ಸೊರಬದ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ವೈ.ಜಿ.ಪುಟ್ಟಸ್ವಾಮಿ, ಡಾ. ಶಿವರಾಯಪ್ಪ, ವಿನಯ್, ಪವಿತ್ರಾ ಇತರರಿದ್ದರು.
- ಕನ್ನಡ ಭಾಷೆಯ ಇತಿಹಾಸ ಸಾರುತ್ತಿವೆ ಶಿಲಾಶಾಸನಗಳು
ಸೊರಬ: ಕರ್ನಾಟಕ ಏಕೀಕರಣವು ಕನ್ನಡ ಭಾಷಿಕರನ್ನು ಒಗ್ಗೂಡಿಸುವ ಚಳವಳಿಯಾಗಿ ಹೊರಹೊಮ್ಮಿತ್ತು ಎಂದು ವಕೀಲ ವೈ.ಜಿ.ಪುಟ್ಟಸ್ವಾಮಿ ಹೇಳಿದರು.
ಪಟ್ಟಣದ ಪ್ರಥಮದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಲೂರು ವೆಂಕಟರಾಯರ ಹೋರಾಟಕ್ಕೆ ಸಾಹಿತಿಗಳು, ಜನಪ್ರತಿನಿಧಿಗಳು ಮತ್ತು ಜನರು ಕೈಜೋಡಿಸಿದ್ದರು. 1973ರಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ನ.1ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು ಎಂದರು.
ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಕುವೆಂಪು, ಜಿ.ಎಸ್.ಶಿವರುದ್ರಪ್ಪ ಶಿವಮೊಗ್ಗ ಜಿಲ್ಲೆಯವರು ಎನ್ನುವುದು ಸಂತಸದ ಸಂಗತಿ. ನಾಡಿನಲ್ಲಿ ದೊರೆತಿರುವ ಅನೇಕ ಶಿಲಾಶಾಸನಗಳು ಇಂದಿಗೂ ಕನ್ನಡ ಭಾಷೆಯ ಇತಿಹಾಸ ಸಾರುತ್ತಿವೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಶಿವರಾಯಪ್ಪ, ಕನ್ನಡ ವಿಭಾಗದ ಮುಖ್ಯಸ್ಥ ವಿನಯ್, ಆಕಾಶವಾಣಿ ಕಲಾವಿದ ಗುರುಮೂರ್ತಿ, ಡಾ. ಜೋಶಿ, ಯೋಗೇಶ್, ರಾಘವೇಂದ್ರ ಮೇಸ್ತ, ಕಿರಣಕುಮಾರ್, ರವಿ ಕಲ್ಲಂಬಿ, ರಾಜಶೇಖರ ಗೌಡ, ಮಂಜುನಾಥ್, ರೇವಣಪ್ಪ, ಪವಿತ್ರಾ, ಸೌಂದರ್ಯ, ಸ್ವಪ್ನಾ, ಸಂಜಯ್ ಇತರರಿದ್ದರು.