ಮೋಟಾರ್ ಪಂಪ್‌ಸೆಟ್ ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಿದ ಭದ್ರಾವತಿ ಪೇಪರ್ ಟೌನ್ ಠಾಣೆ ಪೊಲೀಸರು. 
ಶಿವಮೊಗ್ಗ

ಪಂಪ್‌ಸೆಟ್ ಮೋಟಾರ್‌ ಕಳವು ಆರೋಪಿ ಬಂಧನ Motor theft

ಶಿವಮೊಗ್ಗ: ಭದ್ರಾವತಿ ತಾಲೂಕಿನ ರಬ್ಬರ್ ಕಾಡು ಗ್ರಾಮದಲ್ಲಿ ಕಳುವಾಗಿದ್ದ ಎರಡು ಪಂಪ್‌ಸೆಟ್ ಮೋಟಾರ್‌ಗಳನ್ನು ಪೇಪರ್ ಟೌನ್ ಪೊಲೀಸರು ಪತ್ತೆ ಹಚ್ಚಿ, ಆರೋಪಿಯನ್ನು ಬಂಧಿಸಿದ್ದಾರೆ.

ಶಿವಮೊಗ್ಗ: ಭದ್ರಾವತಿ ತಾಲೂಕಿನ ರಬ್ಬರ್ ಕಾಡು ಗ್ರಾಮದಲ್ಲಿ ಕಳುವಾಗಿದ್ದ ಎರಡು ಪಂಪ್‌ಸೆಟ್ ಮೋಟಾರ್‌ಗಳನ್ನು ಪೇಪರ್ ಟೌನ್ ಪೊಲೀಸರು ಪತ್ತೆ ಹಚ್ಚಿ, ಆರೋಪಿಯನ್ನು ಬಂಧಿಸಿದ್ದಾರೆ.

ರಬ್ಬರ್ ಕಾಡು ಗ್ರಾಮದ ಚಂದ್ರ(40) ಬಂಧಿತ ಆರೋಪಿ. ರಬ್ಬರ್ ಕಾಡು ಗ್ರಾಮದಲ್ಲಿ ಪಂಪ್‌ಸೆಟ್ ಮೋಟಾರ್ ಕಳುವಾದ ಭದ್ರಾವತಿ ಪೇಪರ್ ಟೌನ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.

ಪ್ರಕರಣಗಳ ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಶರಣಪ್ಪ, ಪಿಎಸ್‌ಐ ಎನ್.ಕುಮಾರ್ ಮತ್ತು ಪೇದೆ ಎಂ.ನಾಗರಾಜ್ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ. ಪ್ರಕರಣಗಳಲ್ಲಿ ಕಳುವಾಗಿದ್ದ 30 ಸಾವಿರ ರೂ. ಮೌಲ್ಯದ ಎರಡು ಪಂಪ್‌ಸೆಟ್ ಮೋಟಾರ್ ಅಮಾನತ್ತು ಪಡಿಸಿಕೊಂಡಿದ್ದಾರೆ.