ಕೃಷಿ ಮೇಳದ ಎರಡನೇ ದಿನದ ಕಾರ್ಯಕ್ರಮದಲ್ಲಿ ತಾಂತ್ರಿಕ ಕೈಪಿಡಿಯನ್ನು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಬಿಡುಗಡೆಗೊಳಿಸಿದರು. ಡಾ. ವೀರೇಂದ್ರ ಹೆಗ್ಗಡೆ, ಡಾ. ಆರ್.ಸಿ.ಜಗದೀಶ್, ಡಾ. ಬಿ.ಕೆ.ಕುಮಾರಸ್ವಾಮಿ, ಜೆ.ಜಿ.ಕಾವೇರಿಯಪ್ಪ, ಎಚ್.ಡಿ.ದೇವಿಕುಮಾರ್, ಎಚ್.ಎಸ್.ಶಶಾಂಕ್, ಗೀತಾ, ಮುರಳೀಧರ್, ಶ್ರೀ ಹರಿಕೃಷ್ಣ, ಡಾ. ಜಿ.ಕೆ.ಗಿರಿಜೇಶ್, ಡಾ. ಬಿ.ಎಂ.ದುಷ್ಯಂತ್‌ಕುಮಾರ್ ಇದ್ದರು. 
ಶಿವಮೊಗ್ಗ

ಕೃಷಿ ಸಾಫ್ಟ್‌ವೇರ್, ವೈದ್ಯಕೀಯ ಕ್ಷೇತ್ರ ಮೀರಿದ ಕಸುಬು

ಪ್ರಮುಖ ಮುಖ್ಯಾಂಶಗಳು

  • ಕೃಷಿ ಮತ್ತು ತೋಟಗಾರಿಕೆ ವಿವಿ ರೈತರ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕು
  • ಬೆಂಗಳೂರು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಹೇಳಿಕೆ
  • ‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳ
ಶಿವಮೊಗ್ಗ: ಕೃಷಿಯು ಸಾಫ್ಟ್‌ವೇರ್(Software), ವೈದ್ಯಕೀಯ ಕ್ಷೇತ್ರವನ್ನೂ ಮೀರಿದ ಕಸುಬು. ಇಲ್ಲಿ ಬೆಳೆಯೂ ಇದೆ, ಬೆಲೆಯೂ ಇದೆ. ಆದರೆ ಸವಾಲು, ಸಮಸ್ಯೆಗಳೂ ಇವೆ. ಆ ಸವಾಲುಗಳನ್ನು ಪರಿಹರಿಸುವ ಜತೆಗೆ ಮಾರುಕಟ್ಟೆ(Market)ಗಳನ್ನು ಕಲ್ಪಿಸಲು ಕೃಷಿ ಮತ್ತು ತೋಟಗಾರಿಕೆ ವಿವಿಗಳು ರೈತರ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕಿದೆ ಎಂದು ಬೆಂಗಳೂರು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಹೇಳಿದರು.
ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ‘ವಿಜಯವಾಣಿ’ಮಾಧ್ಯಮ ಸಹಯೋಗದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳದ ಎರಡನೇ ದಿನವಾದ ಶನಿವಾರ ತಾಂತ್ರಿಕ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
ಹವಾಮಾನ(Weather)ಬದಲಾವಣೆ, ಮಾನವ-ಪ್ರಾಣಿ ಸಂಘರ್ಷಗಳಿವೆ. ಮಾರುಕಟ್ಟೆ ಸಮಸ್ಯೆಗಳೂ ಇದ್ದು, ಮಣ್ಣು, ನೀರು, ಗುಣಮಟ್ಟ, ಮಾರುಕಟ್ಟೆ ಹಾಗೂ ಆರ್ಥಿಕತೆ ಬಗ್ಗೆ ಕೃಷಿ ವಿವಿ ವಿಜ್ಞಾನಿ(Scientist)ಗಳು ರೈತರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದು ಸಲಹೆ ನೀಡಿದರು. ಕೃಷಿ ಮಾಡುವುದಕ್ಕೆ 5 ಎಕರೆ ಜಮೀನು ಇದ್ದರೆ ಸಾಕು. ವಾರ್ಷಿಕ 50 ಲಕ್ಷ ಆದಾಯ ಮಾಡುತ್ತಿರುವವರೂ ಕಣ್ಮುಂದೆ ಸಾಕಷ್ಟು ರೈತರಿದ್ದಾರೆ. ಹಾಗಾಗಿ ಕೃಷಿಗೆ ಯುವಕರು ಬರಬೇಕು. ಇಲ್ಲವಾದರೆ ಕೃಷಿಗೆ ಭವಿಷ್ಯದಲ್ಲಿ ಸಂಕಷ್ಟಗಳು ಎದುರಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯಸಭಾ ಸದಸ್ಯ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ವಿವಿ ವ್ಯವಸ್ಥಾಪನಾ ಮಂಡಳಿ ನಿರ್ದೇಶಕರಾದ ಡಾ. ಬಿ.ಕೆ.ಕುಮಾರಸ್ವಾಮಿ, ಜೆ.ಜಿ.ಕಾವೇರಿಯಪ್ಪ, ಎಚ್.ಡಿ.ದೇವಿಕುಮಾರ್, ಎಚ್.ಎಸ್.ಶಶಾಂಕ್, ಧರ್ಮಸ್ಥಳ ಯೋಜನೆ ಪ್ರಾದೇಶಿಕ ನಿರ್ದೇಶಕರಾದ ಗೀತಾ, ಮುರಳೀಧರ್, ಶ್ರೀ ಹರಿಕೃಷ್ಣ, ಕೃಷಿ ಮತ್ತು ತೋಟಗಾರಿಕೆ ಮೇಳದ ಅಧ್ಯಕ್ಷ ಡಾ. ಜಿ.ಕೆ.ಗಿರಿಜೇಶ್, ಉಪಾಧ್ಯಕ್ಷ ಡಾ. ಬಿ.ಎಂ.ದುಷ್ಯಂತ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
"

ಕೃಷಿ ಮೇಳಗಳು ರೈತರ ಸುಸ್ಥಿರ ಕೃಷಿಗೆ ಸಹಕಾರಿ ಆಗುತ್ತವೆ. ಹೆಚ್ಚೆಚ್ಚು ಕೃಷಿಕರು ಮೇಳಗಳಿಗೆ ಭೇಟಿ ನೀಡಿ ಸದುಪಯೋಗ ಪಡೆದುಕೊಳ್ಳಬೇಕು. ನಾಲ್ಕು ದಿನಗಳ ಮೇಳದಲ್ಲಿ ರಸಗೊಬ್ಬರ, ಬೀಜ ಬಳಕೆ ಒಳಗೊಂಡಂತೆ ಸಮಗ್ರ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ರೈತರು, ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ.

— ಡಾ. ಆರ್.ಸಿ.ಜಗದೀಶ್, ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ