ಸೊರಬದಲ್ಲಿ ಕಾಂಗ್ರೆಸ್ ಪಕ್ಷದ ಬಿಎಲ್‌ಒ ಮತ್ತು ಎಪಿಎಲ್‌ಒಗಳಿಗೆ ಆಯೋಜಿಸಿದ್ದ ಸಭೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಕೆಪಿಸಿಸಿ ಸದಸ್ಯ ಕಲಗೋಡು ರತ್ನಾಕರ್ ಮಾತನಾಡಿದರು. ಅಣ್ಣಪ್ಪ ಹಾಲಘಟ್ಟ, ಎಚ್.ಗಣಪತಿ, ಬಂಗಾರಪ್ಪ, ಜಯಶೀಲ ಗೌಡ ಇತರರಿದ್ದರು.
ಸೊರಬ: ಪಕ್ಷ ನೇಮಿಸಿದ ಬಿಎಲ್‌ಒ ಮತ್ತು ಎಪಿಎಲ್‌ಒಗಳು ಮನೆ ಮನೆಗೆ ಹೋಗಿ ಮತದಾರರನ್ನು ಹುಡುಕಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಕೆಪಿಸಿಸಿ ಸದಸ್ಯ ಕಲಗೋಡು ರತ್ನಾಕರ್ ಹೇಳಿದರು.
ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಬಿಎಲ್‌ಒ, ಎಪಿಎಲ್‌ಒಗಳು, ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ತಹಸೀಲ್ದಾರ್ ಮತ್ತು ಮತಗಟ್ಟೆ ಸಮೀಕ್ಷೆ ಅಧಿಕಾರಿಗಳಿಂದ ಶೇ.96ರಷ್ಟು ಮ್ಯಾಪಿಂಗ್ ಕಾರ್ಯ ಮುಗಿದಿದೆ. ಜೂ.30ರಿಂದ ಜು.27ರೊಳಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯಲ್ಲಿದೆ. ಈ ಸಂದರ್ಭದಲ್ಲಿ ಪಕ್ಷದ ಬಿಎಲ್‌ಒ ಹಾಗೂ ಎಪಿಎಲ್‌ಒಗಳು ಪ್ರತಿಯೊಬ್ಬರ ಮನೆಗೂ ಭೇಟಿ ನೀಡಿ ಅರ್ಹರನ್ನು ಪಟ್ಟಿಗೆ ಸೇರಿಸಬೇಕು. ಮುಂದಿನ ಚುನಾವಣೆಗಾಗಿ ಒಂದು ತಿಂಗಳು ಶ್ರಮ ಪಟ್ಟು ಕೆಲಸ ಮಾಡಬೇಕು ಎಂದು ತಿಳಿಸಿದರು.
ಪಟ್ಟಿಗೆ ಮತದಾರ ಸೇರ್ಪಡೆ ಆಗದಿದ್ದರೆ ಗ್ರಾಮದ ಮುಖಂಡರನ್ನೇ ಹೊಣೆ ಮಾಡಲಾಗುವುದು. ಹಾಗಾಗಿ ನೂರಕ್ಕೆ ನೂರು ಅರ್ಹ ಮತದಾರರನ್ನು ಸೇರಿಸುವ ಕೆಲಸ ನಿಮ್ಮಿಂದ ಆಗಬೇಕು. ಇಲ್ಲವಾದರೆ ಗ್ರಾಪಂ ಮತ್ತು ಜಿಪಂ ಚುನಾವಣೆಯನ್ನೂ ಗೆಲ್ಲವುದು ಕಷ್ಟವಾಗುತ್ತದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ. ಮಾಜಿ ಸದಸ್ಯ ತಬಲಿ ಬಂಗಾರಪ್ಪ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲ ಗೌಡ, ನಾಗರಾಜ, ಸುರೇಶ್, ಅಣ್ಣಪ್ಪ, ಎಂ.ಡಿ.ಶೇಖರ್, ಹಿರಿಯಣ್ಣ, ಶಿವಮೂರ್ತಿ, ಪ್ರಭಾಕರ, ಶ್ರೀಕಾಂತ್, ನೆಹರು, ಜಗದೀಶ್, ಸುನೀಲ್ ಗೌಡ ಇತರರಿದ್ದರು.