ರಿಪ್ಪನ್ಪೇಟೆ ಗ್ರಾಪಂನಲ್ಲಿ ಆಯೋಜಿಸಿದ್ದ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಶಿಮುಲ್ ಅಧ್ಯ ವಿದ್ಯಾಧರ ಮಾತನಾಡಿದರು. ಈಶ್ವರಪ್ಪ ಗೌಡ, ಕೀರ್ತಿಗೌಡ, ಯೋಗೇಶ್, ಶ್ರೀಧರ ಇತರರಿದ್ದರು.
- ಕಸ್ತೂರಿ ರಂಗನ್ ವರದಿ ವಿರೋಧಿಸಿ ಪಾದಯಾತ್ರೆ
- ವಾಟಗೋಡು ಸುರೇಶ್ ಮಾಹಿತಿ
- ಸಂಕಷ್ಟ ನಿವಾರಣೆಗೆ ಪ್ರಬಲ ಹೋರಾಟ ಅವಶ್ಯ
ರಿಪ್ಪನ್ಪೇಟೆ: ಅನೇಕ ಜಲಾಶಯಗಳ ಮುಳುಗಡೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಹೊಸನಗರ ಜನತೆಯಿಂದ ಪ್ರಬಲ ಹೋರಾಟ ಆಗದಿದ್ದರೆ ಬದುಕು ದುಸ್ತರವಾಗಲಿದೆ ಎಂದು ಪಶ್ಚಿಮಟ್ಟ ರೈತ ಸಹಕಾರಿ ವೇದಿಕೆ ತಾಲೂಕು ಅಧ್ಯ ವಾಟಗೋಡು ಸುರೇಶ್ ಹೇಳಿದರು.
ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಆ.29ರಂದು ಹೊಸನಗರದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆ ಹಾಗೂ ಬಹಿರಂಗ ಸಭೆ ಅಂಗವಾಗಿ ಪಟ್ಟಣದ ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ವರದಿಯ ಕರಡು ಪ್ರಸ್ತುತ 7ನೇ ಬಾರಿಗೆ ಪ್ರಕಟವಾಗುತ್ತಿದೆ. ಈ ಹಿಂದಿನ ಅನೇಕ ಹೋರಾಟಗಳು ಸರಿಯಾದ ದಿಕ್ಕಿನಲ್ಲಿ ಸಾಗಿಲ್ಲ ಎಂಬುದಕ್ಕೆ ಇದು ಪುಷ್ಟಿ ನೀಡುತ್ತದೆ. ಈಗಿನ ನಮ್ಮ ದೃಢವಾದ ಹೋರಾಟದಿಂದ ಸರ್ಕಾರಗಳೇ ಜನರಲ್ಲಿಗೆ ಬಂದು ವರದಿಯನ್ನು ತಿರಸ್ಕರಿಸುವಂತಾಗಬೇಕು. ಇಲ್ಲಿ ವರ್ಗ, ಗ್ರಾಮ, ಪ ಯಾವುದನ್ನೂ ತರದೆ ಹೋರಾಟ ಮಾಡಬೇಕು ಎಂದರು.
ಶಿಮುಲ್ ಅಧ್ಯ ವಿದ್ಯಾಧರ ಮಾತನಾಡಿ, ಈಗಾಗಲೇ ಅರಣ್ಯ ಇಲಾಖೆಯವರು ಮೊಬೈಲ್ ಆ್ಯಪ್ ಜತೆ ಬಂದು ಹೆದರಿಸುತ್ತಿದ್ದಾರೆ. ವರದಿ ಜಾರಿಯಾದರೆ ಸಂಪೂರ್ಣ ನೆಲೆ ಕಳೆದುಕೊಳ್ಳಬೇಕಾಗುತ್ತದೆ. ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆ ಬೆಲೆ ತೆರಬೇಕಾಗುತ್ತದೆ ಎಂದರು.
ಬಂಡಿ ರಾಮಚಂದ್ರ ಮಾತನಾಡಿ, ಕಸ್ತೂರಿ ರಂಗನ್ ವರದಿಯಿಂದ ಮಲೆನಾಡ ಜನರಿಗೆ ಬದುಕಿನ ಪ್ರಶ್ನೆ ಉದ್ಭವಿಸಿದೆ. ಸ್ವ ಪ್ರೇರಣೆಯಿಂದ ಮೊದಲಿಗರಾಗಿ ಪ್ರತಿ ಮನೆಗೂ ಮಾಹಿತಿ ರವಾನಿಸಿ, ಎಲ್ಲ ಗ್ರಾಮದಿಂದ, ಸಮಸ್ತ ತಾಲೂಕಿನ ಜನ ಪಾದಯಾತ್ರೆ, ಹೋರಾಟದಲ್ಲಿ ಭಾಗವಹಿಸಿ ವರದಿ ತಿರಸ್ಕಾರಕ್ಕೆ ಒತ್ತಾಯ ಮಾಡಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ.ಪರಮೇಶ್ ಮಾತನಾಡಿ, ಕಸ್ತೂರಿ ರಂಗನ್ ವರದಿಯಿಂದ ಎಲ್ಲರಿಗೂ ಸಂಚಕಾರ. ಪ ತಾರತಮ್ಯ ಬಿಟ್ಟು ಎಲ್ಲರೂ ಹೋರಾಟಕ್ಕೆ ಧುಮುಕಬೇಕು. ರೈತರಿಗೆ ಆಗುವ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಸಹಕಾರಿ ೇತ್ರ ಹೋರಾಟದ ನೇತೃತ್ವವಹಿಸಿದೆ. ಮಾರಿಯನ್ನು ಮನೆಗೆ ಬಿಟ್ಟುಕೊಳ್ಳುವ ಮೊದಲೇ ಓಡಿಸೋಣ. ಎಲ್ಲರೂ ಹೋರಾಟಕ್ಕಾಗಿ ಒಗ್ಗಟ್ಟಾಗಿ ಎಂದು ತಿಳಿಸಿದರು. ಈಶ್ವರಪ್ಪ ಗೌಡ, ಕೀರ್ತಿಗೌಡ, ಯೋಗೇಶ್, ಶ್ರೀಧರ ಇತರರಿದ್ದರು.
ಚುನಾಯಿತ ಪ್ರತಿನಿಧಿಗಳು ಪಾದಯಾತ್ರೆಗೆ ಬರುವ ಅಗತ್ಯವಿಲ್ಲ. ಶಾಸನ ಸಭೆಗಳಲ್ಲಿ ಕೆಲಸ ಮಾಡಿ ತೋರಿಸಲಿ. ಅದನ್ನು ಬಿಟ್ಟು ಉತ್ತರ ಹೇಳಬೇಕಾದವರು ಪ್ರಶ್ನೆ ಕೇಳುವುದು ಬೇಡ. ತಾಲೂಕಿನಾದ್ಯಂತ ರೈತರು, ಮಹಿಳೆಯರು, ವಿದ್ಯಾರ್ಥಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡು ನ್ಯಾಯೋಚಿತ ಹೋರಾಟವನ್ನು ಯಶಸ್ವಿಗೊಳಿಸಬೇಕು.
ಪಶ್ಚಿಮಟ್ಟ ರೈತ ಸಹಕಾರಿ ವೇದಿಕೆ ತಾಲೂಕು ಅಧ್ಯ