ಸೊರಬದ ಶ್ರೀ ಕಲ್ಲೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀ ಸುರಭಿ ಯೋಗ ಶಾಖೆಯಿಂದ ಏರ್ಪಡಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ರೇಖಾ ಚಾಲನೆ ನೀಡಿದರು. ರಾಜೇಶ್ವರಿ ಜಗದೀಶ್, ನಾಗರಾಜ್ ಗುತ್ತಿ, ಪೂರ್ಣಿಮಾ ಇತರರಿದ್ದರು. 
ಶಿವಮೊಗ್ಗ

ಮುಂದಿನ ಪೀಳಿಗೆಗೆ ದೊಡ್ಡ ಕೊಡುಗೆ

ಸೋಮಶೇಖರ ಎನ್
ಸೊರಬ: ಉತ್ತಮ ಆರೋಗ್ಯಕ್ಕೆ ಯೋಗ, ವ್ಯಾಯಾಮ ಮುಖ್ಯ ಆಗಿರುವಂತೆ ಪರಿಸರ ಸಂರಕ್ಷಣೆಯೂ ಮಹತ್ವದ್ದಾಗಿದೆ ಎಂದು ಶ್ರೀ ಸುರಭಿ ಯೋಗಶಾಖೆ ಶಿಕ್ಷಕಿ ರೇಖಾ ಶ್ರೀನಿವಾಸ ನಾವುಡ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ಶ್ರೀ ಕಲ್ಲೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀ ಸುರಭಿ ಯೋಗ ಶಾಖೆಯಿಂದ ಶನಿವಾರ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಾವು ವಾಸಿಸುವ ಸುತ್ತಮುತ್ತಲಿನ ಪರಿಸರದಲ್ಲಿ ಗಿಡಗಳನ್ನು ಬೆಳೆಸುವುದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಉತ್ತಮ ಪರಿಸರ ಮುಂದಿನ ಪೀಳಿಗೆಗೆ ನೀಡುವ ಬಹುದೊಡ್ಡ ಕೊಡುಗೆ ಎಂದರು. ಕಾನುಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ರಾಜೇಶ್ವರಿ ಜಗದೀಶ್, ಉದ್ಯಮಿ ನಾಗರಾಜ್ ಗುತ್ತಿ, ಪೂರ್ಣಿಮಾ, ಸುನೀತಾ, ಸಾವಿತ್ರಿ, ಮಮತಾ, ಸುಧಾ, ಪ್ರಜ್ವಲಾ, ಸಚಿನ್ ಇತರರಿದ್ದರು.