ರಿಪ್ಪನ್‌ಪೇಟೆಯಲ್ಲಿ ಕಾವ್ಯಾ ಅವರನ್ನು ಗ್ರಾಮ ಪಂಚಾಯಿತಿಯಿಂದ ಸನ್ಮಾನಿಸಲಾಯಿತು. ಧನಲಕ್ಷ್ಮೀ, ಸಂತೋಷ್ ಆಚಾರ್, ಸುಧೀಂದ್ರ ಪೂಜಾರಿ ಮತ್ತಿತರರಿದ್ದರು.
ರಿಪ್ಪನ್‌ಪೇಟೆ: ಕೊಲಂಬೋದಲ್ಲಿ ಆಯೋಜಿಸಿದ್ದ ಚೊಚ್ಚಲ ಮಹಿಳಾ ಅಂಧರ ಕ್ರಿಕೆಟ್ ಟಿ20 ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಿದ ಭಾರತ ತಂಡದ ಕ್ರೀಡಾಪಟು ಕಾವ್ಯಾ ಅವರಿಗೆ ಸ್ವಗ್ರಾಮ ರಿಪ್ಪನ್‌ಪೇಟೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಕಾವ್ಯಾ ಅವರ ಕುಟುಂಬದವರನ್ನು ವಿದ್ಯಾನಗರದಿಂದ ಮೆರವಣಿಗೆಯಲ್ಲಿ ಕರೆತರಲಾಯಿತು. ಡ್ರಮ್‌ಸೆಟ್, ಚಂಡೆ ವಾದನ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ಅಭಿಮಾನಿಗಳು ಕ್ರೀಡಾಪಟುವಿಗೆ ಜೈಕಾರ ಹಾಕಿ ಸಂಭ್ರಮಿಸಿದರು. ಗ್ರಾಪಂ, ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸನ್ಮಾನಿಸಿದರು.
ಜನರ ಅಭಿಮಾನ ಕಂಡು ಕ್ರೀಡಾಪಟು ಕಾವ್ಯಾ ಸಂತಸ ವ್ಯಕ್ತಪಡಿಸಿದರು. ಸ್ನೇಹಿತರು, ಶಿಕ್ಷಕರು, ವಿದ್ಯಾರ್ಥಿಗಳು, ಕ್ರೀಡಾಸಕ್ತರು ಅಭಿನಂದನೆ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ. ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಸಂತೋಷ್ ಆಚಾರ್, ಗೌರವಾಧ್ಯಕ್ಷ ದೇವದಾಸ ಆಚಾರ್, ಹೋಬಳಿ ಅಧ್ಯಕ್ಷ ಶ್ರೀನಿವಾಸ್ ಆಚಾರ್, ವಿಶ್ವನಾಥ್ ಆಚಾರ್, ಹಸನಬ್ಬ, ಗಣಪತಿ, ಸಾರಭಿ, ಮಹಾಲಕ್ಷ್ಮೀ, ನಿರುಪಮಾ ಇತರರಿದ್ದರು.