾಣು ಶಕ್ತಿಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ಯುವಜನರು ಉದ್ಯೋಗದಾತರಾಗಬೇಕು. ಐಟಿ ಕ್ಷೇತ್ರದಲ್ಲಿನ ಕ್ರಾಂತಿಯು ಭಾರತದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದೆ ಎಂದರು.
"

ಹವಾಮಾನ ಬದಲಾವಣೆ ಮತ್ತು ಕಾರ್ಬನ್ ಫುಟ್‌ಪ್ರಿಂಟ್‌ನಂತಹ ಸವಾಲುಗಳನ್ನು ಮೆಟ್ಟಿ ನಿಲ್ಲಲು ಯುವಪೀಳಿಗೆ ಸಜ್ಜಾಗಬೇಕಿದೆ. ವಸುಧೈವ ಕುಟುಂಬಕಂ ಎಂಬ ಉದಾತ್ತ ತತ್ವದೊಂದಿಗೆ ಸಮಾಜದ ಏಳಿಗೆಗಾಗಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು.

— ಪ್ರೊ. ಅನಿಲ್ ಡಿ. ಸಹಸ್ರಬುಧೆ ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆ ಅಧ್ಯಕ್ಷ