ಸೊರಬದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಏರ್ಪಡಿಸಿದ್ದ ಪಿಡಬ್ಲೂೃಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಕ್ಷೇತ್ರ ಸಮನ್ವಯಾಧಿಕಾರಿ ದಯಾನಂದ ಕಲ್ಲೇರ್ ಉದ್ಘಾಟಿಸಿದರು. ಮಧುರಾಯ್ ಜಿ.ಶೇಟ್, ಸಂಜೀವಕುಮಾರ, ಸುಧಾ ಇತರರಿದ್ದರು. 
ಶಿವಮೊಗ್ಗ

ಮನೋವಿಕಾಸಕ್ಕೆ ಕ್ರಿಯಾತ್ಮಕ ಚಟುವಟಿಕೆ ಅವಶ್ಯ

ಸೋಮಶೇಖರ ಎನ್

ಪ್ರಮುಖ ಮುಖ್ಯಾಂಶಗಳು

  • ಸೃಜನಾತ್ಮಕ ಕೌಶಲಗಳನ್ನು ಪ್ರಸ್ತುತಪಡಿಸಲು ಉತ್ತಮ ವೇದಿಕೆ
  • ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಸೊರಬ: ಶಾಲಾ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆ ಹಾಗೂ ಸೃಜನಾತ್ಮಕ ಕೌಶಲಗಳನ್ನು ಪ್ರಸ್ತುತಪಡಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ದಯಾನಂದ ಕಲ್ಲೇರ್ ಹೇಳಿದರು.
ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಮನ್ವಯಾಧಿಕಾರಿ ಸಮೂಹ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ 2025-26ನೇ ಸಾಲಿನ ಪಿಡಬ್ಲೂೃಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಶೈಕ್ಷಣಿಕ ಪ್ರಗತಿ ಜತೆಗೆ ಕಲೆ ಮತ್ತು  ಸಾಂಸ್ಕೃತಿಕ ಮನೋವಿಕಾಸದಲ್ಲಿ ಶಿಕ್ಷಕರ ಕ್ರಿಯಾತ್ಮಕ ಚಟುವಟಿಕೆ ಅಗತ್ಯವಿದೆ. ಗ್ರಾಮೀಣ ಹಾಗೂ ನಗರ ಸಮುದಾಯದ ಸಹಭಾಗಿತ್ವದಲ್ಲಿ ಪಾಲಕರ ಸಹಕಾರ ಇದ್ದಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಿದೆ. ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರತಿಭೆ ಪ್ರದರ್ಶಿಸಲು ಪೂರಕ ವೇದಿಕೆಯಾಗಿದೆ ಎಂದು ತಿಳಿಸಿದರು.
ಪ್ರತಿಭಾ ಕಾರಂಜಿಯಲ್ಲಿ ಪಿಡಬ್ಲುೃಡಿ ಕ್ಲಸ್ಟರ್ ವ್ಯಾಪ್ತಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ವಾಮಿ ವಿವೇಕಾನಂದ ಸಂಸ್ಥೆ ಅಧ್ಯಕ್ಷ ದಿವಾಕರ ಭಾವೆ, ಪುರಸಭೆ ಮಾಜಿ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಶಿಕ್ಷಣ ಸಂಯೋಜಕ ಸಂಜೀವಕುಮಾರ, ಸಿಆರ್‌ಪಿ ಸುಧಾ, ಬಿಆರ್‌ಸಿ ನಾಗರಾಜ, ದತ್ತಾತ್ರೆಯ ಪುರಾಣಿಕ್, ಮುಖ್ಯಶಿಕ್ಷಕ ಸಂದೀಪ್, ಶಿಲ್ಪಾ ಇತರರಿದ್ದರು.