ಶಿವಮೊಗ್ಗ: ಶಿವಮೊಗ್ಗ ತಾಲೂಕಿನಲ್ಲಿ ಇ-ಪೌತಿ ಖಾತೆ(E-Pauti Account)ಬದಲಾವಣೆಯು ನಡೆಯುತ್ತಿದ್ದು, ಅದರಲ್ಲಿ ವಂಶವೃಕ್ಷ ಮಾಡುವ ಸಂದರ್ಭದಲ್ಲಿ ಖಾತೆದಾರರು ಪೌತಿಯಾದ ವಾರಸುದಾರರ ಹೆಸರು ಕೈಬಿಟ್ಟು ವಂಶವೃಕ್ಷ ಪ್ರಮಾಣಪತ್ರ(Certificate)ಕ್ಕೆ ಅರ್ಜಿ ಸಲ್ಲಿಸುತ್ತಿರುವುದು ಕಂಡುಬಂದಿದೆ ಎಂದು ತಹಸೀಲ್ದಾರ್(Tahsildar)ವಿ.ಎಸ್.ರಾಜೀವ್ ತಿಳಿಸಿದ್ದಾರೆ.
ಈಗಾಗಲೇ ವಾರಸುದಾರರ ಹೆಸರು ಕೈಬಿಟ್ಟು ವಂಶವೃಕ್ಷ ಕೋರಿ ಸಲ್ಲಿಸಿರುವ ಅರ್ಜಿದಾರರ ವಿರುದ್ಧ ಭಾರತೀಯ ನಾಗರಿಕ ಸುರಕ್ಷ ಸಂಹಿತ ಕಾಯ್ದೆಯ ಅಡಿ ಕ್ರಮ ಕೈಗೊಳ್ಳಲಾಗಿದೆ. ಇನ್ಮುಂದೆ ಯಾರಾದರೂ ಪೌತಿ ವಾರಸುದಾರರ ಹೆಸರು ಕೈಬಿಟ್ಟು ವಂಶವೃಕ್ಷಕ್ಕೆ ಅರ್ಜಿ ಸಲ್ಲಿಸಿರುವುದು ಹಾಗೂ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ದಾಖಲಾತಿ ಪಡೆಯುವುದು ಕಂಡುಬಂದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಕಾಯ್ದೆ ಹಾಗೂ ಚಾಲ್ತಿಯಲ್ಲಿರುವ ಇತರೆ ಅಧಿನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.