ಅಂಗವಿಕಲ ಪಂಜ ಕುಸ್ತಿ ಕ್ರೀಡಾಪಟು ಗೌರಮ್ಮ ಅವರನ್ನು ಶಿಕಾರಿಪುರ ತಾಲೂಕು ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು. ಎನ್.ವಿ.ಈರೇಶ್, ಶಿವಯ್ಯ ಶಾಸ್ತ್ರಿ, ಗೋಣಿ ಮಾಲತೇಶ್, ಬಸವರಾಜ್, ಯುವರಾಜ್ ಇತರರಿದ್ದರು. 
ಶಿವಮೊಗ್ಗ

ದೃಢ ಸಂಕಲ್ಪವಿದ್ದರೆ ಸಾಧನೆ ಸುಲಭ | honor

ಶಿಕಾರಿಪುರ: ಛಲ ಮತ್ತು ದೃಢ ಸಂಕಲ್ಪದಿಂದ ನಾವು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅಂತಾರಾಷ್ಟ್ರೀಯ ಅಂಗವಿಕಲ ಕ್ರೀಡಾಪಟು ತಾಲೂಕಿನ ಗೌರಮ್ಮ ನಿದರ್ಶನ ಎಂದು ಉದ್ಯಮಿ ಎನ್.ವಿ.ಈರೇಶ್ ಹೇಳಿದರು.
ಥೈಲ್ಯಾಂಡ್‌ನಲ್ಲಿ ಆಯೋಜಿಸಿದ್ದ ಪಂಜ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದ ಅಂಗವಿಕಲೆ ಗೌರಮ್ಮ ಅವರಿಗೆ ತಾಲೂಕು ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಂಜ ಕುಸ್ತಿಯಲ್ಲಿ ಗೆಲ್ಲುವ ಮೂಲಕ ದೇಶಕ್ಕೆ ಹಾಗೂ ನಾಡಿಗೆ ಕೀರ್ತಿ ತಂದ  ಗೌರಮ್ಮ ನಮಗೆ ಮಾದರಿ. ತಾವು ಆಯ್ದುಕೊಂಡ ಕ್ರೀಡಾಕ್ಷೇತ್ರದಲ್ಲಿಯೇ ನಿರಂತರ ಸಾಧನೆ ಮಾಡಿ ರಾಷ್ಟ್ರಕ್ಕೆ ಹೆಸರು ತಂದಿದ್ದಾರೆ. ಇಂಥವರನ್ನು ಸನ್ಮಾನಿಸಲು ಸಂತಸವೆನಿಸುತ್ತದೆ ಎಂದರು.
ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮಾತನಾಡಿ, ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಇಂತಹ ಕ್ರೀಡಾಪಟು ನಮ್ಮ ತಾಲೂಕಿನ ಹೆಮ್ಮೆ. ಅಂಗವೈಕಲ್ಯ ಶಾಪವಲ್ಲ ಎಂಬುದನ್ನು ಗೌರಮ್ಮ ನಿರೂಪಿಸಿದ್ದಾರೆ ಎಂದು ಹೇಳಿದರು.
ಜಯ ಕರ್ನಾಟಕ ಜನಪರ ವೇದಿಕೆಯ ಹುಲಿಗಿ ಕೃಷ್ಣ ಮಾತನಾಡಿ, ಇಡೀ ದೇಶ ಶಿಕಾರಿಪುರದ ಕಡೆಗೆ ನೋಡುವಂತೆ ಮಾಡಿದ ಗೌರಮ್ಮ ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿ ಎಂದು ತಿಳಿಸಿದರು.
ಜಯ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶಿವಯ್ಯ ಎನ್. ಶಾಸ್ತ್ರಿ, ಗೋಣಿ ಸಂದೀಪ್, ಪತ್ರಕರ್ತ ವೈಭವ ಬಸವರಾಜ್, ಯುವರಾಜ್, ಚಂದ್ರಕಾಂತ್ ರೇವಣಕರ್, ಸಮೀರ್, ಮಂಜುನಾಥ್ ನಾಯ್ಕ್, ಕುಮಾರಸ್ವಾಮಿ ಹಿರೇಮಠ್, ಜೆಸಿಐ ನೂತನ ಅಧ್ಯಕ್ಷ ಶಾಂತರಾಮ್, ವೆಂಕಟೇಶ್ ಇತರರಿದ್ದರು.