ಹೊಳೆಹೊನ್ನೂರಿನ ಸಮೀಪದ ಮಲ್ಲಾಪುರದ ರಸ್ತೆ ಬದಿ ಸಿಕ್ಕ ಗಂಡು ಶಿಶು. 
ಶಿವಮೊಗ್ಗ

ರಸ್ತೆ ಬದಿ ನವಜಾತ ಶಿಶು ಪತ್ತೆ | newborn baby found

ಹೊಳೆಹೊನ್ನೂರು: ಮಲ್ಲಾಪುರದ ಬಳಿ ಸೋಮವಾರ ರಾತ್ರಿ ರಸ್ತೆ ಬದಿ ನವಜಾತ ಗಂಡು ಶಿಶು ಪತ್ತೆಯಾಗಿದೆ. ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿಯ ಖಾಸಗಿ ಶಾಲಾ ಬಸ್ ಚಾಲಕ ಖುಷ್ ತನ್ನ ದೊಡ್ಡಪ್ಪನ ಮಗ ತಿಪ್ಪೇಶ ಅವರಿಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಕೈಮರ ರಸ್ತೆ ಮಾರ್ಗವಾಗಿ ಸಾಸ್ವೆಹಳ್ಳಿಗೆ ಹಿಂದಿರುವಾಗ ಮಲ್ಲಾಪುರದ ಬಳಿ ಶೌಚಕ್ಕಾಗಿ ಒಮ್ನಿ ವ್ಯಾನ್ ನಿಲ್ಲಿಸಿದಾಗ ರಸ್ತೆ ಬದಿ ಮಗು ಅಳುವ ಶಬ್ದ ಕೇಳಿಸಿದೆ. ಖುಷ್ ತನ್ನ ಜತೆಯಲ್ಲಿದ್ದ ಅತ್ತಿಗೆ ಸಹಾಯ ಪಡೆದು ಸ್ವಲ್ಪ ದೂರ ಮುಂದಕ್ಕೆ ಹೋಗಿ ನೋಡಿದಾಗ ಎರಡ್ಮೂರು ದಿನದ ಗಂಡು ಮಗು ಬಟ್ಟೆಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಸಿಕ್ಕಿದೆ. ಮಲ್ಲಾಪುರದ ರಸ್ತೆ ಬದಿಯ ಕೆಲ ಮನೆಗಳಲ್ಲಿ ವಿಚಾರಿಸಿದಾಗ ಆ ಮಗು ಬಗ್ಗೆ ಮಾಹಿತಿ ತಿಳಿದಿಲ್ಲ. ಹೊಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿ ಮಗುವನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.